ಒಂದಷ್ಟು ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ (Arjun Kapoor) ನಡುವೆ ಈಗ ಬಿರುಕು ಉಂಟಾದಂತಿದೆ. ಈ ಬಗ್ಗೆ ಅನೇಕ ಬಗೆಯ ಸುದ್ದಿಗಳು ಪ್ರಕಟ ಆಗಿವೆ. ಆದರೆ ಸ್ವತಃ ಅರ್ಜುನ್ ಕಪೂರ್, ಮಲೈಕಾ ಅರೋರಾ (Malaika Arora) ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಈ ರೀತಿ ಗಾಸಿಪ್ ಕೇಳಿಬಂದಿದೆ ಎಂದರೆ ಬಹುತೇಕ ನಿಜ ಇರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್ಗಳು ಅನುಮಾನ ಮೂಡಿಸಿವೆ.
ಭಾನುವಾರ (ಜೂನ್ 2) ಮಲೈಕಾ ಅರೋರಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಒಂದು ಸಾಲು ಗಮನ ಸೆಳೆಯುತ್ತಿದೆ. ‘ನಿಮ್ಮಿಂದ ಆಗಲ್ಲ ಎಂದು ಅವರು ಹೇಳಿದಾಗ ನೀವು ಅದನ್ನು ಮಾಡಿ ತೋರಿಸಿ.. ಎರಡು ಬಾರಿ ಮಾಡಿ ಮತ್ತು ಫೋಟೋ ತೆಗೆದುಕೊಳ್ಳಿ’ ಎಂಬ ಸಾಲನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಅರ್ಜುನ್ ಕಪೂರ್ಗೆ ತಿರುಗೇಟು ನೀಡುವ ಸಲುವಾಗಿ ಮಲೈಕಾ ಅರೋರಾ ಅವರು ಈ ಸಾಲನ್ನು ಶೇರ್ ಮಾಡಿಕೊಂಡಿರಬಹುದು ಎಂಬುದು ಎಲ್ಲರ ಗುಮಾನಿ.
ಇನ್ನು, ಅರ್ಜುನ್ ಕಪೂರ್ ಕೂಡ ಸುಮ್ಮನೆ ಕುಳಿತಿಲ್ಲ. ಒಂದು ದಿನ ಮುಂಚೆ ಅವರು ಕೂಡ ಇದೇ ರೀತಿ ಪರೋಕ್ಷವಾಗಿ ತಿರುಗೇಟು ನೀಡುವಂತಹ ಪೋಸ್ಟ್ ಹಂಚಿಕೊಂಡಿದ್ದರು. ‘ನಮಗೆ ಬದುಕಿನಲ್ಲಿ ಎರಡು ಆಯ್ಕೆ ಇದೆ. ಭೂತಕಾಲದ ಬಂಧಿಗಳಾಗಿ ಇರುವುದು ಅಥವಾ ಭವಿಷ್ಯದ ಸಾಧ್ಯತೆಗಳನ್ನು ಅನ್ವೇಷಣೆ ಮಾಡುವುದು’ ಎಂದು ಅವರು ಬರೆದುಕೊಂಡಿದ್ದರು.
ಇದನ್ನೂ ಓದಿ: 50ರಲ್ಲೂ 30ರಂತೆ ಕಾಣುವ ಮಲೈಕಾ ಅರೋರಾ, ಪಾಲಿಸುವ ಡಯಟ್ ಯಾವುದು?
ಬ್ರೇಕಪ್ ಕುರಿತ ವದಂತಿಗಳ ಬಗ್ಗೆ ಮಲೈಕಾ ಅರೋರಾ ಅವರಾಗಲಿ, ಅರ್ಜುನ್ ಕಪೂರ್ ಅವರಾಗಲಿ ನೇರವಾಗಿ ಏನನ್ನೂ ಹೇಳಿಲ್ಲ. ಅವರು ಸೈಲೆಂಟ್ ಆಗಿದ್ದಾರೆ ಎಂದರೆ ‘ಮೌನಂ ಸಮ್ಮತಿ ಲಕ್ಷಣಂ’ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಬ್ರೇಕಪ್ ಬಗ್ಗೆ ಮಲೈಕಾ ಅವರ ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲ ಬರೀ ಗಾಸಿಪ್ ಎಂದು ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.