ಸೈಫ್ ಅಲಿ ಖಾನ್ ಆಸ್ಪತ್ರೆ ಬಿಲ್ ಲೀಕ್; ಖರ್ಚಾದ ಹಣ ಎಷ್ಟು ಲಕ್ಷ?

ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ಕಳ್ಳನೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಬೆನ್ನಿಗೆ ಗಾಯಗಳಾದ ಸೈಫ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕೆ ಲಕ್ಷ ಲಕ್ಷ ಹಣ ಖರ್ಚಾಗಿದೆ. ಇದರಲ್ಲಿ 25 ಲಕ್ಷ ರೂಪಾಯಿಗಳನ್ನು ವಿಮಾ ಕಂಪನಿ ಪಾವತಿಸಿದೆ ಎಂದು ವರದಿಯಾಗಿದೆ. ಸೈಫ್ ಜನವರಿ 21 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ.

ಸೈಫ್ ಅಲಿ ಖಾನ್ ಆಸ್ಪತ್ರೆ ಬಿಲ್ ಲೀಕ್; ಖರ್ಚಾದ ಹಣ ಎಷ್ಟು ಲಕ್ಷ?
ಸೈಫ್ ಅಲಿ ಖಾನ್
Edited By:

Updated on: Jan 18, 2025 | 12:52 PM

ನಟ ಸೈಫ್ ಅಲಿ ಖಾನ್ ಅವರು ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ಗೊತ್ತೇ ಇದೆ. ಕಳ್ಳನೊಬ್ಬ ಇವರ ಮನೆಗೆ ನುಗ್ಗಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಅಲ್ಲದೆ, ಸೈಫ್ ಮೇಲೆ ಹಲ್ಲೆ ಮಾಡಿ ಹೋಗಿದ್ದ. ಸೈಫ್ ಅಲಿ ಖಾನ್ ಅವರ ಬೆನ್ನಿಗೆ ಇದರಿಂದ ಸಾಕಷ್ಟು ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದರ ಬಿಲ್ ಒಂದು ಈಗ ವೈರಲ್ ಆಗಿದೆ.

ಜನವರು 16ರಂದು ಸೈಫ್ ಅಲಿ ಖಾನ್ ಅವರು ಆಸ್ಪತ್ರೆ ಸೇರಿದರು. ಅವರನ್ನು ರಿಕ್ಷಾ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಮಗನಾದ ಇಬ್ರಾಹಿಮ್ ಅವರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಬಳಿಕ ಅವರಿಗೆ ವೈದ್ಯರು ಸರ್ಜರಿ ಮಾಡಿದ್ದಾರೆ. ಸೈಫ್ ಬೆನ್ನಿನ ಭಾಗದಲ್ಲಿ ಹೊಕ್ಕಿದ್ದ ಚಾಕುವಿನ ಚೂರನ್ನು ತೆಗೆಯಲಾಗಿದೆ. ಸೈಫ್ ಅಲಿ ಖಾನ್ ಅವರ ಆಸ್ಪತ್ರೆ ಬಿಲ್ 35.95 ಲಕ್ಷ ರೂಪಾಯಿ ಖರ್ಚಾಗಿದೆ. ಇನ್ಸೂರೆನ್ಸ್ ಕಂಪನಿ ಕಡೆಯಿಂದ 25 ಲಕ್ಷ ರೂಪಾಯಿ ಸಿಕ್ಕಿದೆ ಎಂದು ವರದಿ ಆಗಿದೆ.

ಗುರುವಾರ ಮುಂಜಾನೆ 2.30 ಸುಮಾರಿಗೆ ವ್ಯಕ್ತಿಯೋರ್ವ ಸೈಫ್ ಮನೆಗೆ ನುಗ್ಗಿದ್ದ. ಮನೆ ಕೆಲಸದವಳ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಗಲಾಟೆ ಕೇಳಿ ಬಂದ ಸೈಫ್ ಅಲಿ ಖಾನ್ ಅವರ ಮೇಲೆ ಈತ ಹಲ್ಲೆ ಮಾಡಿದ್ದಾನೆ. ಆರು ಕಡೆಗಳಲ್ಲಿ ಸೈಫ್ ಮೇಲೆ ದಾಳಿ ನಡೆದಿದೆ. ಈಗ ಅವರು ಡೇಂಜರ್​ಜೋನ್​ನಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ಆಸ್ಪತ್ರೆ ಸೇರಿದ್ದು ಆಟೋದಲ್ಲಿ; ಸಹಾಯಕ್ಕೆ ಬಂದಿದ್ದು ಈ ವ್ಯಕ್ತಿ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋದಲ್ಲಿ ಇನ್ಸೂರೆನ್ಸ್ ಕಂಪನಿಯ ಸ್ಟೇಟ್​ಮೆಂಟ್ ಇದೆ. ‘ನಿವಾ ಬುಪಾ ಹೆಲ್ತ್​ ಇನ್ಸೂರೆನ್ಸ್’ ಪಡೆದಿದ್ದಾರೆ. ಸೈಫ್ ಅವರ ಆಸ್ಪತ್ರೆ ಬಿಲ್ 35.91 ಲಕ್ಷ ರೂಪಾಯಿ. ಇನ್ಸೂರೆನ್ಸ್ ಕಂಪನಿಯಿಂದ 25 ಲಕ್ಷ ಅಪ್ರೂವ್ ಸಿಕ್ಕಿದೆ ಎನ್ನಲಾಗಿದೆ. ಡಾಕ್ಯುಮೆಂಟ್​ನಲ್ಲಿ ಅವರ ಮೆಂಬರ್ ಐಡಿ, ರೂಂ ಕ್ಯಾಟೆಗರಿ ಇತ್ಯಾದಿ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಇದೂ ಅಲ್ಲದೆ,  ಅವರು ಜನವರಿ 21ರಂದು ಡಿಸ್ಚಾರ್ಜ್ ಆಗಲಿದ್ದಾರೆ ಎಂಬುದು ಕೂಡ ಉಲ್ಲೇಖ ಆಗಿದೆ. ಆದರೆ, ಇದು ಆಸ್ಪತ್ರೆಯ ಬಿಲ್ ಹೌದೋ ಅಲ್ಲವೋ ಎಂಬುದು ಖಚಿತವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.