ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರನ್ನು ಕಳೆದುಕೊಂಡು ಇಡೀ ಚಿತ್ರರಂಗಕ್ಕೆ ಕಂಬನಿ ಮಿಡಿಯುತ್ತಿದೆ. ಕೊರೊನಾ ಮತ್ತು ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಇಂದು (ಫೆ.6) ನಿಧನರಾದರು. ಈ ಸುದ್ದಿ ತಿಳಿದು ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಮರುಗಿದ್ದಾರೆ. ಲತಾ ಮಂಗೇಶ್ಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಜನವರಿ ಮೊದಲ ವಾರದಲ್ಲಿ ಲತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 29 ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅವರಿಗೆ 92 ವರ್ಷ ವಯಸ್ಸಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸುವುದು ಕಷ್ಟವಾಯಿತು. ಹಲವು ದಿನಗಳ ಕಾಲ ಅವರು ಐಸಿಯುನಲ್ಲಿದ್ದರು. ವೈದ್ಯರ ಸತತ ಪ್ರಯತ್ನದ ನಡುವೆಯೂ ಲತಾ ಮಂಗೇಶ್ಕರ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎ.ಆರ್. ರೆಹಮಾನ್ (AR Rehman)), ಸೋನು ನಿಗಮ್, ಕಂಗನಾ ರಣಾವತ್, ಅನಿಲ್ ಕಪೂರ್, ಅಕ್ಷಯ್ ಕುಮಾರ್, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಲತಾ ಮಂಗೇಶ್ಕರ್ ನಿಧನಕ್ಕೆ (Lata Mangeshkar Death) ಸಂತಾಪ ಸೂಚಿಸಿದ್ದಾರೆ.
‘ತುಂಬ ಬೇಸರವಾಗಿದೆ. ನಮ್ಮ ಹೃದಯದಲ್ಲಿ ಲತಾಜೀ ಶಾಶ್ವತವಾಗಿ ಇರುತ್ತಾರೆ. ಅವರನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಸಂಗೀತದಿಂದಾಗಿ ಅವರು ತಮ್ಮ ಜೀವನದ ಮೇಲೆ ಅಷ್ಟು ಪ್ರಭಾವ ಬೀರಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅನಿಲ್ ಕಪೂರ್ ಟ್ವೀಟ್ ಮಾಡಿದ್ದಾರೆ. ‘ಓರ್ವ ಲೆಜೆಂಡರಿ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಇದು ಇಡೀ ದೇಶಕ್ಕೆ ದೊಡ್ಡ ನಷ್ಟ. ಹಲವು ತಲೆಮಾರಿನ ಜನರು ನಿಮ್ಮನ್ನು ನೆನಪಿಟ್ಟುಕೊಳ್ಳುತ್ತಾರೆ’ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.
Heartbroken, but blessed to have known & loved this incredible soul…Lataji holds a place in our hearts that will never be taken by anyone else. That’s how profoundly she has impacted our lives with her music.
May she rest in peace & light up the heavens with her brightness ?? pic.twitter.com/HjgIQyE7mo— Anil Kapoor (@AnilKapoor) February 6, 2022
‘ಓರ್ವ ಲೆಜೆಂಡ್, ಓರ್ವ ಐಕಾನ್. ಇವರ ಬಗ್ಗೆ ಮಾತನಾಡಲು ಪದಗಳು ಸಾಕಾಗುವುದಿಲ್ಲ. ನಿಮ್ಮ ಸುಮಧುರ ಕಂಠಕ್ಕಾಗಿ ಧನ್ಯವಾದಗಳು ಲತಾಜೀ’ ಎಂದು ಶಾಹಿದ್ ಕಪೂರ್ ಟ್ವೀಟ್ ಮಾಡಿದ್ದಾರೆ. ‘ಇಂಥ ಧ್ವನಿಯನ್ನು ಯಾರು ಮರೆಯಲು ಸಾಧ್ಯ? ಲತಾ ಮಂಗೇಶ್ಕರ್ ಅವರ ನಿಧನದ ಸುದ್ದಿ ತಿಳಿದು ತೀವ್ರ ನೋವಾಗಿದೆ. ಅವರಿಗಾಗಿ ನನ್ನ ಪ್ರಾಮಾಣಿಕ ಪ್ರಾರ್ಥನೆ ಮತ್ತು ಸಂತಾಪಗಳು. ಓಂ ಶಾಂತಿ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
Meri Awaaz Hi Pehchaan Hain, Gar Yaad Rahe…and how can one forget such a voice!
Deeply saddened by the passing away of Lata Mangeshkar ji, my sincere condolences and prayers. Om Shanti ??— Akshay Kumar (@akshaykumar) February 6, 2022
ಲತಾ ಮಂಗೇಶ್ಕರ್ ಜೊತೆಗೆ ತಾವಿರುವ ಫೋಟೋವನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಪೋಸ್ಟ್ ಮಾಡಿದ್ದಾರೆ. ‘ಪ್ರೀತಿ, ಗೌರವ ಮತ್ತು ಪ್ರಾರ್ಥನೆಗಳು’ ಎಂದು ಆ ಫೋಟೋಗೆ ಅವರು ಕ್ಯಾಪ್ಷನ್ ನೀಡಿದ್ದಾರೆ.
Love, respect and prayers ? @mangeshkarlata pic.twitter.com/PpJb1AdUdc
— A.R.Rahman (@arrahman) February 6, 2022
ಕನ್ನಡದ ಸೆಲೆಬ್ರಿಟಿಗಳಾದ ಶಿವರಾಜ್ಕುಮಾರ್, ರಮೇಶ್ ಅರವಿಂದ್, ವಿಜಯ್ ಪ್ರಕಾಶ್ ಸೇರಿದಂತೆ ಅನೇಕರು ಕೂಡ ಲತಾ ಮಂಗೇಶ್ಕರ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅದೇ ರೀತಿ, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ:
‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ
Lata Mangeshkar Death: ಲತಾ ಮಂಗೇಶ್ಕರ್ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ
Published On - 1:00 pm, Sun, 6 February 22