ಅಳಿಯ ಕೆಎಲ್ ರಾಹುಲ್ ಜೊತೆಗೂಡಿ ಜಮೀನು ಖರೀದಿಸಿದ ನಟ ಸುನಿಲ್ ಶೆಟ್ಟಿ

KL Rahul and Sunil Shetty: ನಟ ಸುನಿಲ್ ಶೆಟ್ಟಿ ತಮ್ಮ ಅಳಿಯ ಕ್ರಿಕೆಟಿಗ ಕೆಎಲ್ ರಾಹುಲ್ ಬಗ್ಗೆ ಅಪಾರ ಪ್ರೀತಿ, ಗೌರವ ಇರಿಸಿಕೊಂಡಿದ್ದಾರೆ. ಪಾಡ್​ಕಾಸ್ಟ್​ಗಳಲ್ಲಿ ಅಳಿಯ ಕೆಎಲ್ ರಾಹುಲ್ ಬಗ್ಗೆ ಹಲವು ಬಾರಿ ಹೊಗಳಿದ್ದಾರೆ. ಇದೀಗ ಕೆಎಲ್ ರಾಹುಲ್ ಜೊತೆಗೆ ಸೇರಿಕೊಂಡು ಮುಂಬೈ ಹೊರವಲಯದಲ್ಲಿ ದೊಡ್ಡ ಜಮೀನು ಖರೀದಿ ಮಾಡಿದ್ದಾರೆ.

ಅಳಿಯ ಕೆಎಲ್ ರಾಹುಲ್ ಜೊತೆಗೂಡಿ ಜಮೀನು ಖರೀದಿಸಿದ ನಟ ಸುನಿಲ್ ಶೆಟ್ಟಿ
Kl Rahul

Updated on: Apr 16, 2025 | 12:55 PM

ಕರ್ನಾಟಕ ಮೂಲದ ಬಾಲಿವುಡ್ (Bollywood) ನಟ ಸುನಿಲ್ ಶೆಟ್ಟಿ (Sunil Shetty), ಈಗಲೂ ಸಹ ಬಾಲಿವುಡ್​ನಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಅದರ ಜೊತೆಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸುತ್ತಿರುತ್ತಾರೆ. ಸುನಿಲ್ ಶೆಟ್ಟಿ ಅವರ ಅಳಿಯ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಕೆಎಲ್ ರಾಹುಲ್. ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ವಿವಾಹ 2023 ರ ಜನವರಿ 23 ರಂದು ಮುಂಬೈನ ಸುನಿಲ್ ಶೆಟ್ಟಿ ಅವರ ಫಾರಂ ಹೌಸ್​ನಲ್ಲಿಯೇ ಬಲು ಅದ್ಧೂರಿಯಾಗಿ ನೆರವೇರಿತ್ತು. ಕ್ರಿಕೆಟ್ ಮತ್ತು ಸಿನಿಮಾ ಲೋಕದ ಹಲವರು ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಸುನಿಲ್ ಶೆಟ್ಟಿಗೆ ಅಳಿಯ ಕೆಎಲ್ ರಾಹುಲ್ ಮೇಲೆ ಬಹಳ ಪ್ರೀತಿ ಮತ್ತು ಗೌರವ. ಈ ಹಿಂದೆ ಕೆಲ ಸಂದರ್ಶನಗಳಲ್ಲಿ ಕೆಎಲ್ ರಾಹುಲ್ ಬಗ್ಗೆ ಬಹಳ ಹೆಮ್ಮೆಯಿಂದ ಅವರು ಮಾತನಾಡಿದ್ದಾರೆ. ಕೆಎಲ್ ರಾಹುಲ್ ಮದುವೆ ಆಗುವ ಮುಂಚೆಯೇ ಅವರು ಮುಂಬೈನಲ್ಲಿ ಒಂದು ಐಶಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದರು. ಅಸಲಿಗೆ ಇದು ಸುನಿಲ್ ಶೆಟ್ಟಿಯವರೇ ಅಳಿಯನಿಗೆ ನೀಡಿದ್ದ ಉಡುಗೊರೆ ಎಂಬ ಸುದ್ದಿಯೂ ಆಗ ಹರಿದಾಡಿತ್ತು. ಇದೀಗ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಇಬ್ಬರೂ ಜೊತೆಗೂಡಿ ಮುಂಬೈ ಬಳಿ ದೊಡ್ಡ ಜಮೀನೊಂದನ್ನು ಖರೀದಿ ಮಾಡಿದ್ದಾರೆ.

ಮುಂಬೈನ ಹೊರವಲಯದಲ್ಲಿರುವ ಥಾಣೆಯ ದಕ್ಷಿಣ ಭಾಗದ ದುಬಾರಿ ಏರಿಯಾನಲ್ಲಿ ಬರೋಬ್ಬರಿ ಏಳು ಎಕರೆ ಜಾಗವನ್ನು ಕೋಟ್ಯಂತರ ರೂಪಾಯಿ ಹಣ ನೀಡಿ ಖರೀದಿ ಮಾಡಿದ್ದಾರೆ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ. ಥಾಣೆ ವೆಸ್ಟ್​​ನ ಒವಾಲೆಯಲ್ಲಿ 30 ಎಕರೆ 17 ಗುಂಟೆಗಳ ದೊಡ್ಡ ಫ್ಲಾಟ್ ಇದ್ದು, ಈ ಫ್ಲಾಟ್​ನಲ್ಲಿ ಏಳು ಎಕರೆ ಜಾಗವನ್ನು ಸುನಿಲ್ ಶೆಟ್ಟಿ ಮತ್ತು ಕೆಎಲ್ ರಾಹುಲ್ ಜಂಟಿಯಾಗಿ ಖರೀದಿ ಮಾಡಿದ್ದಾರೆ. ಏಳು ಎಕರೆ ಜಾಗಕ್ಕೆ 9.85 ಕೋಟಿ ರೂಪಾಯಿ ಹಣವನ್ನು ರಾಹುಲ್ ಮತ್ತು ಸುನಿಲ್ ಶೆಟ್ಟಿ ನೀಡಿದ್ದಾರೆ. ಜಾಗದ ನೊಂದಾವಣಿಗೆ 68.96 ಲಕ್ಷ ಸ್ಟ್ಯಾಂಪ್ ಡ್ಯೂಟಿ ಮತ್ತು 30 ಸಾವಿರ ರೂಪಾಯಿ ಶುಲ್ಕವನ್ನು ನೀಡಿದ್ದಾರೆ.

ಇದನ್ನೂ ಓದಿ
ಅನುಮತಿ ಇಲ್ಲದೆ ಚಿತ್ರೀಕರಣ, ರಾಣಾ ಸಿನಿಮಾ ಮೇಲೆ ಅರಣ್ಯ ಇಲಾಖೆಯಿಂದ ದಾಳಿ
ಪ್ರಭಾಸ್ ಕಾರಣದಿಂದ ರಿಷಬ್ ಶೆಟ್ಟಿ ಸಿನಿಮಾ ಮೇಲೆ ಕರಿನೆರಳು
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
ಮೊಮ್ಮಗ ಮಾಡಿದ ಸಾಲದಿಂದ ಹರಾಜಿಗೆ ಬಂತು ಶಿವಾಜಿ ಗಣೇಶನ್ ಮನೆ

ಇದನ್ನೂ ಓದಿ:ಆರ್​ಸಿಬಿ ಮಣಿಸಿ ಕಾಂತಾರ ಬಗ್ಗೆ ಮಾತಾಡಿದ ಕೆಎಲ್ ರಾಹುಲ್

ಈಗ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಖರೀದಿ ಮಾಡಿರುವ ಸ್ಥಳ ಬ್ಯುಸಿ ರಸ್ತೆಯಾದ ಗೋದ್ಬಂಡರ್ ರಸ್ತೆಯ ಬಳಿ ಇದ್ದು, ಈಗ ಖರೀದಿ ಮಾಡಿರುವ ಸ್ಥಳ ಆನಂದ್ ನಗರ ಮತ್ತು ಕಾಸರವಾಡವಲಿಗೆ ಮಧ್ಯದಲ್ಲಿದೆ. ಹೊಸದಾಗಿ ಆಗಿರುವ ವೆಸ್ಟರ್ನ್ ಎಕ್ಸ್​ಪ್ರೆಸ್ ಹೈವೇಗೆ ಸಹ ಬಹಳ ಸನಿಹದಲ್ಲೇ ಇದ್ದು, ಮುಂದಿನ ದಿನಗಳಲ್ಲಿ ಈ ಜಾಗ ಬಹಳ ಪ್ರಗತಿ ಕಾಣಲಿದೆ ಎನ್ನಲಾಗುತ್ತಿದೆ. ಸುನಿಲ್ ಶೆಟ್ಟಿ ಅವರು ಅಳೆದು ತೂಗಿ ಒಳ್ಳೆಯ ಕಡೆಗೆ ಜಮೀನು ಖರೀದಿ ಮಾಡಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಸುನಿಲ್ ಶೆಟ್ಟಿ ಅವರು ತಮ್ಮ ಪುತ್ರ ಅಹಾನ್ ಶೆಟ್ಟಿ ಅವರೊಟ್ಟಿಗೆ ಜಂಟಿಯಾಗಿ 8.01 ಕೋಟಿ ಖರ್ಚು ಮಾಡಿ ಖಾರ್ ವೆಸ್ಟ್​ನಲ್ಲಿ ಜಾಗ ಖರೀದಿ ಮಾಡಿದ್ದಾರೆ. ಈಗ ಅಳಿಯನೊಟ್ಟಿಗೆ ಸೇರಿ ಜಾಗ ಖರೀದಿ ಮಾಡಿದ್ದಾರೆ.

ಕೆಎಲ್ ರಾಹುಲ್ ಇತ್ತೀಚೆಗಷ್ಟೆ ಮಗುವಿನ ತಂದೆಯಾಗಿದ್ದಾರೆ. ಸುನಿಲ್ ಶೆಟ್ಟಿ ತಾತ ಆಗಿದ್ದಾರೆ. ರಾಹುಲ್ ಇದೀಗ ಐಪಿಎಲ್ ಆಡುತ್ತಿದ್ದು, ಅವರು ದೆಹಲಿ ತಂಡದ ನಾಯಕ. ಇತ್ತೀಚೆಗಷ್ಟೆ ಆರ್​ಸಿಬಿ ಮೇಲೆ ಅದ್ಭುತ ಜಯ ಸಾಧಿಸಿದ್ದಾರೆ. ಇನ್ನು ಸುನಿಲ್ ಶೆಟ್ಟಿ ಅವರು ಹಿಂದಿಯ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಾಜಿ ಬಿಗ್​ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ನಟನೆಯ ತುಳು ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ