‘ವಂಚನೆ ಹಣದಲ್ಲಿ ಗಿಫ್ಟ್ ಕೊಟ್ಟ ಅಂತ ನನಗೆ ಗೊತ್ತಿರಲಿಲ್ಲ’: ಜಾಕ್ವೆಲಿನ್ ವಾದ

200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್​ ಜೈಲು ಸೇರಿದ್ದಾನೆ. ಆತನ ಜೊತೆ ನಂಟು ಹೊಂದಿದ್ದಕ್ಕಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಅವರಿಗೂ ಸಂಕಷ್ಟ ಎದುರಾಗಿದೆ. ನಟಿಯ ವಿರುದ್ಧ ಚಾರ್ಜ್​ಶೀಟ್​ ಹಾಕಲಾಗಿದ್ದು, ಅದನ್ನು ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟ್​ ಮೆಟ್ಟಿಲು ಏರಿದ್ದಾರೆ. ಈ ಕೇಸ್​ನ ವಿಚಾರಣೆ ನಡೆದಿದೆ. ನಟಿಯ ಪರ ವಕೀಲರು ವಾದ ಮಂಡನೆ ಮಾಡಿದ್ದಾರೆ.

‘ವಂಚನೆ ಹಣದಲ್ಲಿ ಗಿಫ್ಟ್ ಕೊಟ್ಟ ಅಂತ ನನಗೆ ಗೊತ್ತಿರಲಿಲ್ಲ’: ಜಾಕ್ವೆಲಿನ್ ವಾದ
ಜಾಕ್ವೆಲಿನ್ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​
Follow us
ಮದನ್​ ಕುಮಾರ್​
|

Updated on: Nov 14, 2024 | 5:05 PM

ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಜಾಕ್ವೆಲಿನ್ ಫಾರ್ನಾಂಡಿಸ್ ಅವರಿಗೆ ಕೇಸ್​ಗಳ ತಲೆ ಬಿಸಿ ಜಾಸ್ತಿ ಆಗಿದೆ. ವಂಚಕ ಸುಕೇಶ್ ಚಂದ್ರಶೇಖರ್​ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಆಪ್ತವಾಗಿದ್ದರು. ಅದಕ್ಕೆ ಅನೇಕ ಫೋಟೋಗಳು ಸಾಕ್ಷಿ ಒದಗಿಸಿವೆ. ಸುಕೇಶ್​ ಕೊಟ್ಟಿದ್ದ ಐಷಾರಾಮಿ ಉಡುಗೊರೆಗಳನ್ನು ಕೂಡ ಜಾಕ್ವೆಲಿನ್ ಪಡೆದಿದ್ದರು. ಅವುಗಳಿಗೆ ಸಂಬಂಧಿಸಿದಂತೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿದ್ದು, ಅದನ್ನು ಪ್ರಶ್ನಿಸಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆದಿದೆ.

ತಮ್ಮ ವಿರುದ್ಧ ಸಲ್ಲಿಕೆ ಆಗಿರುವ ಚಾರ್ಜ್​ಶೀಟ್​ ರದ್ದು ಮಾಡಬೇಕು ಎಂಬುದು ಜಾಕ್ವೆಲಿನ್ ಫರ್ನಾಂಡಿಸ್ ಅವರ ಮನವಿ. ಇದಕ್ಕೆ ಸಂಬಂಧಿಸಿದಂತೆ ಅವರ ವಾದ ಏನು ಎಂಬುದನ್ನು ವಕೀಲರು ತಿಳಿಸಿದ್ದಾರೆ. ಅಂದಾಜು 200 ಕೋಟಿ ರೂಪಾಯಿ ಸುಲಿಗೆ ಮತ್ತು ವಂಚನೆ ಕೇಸ್​ನಲ್ಲಿ ಸುಕೇಶ್​ ಅಂದರ್​ ಆಗಿದ್ದಾನೆ. ಆದರೆ ಆತ ವಂಚನೆಯಿಂದ ತಂದ ದುಡ್ಡಿನಲ್ಲಿ ತಮಗೆ ಗಿಫ್ಟ್​ ಕೊಟ್ಟಿದ್ದ ಎಂಬ ವಿಚಾರ ತಿಳಿದಿರಲಿಲ್ಲ ಎಂದಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್.

ಎಲ್ಲವೂ ಚೆನ್ನಾಗಿ ಇದ್ದಾಗ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಚಂದ್ರಶೇಖರ್ ಜೊತೆ ಸ್ನೇಹ ಬೆಳೆಸಿದ್ದರು. ಇಬ್ಬರೂ ಆಪ್ತವಾಗಿ ಕಾಣಿಸಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವು. ಇದರಿಂದಾಗಿ ನಟಿಗೆ ಮುಜುಗರ ಆಯಿತು. ಹೇಗಾದರೂ ಮಾಡಿ ಈ ಕೇಸ್​ನಿಂದ ಹೊರಗೆ ಬರಬೇಕು ಎಂದು ಜಾಕ್ವೆಲಿನ್ ಫರ್ನಾಂಡಿಸ್ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಜನ್ಮದಿನಕ್ಕೆ ಹಾಲಿಡೇ ಹೋಗೋಣ’; ಜೈಲಿನಿಂದಲೇ ಜಾಕ್ವೆಲಿನ್​ಗೆ ಭರವಸೆ ನೀಡಿದ ಸುಕೇಶ್ ಚಂದ್ರಶೇಖರ್  

ಜೈಲಿನಲ್ಲಿ ಇದ್ದುಕೊಂಡೇ ಸುಕೇಶ್ ಚಂದ್ರಶೇಖರ್​ ತನ್ನ ಪ್ರೀತಿ-ಪ್ರೇಮದ ಆಟವನ್ನು ಮುಂದುವರಿಸಿದ್ದಾನೆ. ಜಾಕ್ವೆಲಿನ್ ಫರ್ನಾಂಡಿಸ್​ಗೆ ಆತ ಜೈಲಿನಿಂದಲೇ ಪತ್ರ ಬರೆಯುತ್ತಾನೆ. ಅನೇಕ ಬಾರಿ ಆತ ಪತ್ರ ಕಳಿಸಿದ್ದಾನೆ. ಅದರ ಪ್ರತಿ ವೈರಲ್ ಆಗಿದೆ. ನಟಿಯ ಅಭಿಮಾನಿಗಳಿಗೆ ಕೂಡ ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಇತ್ತೀಚೆಗೆ ಸುಕೇಶ್ ಚಂದ್ರಶೇಖರ್ ಹೇಳಿದ್ದ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.