66ನೇ ವಯಸ್ಸಿನಲ್ಲೂ ‘ಶಕ್ತಿಮಾನ್’ ಪಾತ್ರ ಮಾಡುವ ಆಸೆ; ಟ್ರೋಲ್ ಆದ ನಟ

ಹಿಂದಿ ಕಿರುತೆರೆಯಲ್ಲಿ ‘ಶಕ್ತಿಮಾನ್’ ಸೀರಿಯಲ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. ‘ದೂರದರ್ಶನ’ ವಾಹಿನಿಯಲ್ಲಿ ಪ್ರಸಾರವಾದ ಆ ಧಾರಾವಾಹಿಯಲ್ಲಿ ಮುಖೇಶ್ ಖನ್ನಾ ಅವರು ಶಕ್ತಿಮಾನ್ ಪಾತ್ರ ಮಾಡಿದ್ದರು. ಆಗ ಅವರಲ್ಲಿ ಯೌವನ ಇತ್ತು. ಆದರೆ ಈಗ ಅವರಿಗೆ 66 ವರ್ಷ ವಯಸ್ಸು ಆಗಿದೆ. ಈಗಲೂ ತಾನೇ ಶಕ್ತಿಮಾನ್ ಆಗ್ತೀನಿ ಎಂದು ಅವರು ಹಠ ಮಾಡುತ್ತಿದ್ದಾರೆ.

66ನೇ ವಯಸ್ಸಿನಲ್ಲೂ ‘ಶಕ್ತಿಮಾನ್’ ಪಾತ್ರ ಮಾಡುವ ಆಸೆ; ಟ್ರೋಲ್ ಆದ ನಟ
ಮುಖೇಶ್ ಖನ್ನಾ
Follow us
ಮದನ್​ ಕುಮಾರ್​
|

Updated on: Nov 14, 2024 | 6:33 PM

1997ರಿಂದ 2005ನೇ ಇಸವಿ ತನಕ ‘ಶಕ್ತಿಮಾನ್’ ಸೀರಿಯಲ್ ಪ್ರಸಾರ ಆಗಿತ್ತು. ಆ ಪಾತ್ರವನ್ನು ಮಾಡುವ ಮೂಲಕ ಮುಖೇಶ್ ಖನ್ನಾ ಅವರು ಅಪಾರ ಖ್ಯಾತಿ ಗಳಿಸಿದ್ದರು. ಭಾರತದ ಸೂಪರ್​ ಹೀರೋ ‘ಶಕ್ತಿಮಾನ್’ ಪಾತ್ರವನ್ನು ಇಟ್ಟುಕೊಂಡು ಈಗ ಹೊಸ ಸಿನಿಮಾ ಮಾಡಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ‘ಶಕ್ತಿಮಾನ್’ ಸಿನಿಮಾ ಸಿದ್ಧವಾಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡ ಆಗುತ್ತಿದೆ. ಈಗ ಯಾರು ಶಕ್ತಿಮಾನ್ ಪಾತ್ರವನ್ನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಅಚ್ಚರಿ ಏನೆಂದರೆ, ಮತ್ತೆ ತಾವೇ ಆ ಪಾತ್ರವನ್ನು ಮಾಡಲು ಮುಖೇಶ್​ ಖನ್ನಾ ಮುಂದಾಗಿದ್ದಾರೆ. ಇತ್ತೀಚೆಗೆ ಅವರು ಈ ಬಗ್ಗೆ ಅನೌನ್ಸ್ ಮಾಡಿದರು.

ಈ ಮೊದಲು ರಣವೀರ್​ ಸಿಂಗ್​, ಟೈಗರ್​ ಶ್ರಾಫ್ ಮುಂತಾದ ಕಲಾವಿದರ ಹೆಸರುಗಳನ್ನು ಪರಿಗಣಿಸಲಾಗಿತ್ತು. ಆದರೆ ಆ ನಟರ ಇಮೇಜ್​ನಿಂದ ‘ಶಕ್ತಿಮಾನ್’ ಪಾತ್ರಕ್ಕೆ ಅಗೌರವ ತೋರಿದಂತೆ ಆಗುತ್ತದೆ ಎಂದು ಮುಖೇಶ್ ಖನ್ನಾ ಅವರು ಅಡ್ಡಗಾಲು ಹಾಕಿದರು. ಅವರಿಂದಾಗಿ ಈ ಸಿನಿಮಾ ವಿಳಂಬ ಆಗುತ್ತಿದೆ. ಹಾಗಾಗಿ ಪ್ರೇಕ್ಷಕರು ಮುಖೇಶ್ ಖನ್ನಾ ಮೇಲೆ ಮುನಿಸು ತೋರಿಸುತ್ತಿದ್ದಾರೆ.

ಇನ್ನು, ಸೂಪರ್​ ಹೀರೋ ಪಾತ್ರವನ್ನು ಮಾಡುವ ನಟ ಯಂಗ್ ಆಗಿದ್ದರೆ ಉತ್ತಮ. ಆಗ ತೆರೆ ಮೇಲೆ ಆ ಪಾತ್ರ ರಿಯಲಿಸ್ಟಿಕ್ ಆಗಿ ಮೂಡಿಬರುತ್ತದೆ. ಆದರೆ ಮುಖೇಶ್ ಖನ್ನಾ ಅವರು ಬೇರೆ ಎಲ್ಲ ಯುವ ನಟರನ್ನು ಬಿಟ್ಟು, 66ನೇ ವಯಸ್ಸಿನಲ್ಲೇ ತಾನೇ ಶಕ್ತಿಮಾನ್ ಆಗುತ್ತೇನೆ ಎಂದು ಪಟ್ಟು ಹಿಡಿದಿರುವುದರಿಂದ ನೆಟ್ಟಿಗರು ಬೇಸತ್ತಿದ್ದಾರೆ. ‘ಅಯ್ಯೋ ಸಾಕು ಬಿಡು ಮಾರಾಯ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಬೆತ್ತಲೆಯಾದ ನಟ ಶಕ್ತಿಮಾನ್​ ಆಗೋದು ಬೇಡ’: ಖಡಕ್​ ಆಗಿ ಹೇಳಿದ ಮುಖೇಶ್​ ಖನ್ನಾ

ಎಷ್ಟೇ ಟ್ರೋಲ್ ಆದರೂ ಕೂಡ ಮುಖೇಶ್ ಖನ್ನಾ ಅವರು ಹಿಂಜರಿಯುತ್ತಿಲ್ಲ. ತಮ್ಮ ಹೇಳಿಕೆಗಳಿಗೆ ಅವರು ಸಮರ್ಥನೆ ನೀಡುತ್ತಲೇ ಇದ್ದಾರೆ. ಆ ಸಮರ್ಥನೆಗಳನ್ನು ಇಟ್ಟುಕೊಂಡು ಕೂಡ ಜನರು ಮತ್ತೆ ಟ್ರೋಲ್ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮುಖೇಶ್ ಖನ್ನಾ ಮನಸ್ಸು ಬದಲಾಯಿಸಿ ಬೇರೆ ನಟರಿಗೆ ಅವಕಾಶ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಜಮೀರ್ ಅಹ್ಮದ್ ಮಾಡಿದ ಕಾಮೆಂಟ್​​ಗೆ ನಾವ್ಯಾರೂ ಪ್ರತಿಕ್ರಿಯಿಸಿಲ್ಲ: ನಿಖಿಲ್
ಮೊದಲ ಎಸೆತದಲ್ಲೇ ಸಿಕ್ಸರ್: ಸೂರ್ಯನ ದಾಖಲೆ ಸರಿಗಟ್ಟಿದ ರಮಣದೀಪ್
ಮೊದಲ ಎಸೆತದಲ್ಲೇ ಸಿಕ್ಸರ್: ಸೂರ್ಯನ ದಾಖಲೆ ಸರಿಗಟ್ಟಿದ ರಮಣದೀಪ್
ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ: ಚಲುವರಾಯಸ್ವಾಮಿ
ಚನ್ನಪಟ್ಟಣದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದಿದೆ: ಚಲುವರಾಯಸ್ವಾಮಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಅಂತ ನೆಹರೂ ಅರಿತಿದ್ದರು: ಡಿಕೆಶಿ
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಬಿಬಿಎಂಪಿ ಶಾಲಾಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದ ಡಿಕೆ ಶಿವಕುಮಾರ್
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
ಜನರ ಭಾವನೆಗಳಿಗೆ ವಿರುದ್ಧವಾಗಿ ಸಿದ್ದರಾಮಯ್ಯ ಮಾತಾಡುತ್ತಾರೆ: ಸೋಮಣ್ಣ
"ನಾನಾಗಿದ್ದರೆ ಸಿದ್ದರಾಮಯ್ಯ ಕಪಾಳಕ್ಕೆ ಹೊಡೆಯುತ್ತಿದ್ದೆ": ಸ್ವಾಮೀಜಿ