ಮಿಸ್​ ವರ್ಲ್ಡ್​​ ಆಗಿ ಈಗ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮಾನುಷಿ ಚಿಲ್ಲರ್​ಗೆ ಬರ್ತ್​ಡೇ ಸಂಭ್ರಮ

ಮಾನುಷಿ ಚಿಲ್ಲರ್ 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆದರು. ಇದಾದ ಬಳಿಕ ಅವರು ‘ಮಿಸ್​ ವರ್ಲ್ಡ್​ 2017’ ಕಿರೀಟವನ್ನು ಮುಡಿಗೇರಿಸಿಕೊಂಡರು. ಆ ಬಳಿಕ ಅವರ ಖ್ಯಾತಿ ಹೆಚ್ಚಿತು. ವಿಶ್ವಮಟ್ಟದಲ್ಲಿ ಮಾನುಷಿ ಗುರುತಿಸಿಕೊಂಡರು.

ಮಿಸ್​ ವರ್ಲ್ಡ್​​ ಆಗಿ ಈಗ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮಾನುಷಿ ಚಿಲ್ಲರ್​ಗೆ ಬರ್ತ್​ಡೇ ಸಂಭ್ರಮ
ಮಾನುಷಿ
Edited By:

Updated on: May 14, 2022 | 7:22 AM

ಚಿತ್ರರಂಗಕ್ಕೆ (Cinema Industry) ಕಾಲಿಡುವುದಕ್ಕೂ ಮೊದಲು ಅನೇಕರು ಮಾಡೆಲಿಂಗ್ ಲೋಕದಲ್ಲಿ ಮಿಂಚಿರುತ್ತಾರೆ. ಅಲ್ಲಿ ಖ್ಯಾತಿ ಸಿಗುತ್ತಿದ್ದಂತೆಯೇ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ. ಇದು ಚಿತ್ರರಂಗದಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಇದಕ್ಕೆ ಮಾನುಷಿ ಚಿಲ್ಲರ್ (Manushi Chhillar) ಕೂಡ ಹೊರತಾಗಿಲ್ಲ. ಆದರೆ, ಮೊದಲ ಚಿತ್ರವನ್ನು ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಅವರ ಮೊದಲ ಸಿನಿಮಾ ತೆರೆಗೆ ಬರುವುದಕ್ಕೂ ಮುನ್ನ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇಂದು (ಮೇ 14) ಮಾನುಷಿಗೆ 25ನೇ ವರ್ಷದ ಬರ್ತ್​ಡೇ ಸಂಭ್ರಮ. ಅವರಿಗೆ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.

ಮಾನುಷಿ ಚಿಲ್ಲರ್ 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆದರು. ಇದಾದ ಬಳಿಕ ಅವರು ‘ಮಿಸ್​ ವರ್ಲ್ಡ್​​ 2017’ ಕಿರೀಟವನ್ನು ಮುಡಿಗೇರಿಸಿಕೊಂಡರು. ಆ ಬಳಿಕ ಅವರ ಖ್ಯಾತಿ ಹೆಚ್ಚಿತು. ವಿಶ್ವಮಟ್ಟದಲ್ಲಿ ಮಾನುಷಿ ಗುರುತಿಸಿಕೊಂಡರು. ರಾತ್ರಿ ಬೆಳಗಾಗುವುದರೊಳಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಬಿಟ್ಟರು. ಇನ್​​ಸ್ಟಾಗ್ರಾಮ್​ನಲ್ಲಿ ಲಕ್ಷಾಂತರ ಮಂದಿ ಅವರನ್ನು ಹಿಂಬಾಲಿಸೋಕೆ ಆರಂಭಿಸಿದರು.

ನಿರ್ಮಾಪಕರು ಮಾಡೆಲಿಂಗ್ ಜಗತ್ತಿನ ಮೇಲೆ ಯಾವಾಗಲೂ ಕಣ್ಣು ಇಟ್ಟಿರುತ್ತಾರೆ. ಅದರಲ್ಲೂ ಇಷ್ಟೊಂದು ಖ್ಯಾತಿ ಸಿಕ್ಕರೆ ಚಿತ್ರರಂಗಕ್ಕೆ ಎಂಟ್ರಿ ಸಿಗೋದು ತುಂಬಾನೇ ಸುಲಭ. ಆದರೆ, ಮಾನುಷಿ ಚಿಲ್ಲರ್ ಈ ವಿಚಾರದಲ್ಲಿ ತರಾತುರಿ ಮಾಡಲೇ ಇಲ್ಲ. ‘ಒಳ್ಳೆಯ ಪಾತ್ರ ಸಿಕ್ಕರೆ ಮಾತ್ರ ನಟಿಸುತ್ತೇನೆ’ ಎಂದು ನೇರವಾಗಿಯೇ ಹೇಳಿದರು. ಹೇಳಿದಂತೆ ನಡೆದುಕೊಂಡರು.

ಇದನ್ನೂ ಓದಿ
ಮಂಡ್ಯದಲ್ಲಿ ಸನ್ನಿ ಬರ್ತ್​ಡೇ ಬಲುಜೋರು; ರಕ್ತದಾನ ಮಾಡಿ, ಕೇಕ್​ ಕತ್ತರಿಸಿ, ಬಿರಿಯಾನಿ ಹಂಚಿದ ಫ್ಯಾನ್ಸ್​
ಸಲ್ಲು ಸಹೋದರ ಸೊಹೈಲ್​-ಸೀಮಾ ವಿಚ್ಛೇದನ; ರಾತ್ರೋರಾತ್ರಿ ಓಡಿಹೋಗಿ ಮದುವೆ ಆಗಿದ್ದ ಜೋಡಿಯ ಪ್ರೇಮ ಕಹಾನಿ ಇಲ್ಲಿದೆ
‘ಪೃಥ್ವಿರಾಜ್’ ಟ್ರೇಲರ್​ನಲ್ಲಿ ಮಿಂಚಿದ ಅಕ್ಷಯ್​ ಕುಮಾರ್; ಈ ಸಿನಿಮಾದಿಂದ ಚೇತರಿಸಿಕೊಳ್ಳಲಿದೆಯೇ ಬಾಲಿವುಡ್​?
‘ನೀವು ಮಗಳನ್ನು ದತ್ತು ಪಡೆದಿದ್ದು ಪಬ್ಲಿಸಿಟಿ ಗಿಮಿಕ್​’; ಅಭಿಮಾನಿ ಮಾತಿಗೆ ಸನ್ನಿ ಲಿಯೋನ್​ ಉತ್ತರ ಏನು?

ಮಾನುಷಿ ಚಿಲ್ಲರ್ ಅವರು ಈಗ ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್​’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್​ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಇಷ್ಟು ದೊಡ್ಡ ಪ್ರೊಡಕ್ಷನ್ ಹೌಸ್​ನಿಂದ ಪರಿಚಯಗೊಳ್ಳುತ್ತಿರುವುದಕ್ಕೆ ಅವರಿಗೆ ನಿಜಕ್ಕೂ ಖುಷಿಯಿದೆ. ಮೊದಲ ಸಿನಿಮಾದಲ್ಲೇ ಅಕ್ಷಯ್ ಕುಮಾರ್ ಜತೆ ನಟಿಸುವ ಅವಕಾಶ ಮಾನುಷಿಗೆ ಸಿಕ್ಕಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ತೆರೆಗೆ ಬಂದು ಈಗಾಗಲೇ ಸುಮಾರು ಎರಡು ವರ್ಷ ಕಳೆದಿರುತ್ತಿತ್ತು. 2020ರ ದೀಪಾವಳಿಯಲ್ಲೇ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ತೆರೆಗೆ ಬರೋದು ತಡವಾಗಿದೆ. ಜೂನ್​ 3ರಂದು ಸಿನಿಮಾ ರಿಲೀಸ್ ಆಗುತ್ತಿದೆ.

ಅಚ್ಚರಿ ಎಂದರೆ ಮಾನುಷಿ ಜತೆ ಯಶ್ ರಾಜ್​ ಫಿಲ್ಮ್ಸ್  3 ಸಿನಿಮಾಗಳ ಕಾಂಟ್ರ್ಯಾಕ್ಟ್​ ಮಾಡಿಕೊಂಡಿದೆ. ಅವರ ಎರಡನೇ ಸಿನಿಮಾಗೆ ‘ದಿ ಗ್ರೇಟ್ ಇಂಡಿಯನ್​ ಫ್ಯಾಮಿಲಿ’ ಎಂದು ಹೆಸರು ಇಡಲಾಗಿದೆ. ಮೂರನೇ ಸಿನಿಮಾಗೆ ಇನ್ನಷ್ಟೇ ಶೀರ್ಷಿಕೆ ಫಿಕ್ಸ್ ಆಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.