ದೊಡ್ಡ ಬಜೆಟ್ನ ಸಿನಿಮಾಗಳಲ್ಲಿ ಐಷಾರಾಮಿ ಮನೆಗಳ ಬಳಕೆ ಆಗುತ್ತದೆ. ಈ ರೀತಿಯ ಮನೆಗಳನ್ನು ಹುಡುಕಿ ಶೂಟ್ (Movie Shooting) ಮಾಡೋದು ನಿಜಕ್ಕೂ ಒಂದು ದೊಡ್ಡ ಟಾಸ್ಕ್. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಐಷಾರಾಮಿ ಮನೆ ಹೊಂದಿದ್ದಾರೆ. ಈ ಮನೆಗಳು ಸಿನಿಮಾ ಶೂಟಿಂಗ್ಗೆ ಬಳಕೆ ಆಗಿವೆ. ರಣಬೀರ್ ಕಪೂರ್ (Ranbir Kapoor) ಅವರ ‘ಅನಿಮಲ್’ ಸಿನಿಮಾ (Animal Movie) ಶೂಟಿಂಗ್ಗೆ ಬಳಕೆ ಆದ ಮನೆ ಸಾಕಷ್ಟು ಸದ್ದು ಮಾಡುತ್ತಿದೆ. ಇದು ಪಟೌಡಿ ಪ್ಯಾಲೇಸ್ ಎಂದು ಹೇಳಲಾಗುತ್ತಿದೆ. ಈ ರೀತಿ ಬಳಕೆ ಆದ ಸೆಲೆಬ್ರಿಟಿ ಮನೆಗಳ ಬಗ್ಗೆ ಇಲ್ಲಿದೆ ವಿವರ.
ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ನಟಿಸಿದ್ದಾರೆ. ಈ ಚಿತ್ರವನ್ನು ಹರಿಯಾಣದಲ್ಲಿ ಇರುವ ಪಟೌಡಿ ಪ್ಯಾಲೇಸ್ನಲ್ಲಿ ಶೂಟ್ ಮಾಡಲಾಗಿದೆ ಎನ್ನಲಾಗಿದೆ. ಸೈಫ್ ಅಲಿ ಖಾನ್ ಅವರು ಪಟೌಡಿ ಕುಟುಂಬಕ್ಕೆ ಸೇರಿದವರು. ಈ ಮನೆಯ ಬೆಲೆ 800 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಸೈಫ್ ಅಲಿ ಖಾನ್ ಇದರ ಮಾಲಿಕತ್ವ ಹೊಂದಿದ್ದಾರೆ.
ಸಲ್ಮಾನ್ ಖಾನ್ ಅವರ ‘ಬಜರಂಗಿ ಭಾಯಿಜಾನ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಕರೀನಾ ಕಪೂರ್ ಮೊದಲಾದವರು ನಟಿಸಿದ್ದಾರೆ. ಭಾರತ ಹಾಗೂ ಪಾಕ್ ಕಥೆಯನ್ನು ಸಿನಿಮಾ ಹೊಂದಿದೆ. ಈ ಚಿತ್ರದ ಕೆಲವು ದೃಶ್ಯಗಳನ್ನು ಸಲ್ಮಾನ್ ಖಾನ್ ಅವರ ಪನ್ವೆಲ್ ಫಾರ್ಮ್ಹೌಸ್ನಲ್ಲಿ ಶೂಟ್ ಮಾಡಲಾಗಿದೆ. ಮುಂಬೈ ಹೊರ ವಲಯದಲ್ಲಿ ಸಲ್ಮಾನ್ ಖಾನ್ ಅವರು ಪ್ಯಾಲೆಸ್ ಹೊಂದಿದ್ದಾರೆ.
ಸೈಫ್ ಅಲಿ ಖಾನ್, ಸುನೀಲ್ ಗ್ರೋವರ್ ನಟನೆಯ ‘ತಾಂಡವ್’ ವೆಬ್ ಸೀರಿಸ್ ಸಾಕಷ್ಟು ಗಮನ ಸೆಳೆದಿದೆ. ಈ ವೆಬ್ ಸೀರಿಸ್ ಜನರಿಗೆ ಇಷ್ಟ ಆಗಿತ್ತು. ಇದರ ಕೆಲ ದೃಶ್ಯಗಳನ್ನು ಪಟೌಡಿ ಪ್ಯಾಲೇಸ್ನಲ್ಲಿ ಶೂಟ್ ಮಾಡಲಾಗಿತ್ತು. ಸೈಫ್ ಅಲಿ ಖಾನ್ ಅವರು ಖುಷಿಯಿಂದ ಇದಕ್ಕೆ ಅವಕಾಶ ನೀಡಿದ್ದರು.
ಇದನ್ನೂ ಓದಿ: ‘ಅನಿಮಲ್’ ಚಿತ್ರದಲ್ಲಿ ಮಿಂಚಿದ ಬಾಬಿ ಡಿಯೋಲ್; ಆದರೂ ಫ್ಯಾನ್ಸ್ಗೆ ಇದೆ ಬೇಸರ
ಶಾರುಖ್ ಖಾನ್ ಅವರು ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದು, ಇದಕ್ಕೆ ಮನ್ನತ್ ಎಂದು ಹೆಸರು ಇಟ್ಟಿದ್ದಾರೆ. ಶಾರುಖ್ ಖಾನ್ ಅಭಿಮಾನಿಗಳಿಗೆ ಇದು ದೇವಾಲಯ ಇದ್ದಂತೆ. ಶಾರುಖ್ ನಟನೆಯ ‘ಫ್ಯಾನ್’ ಸಿನಿಮಾ 2016ರಲ್ಲಿ ರಿಲೀಸ್ ಆಗಿ ಸೋತಿತ್ತು. ಈ ಸಿನಿಮಾದ ಕೆಲವು ಭಾಗವನ್ನು ಮನ್ನತ್ನಲ್ಲಿ ಶೂಟ್ ಮಾಡಲಾಗಿದೆ ಎನ್ನಲಾಗಿದೆ.
ಸಂಜಯ್ ದತ್ ಅವರ ಕುರಿತು ‘ಸಂಜು’ ಹೆಸರಿನ ಬಯೋಪಿಕ್ ರಿಲೀಸ್ ಆಯಿತು. ರಾಜ್ಕುಮಾರ್ ಹಿರಾನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ರಣಬೀರ್ ಕಪೂರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕೆಲವು ಭಾಗಗಳನ್ನು ಸಂಜಯ್ ದತ್ ಮನೆಯಲ್ಲೇ ಶೂಟ್ ಮಾಡಲಾಗಿದೆ. ಸಂಜಯ್ ದತ್ ಅವರು ಮುಂಬೈನ ಇಂಪೀರಿಯಲ್ ಹೈಟ್ಸ್ ಅಪಾರ್ಟ್ಮೆಂಟ್ನಲ್ಲಿ ಮನೆ ಹೊಂದಿದ್ದಾರೆ.
‘ಮಂಗಲ್ ಪಾಂಡೆ’ ಚಿತ್ರದಲ್ಲಿ ಆಮಿರ್ ಖಾನ್, ರಾಣಿ ಮುಖರ್ಜಿ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಪಟೌಡಿ ಪ್ಯಾಲೇಸ್ನಲ್ಲಿ ಶೂಟ್ ಮಾಡಲಾಗಿದೆ. ಈ ಚಿತ್ರ ಒಳ್ಳೆಯ ಗಳಿಕೆ ಮಾಡಿತ್ತು. ಶಾರುಖ್ ಖಾನ್, ಪ್ರೀತಿ ಜಿಂಟಾ ಹಾಗೂ ರಾಣಿ ಮುಖರ್ಜಿ ನಟನೆಯ ‘ವೀರ್ ಜಾರಾ’ ಸಿನಿಮಾ ಬ್ಲಾಕ್ಬಸ್ಟರ್ ಎನಿಸಿಕೊಂಡಿದೆ. ಇದನ್ನು ಕೂಡ ಸೈಫ್ ಅಲಿ ಖಾನ್ ಅವರ ಪಟೌಡಿ ಪ್ಯಾಲೇಸ್ನಲ್ಲಿ ಶೂಟ್ ಮಾಡಲಾಗಿದೆ. ಪ್ರೀತಿ ಜಿಂಟಾ ಮನೆ ಎಂದು ತೋರಿಸಿರುವುದು ಪಟೌಡಿ ಪ್ಯಾಲೇಸ್. ಆಮಿರ್ ಖಾನ್, ಸೋಹಾ ಅಲಿ ಖಾನ್, ಸಿದ್ದಾರ್ಥ್ ನಟನೆಯ ‘ರಂಗ್ ದೇ ಬಸಂತಿ’ ಸಿನಿಮಾದ ಶೂಟಿಂಗ್ ನಡೆದಿದ್ದು ಪಟೌಡಿ ಪ್ಯಾಲೇಸ್ನಲ್ಲಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.