ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಸುಮಧರ ಗೀತೆಗಳ ಮೂಲಕ ಅವರು ಎಂದೆಂದಿಗೂ ಅಭಿಮಾನಿಗಳ ಮನದೊಳಗೆ ಜೀವಂತವಾಗಿ ಇರುತ್ತಾರೆ. ಇಂದು (ಸೆ.28) ಅವರ ಜನ್ಮದಿನ. ಲತಾ ಮಂಗೇಶ್ಕರ್ ಅವರ 93ನೇ ವರ್ಷ ಹುಟ್ಟುಹಬ್ಬವನ್ನು (Lata Mangeshkar Birthday) ಅಭಿಮಾನಿಗಳು ಆಚರಿಸುತ್ತಿದ್ದಾರೆ. ಚಿತ್ರರಂಗಕ್ಕೆ ಲತಾಜೀ ನೀಡಿದ ಕೊಡುಗೆ ಅಪಾರ. ಹಾಗಾಗಿ ವಿವಿಧ ರೀತಿಯಲ್ಲಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ. ಲೆಕ್ಕವಿಲ್ಲದಷ್ಟು ಗೀತೆಗಳ (Lata Mangeshkar Songs) ಮೂಲಕ ಲತಾ ಮಂಗೇಶ್ಕರ್ ಅವರು ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆ ಮಹಾನ್ ಗಾಯಕಿಯ ಜನ್ಮದಿನಕ್ಕೆ ಅಭಿಮಾನಿಗಳಿಂದ, ಗಣ್ಯರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ಲಕ್ಷಾಂತರ ಗಾಯಕರಿಗೆ ಲತಾ ಮಂಗೇಶ್ಕರ್ ಸ್ಫೂರ್ತಿ. ಅವರಂತೆಯೇ ಸಾಧನೆ ಮಾಡಬೇಕು ಎಂದು ಕನಸು ಕಂಡವರಿಗೆ ಲೆಕ್ಕವಿಲ್ಲ. ಲತಾಜೀ ಅವರ ಗೀತೆಗಳನ್ನು ಹಾಡುವ ಮತ್ತು ಕೇಳುವ ಮೂಲಕ ಅವರನ್ನು ಇಂದು ನೆನಪಿಸಿಕೊಳ್ಳಲಾಗುತ್ತಿದೆ. ಅಭಿಮಾನಿಗಳು ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಹಿಂದಿ ಚಿತ್ರರಂಗದ ಅನೇಕರು ಲತಾಜೀ ಜನ್ಮದಿನಕ್ಕೆ ಶುಭ ಕೋರುತ್ತಿದ್ದಾರೆ.
‘ಯಶ್ ರಾಜ್ ಫಿಲ್ಮ್ಸ್’, ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್’, ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಸೇರಿದಂತೆ ಅನೇಕ ನಿರ್ಮಾಣ ಸಂಸ್ಥೆಗಳು ಲತಾ ಮಂಗೇಶ್ಕರ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿವೆ.
Remembering the musical Goddess on her Birth anniversary!#LataMangeshkar #Lataji #LataDidi #BirthAnniversay #RedChilliesEntertainment #Music #Versatile #Legend #Evergreen pic.twitter.com/F06Ge1vLPh
— Red Chillies Entertainment (@RedChilliesEnt) September 28, 2022
Today we remember the nightingale of Bollywood #LataMangeshkar ji, a voice that continues to make hearts sing! pic.twitter.com/mGajQSjka8
— Dharma Productions (@DharmaMovies) September 28, 2022
Remembering Lata Didi on her birth anniversary. There is so much that I recall…the innumerable interactions in which she would shower so much affection. I am glad that today, a Chowk in Ayodhya will be named after her. It is a fitting tribute to one of the greatest Indian icons.
— Narendra Modi (@narendramodi) September 28, 2022
ಪ್ರಧಾನಿ ನರೇಂದ್ರ ಮೋದಿ ಕೂಡ ಲತಾಜೀ ಕುರಿತು ವಿಶೇಷ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಒಂದು ಚೌಕಕ್ಕೆ ಲತಾ ಮಂಗೇಶ್ಕರ್ ಅವರ ಹೆಸರು ಇಡಲಾಗಿದೆ. ಅಲ್ಲಿ ಬೃಹತ್ ವೀಣೆಯನ್ನು ನಿರ್ಮಿಸಲಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಅದನ್ನು ಅನಾವರಣ ಮಾಡಲಿದ್ದಾರೆ. 40 ಅಡಿ ಉದ್ದ, 12 ಮೀಟರ್ ಎತ್ತರದ ಈ ವೀಣೆ ಎಲ್ಲರ ಗಮನ ಸೆಳೆಯುತ್ತಿದೆ.
ಲತಾ ಮಂಗೇಶ್ಕರ್ ಜನಿಸಿದ್ದು 1929ರ ಸೆಪ್ಟೆಂಬರ್ 28ರಂದು. 7 ದಶಕಗಳ ಕಾಲ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದರು. ಈ ವರ್ಷ ಫೆಬ್ರವರಿ 6ರಂದು ಅವರು ತೀವ್ರ ಅನಾರೋಗ್ಯದಿಂದ ನಿಧನರಾದರು. ಎಷ್ಟೇ ವರ್ಷ ಉರುಳಿದರೂ ಅವರ ಹಾಡುಗಳು ಶಾಶ್ವತವಾಗಿ ಇರಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:19 am, Wed, 28 September 22