‘ಖಾನ್​ ಎಂಬ ಹೆಸರಿನ ಕಾರಣಕ್ಕೆ ಶಾರುಖ್​ ಮಗನನ್ನು ಅರೆಸ್ಟ್​ ಮಾಡಲಾಗಿದೆ’: ಮೆಹಬೂಬಾ ಮುಫ್ತಿ ಆರೋಪ

| Updated By: ಮದನ್​ ಕುಮಾರ್​

Updated on: Oct 12, 2021 | 8:22 AM

ಆರ್ಯನ್​ ಖಾನ್​ ಬಂಧನದ ಬಗ್ಗೆ ಟ್ವೀಟ್​ ಮಾಡಿರುವ ಮೆಹಬೂಬಾ ಮುಫ್ತಿ ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಹೇಳಿಕೆಯನ್ನು ಬಹುತೇಕರು ಖಂಡಿಸಿದ್ದಾರೆ.

‘ಖಾನ್​ ಎಂಬ ಹೆಸರಿನ ಕಾರಣಕ್ಕೆ ಶಾರುಖ್​ ಮಗನನ್ನು ಅರೆಸ್ಟ್​ ಮಾಡಲಾಗಿದೆ’: ಮೆಹಬೂಬಾ ಮುಫ್ತಿ ಆರೋಪ
ಆರ್ಯನ್​ ಖಾನ್​, ಮೆಹಬೂಬಾ ಮುಫ್ತಿ
Follow us on

ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಬಂಧನಕ್ಕೆ ಒಳಗಾದ ಬಳಿಕ ಅವರ ಪರವಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಸದ್ಯ ಆರ್ಯನ್ ಖಾನ್​ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅವರನ್ನು ಎನ್​ಸಿಬಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಜಾತಿ-ಧರ್ಮದ ವಿಚಾರವನ್ನೂ ಎಳೆದುತಂದಿದ್ದಾರೆ. ಅದು ದೊಡ್ಡ ಚರ್ಚೆಗೆ ಕಾರಣ ಆಗಿದೆ.

ಆರ್ಯನ್​ ಬಂಧನದ ಬಗ್ಗೆ ಟ್ವೀಟ್​ ಮಾಡಿರುವ ಮೆಹಬೂಬಾ ಮುಫ್ತಿ ಅವರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರೈತರ ಕೊಲೆ ಆರೋಪ ಹೊತ್ತಿರುವ ಕೇಂದ್ರ ಸಚಿವರ ಮಗನಿಗೆ ಶಿಕ್ಷೆ ಕೊಡಿಸುವ ಬದಲು ತನಿಖಾ ಸಂಸ್ಥೆಗಳು 23ರ ಪ್ರಾಯದ ಹುಡುಗನ ಹಿಂದೆ ಬಿದ್ದಿವೆ. ಆತನ ಸರ್​ನೇಮ್ ಖಾನ್ ಎಂಬುದೇ ಇದಕ್ಕೆ ಕಾರಣ. ಬಿಜೆಪಿಯ ವೋಟ್​ ಬ್ಯಾಂಕ್​ ಕಾರಣದಿಂದ ಮುಸ್ಲೀಮರು ಟಾರ್ಗೆಟ್​ ಆಗುತ್ತಿದ್ದಾರೆ’ ಎಂದು ಮೆಹಬೂಬಾ ಮುಫ್ತಿ ಟ್ವೀಟ್​ ಮಾಡಿದ್ದಾರೆ.

ಮೆಹಬೂಬಾ ಮುಫ್ತಿ ಅವರ ಹೇಳಿಕೆಯನ್ನು ಬಹುತೇಕರು ಖಂಡಿಸಿದ್ದಾರೆ. ಈ ಸಂಬಂಧ ದೆಹಲಿ ಮೂಲದ ವಕೀಲರೊಬ್ಬರು ಅವರ ವಿರುದ್ಧ ದೂರು ನೀಡಿದ್ದಾರೆ ಎಂದು ವರದಿ ಆಗಿದೆ. ಅದೇನೇ ಇರಲಿ, ಪ್ರತಿ ದಿನ ಒಬ್ಬರಲ್ಲಾ ಒಬ್ಬರು ಶಾರುಖ್​ ಫ್ಯಾಮಿಲಿ ಪರವಾಗಿ ಬ್ಯಾಟ್​ ಬೀಸುತ್ತಲೇ ಇದ್ದಾರೆ. ಇತ್ತೀಚೆಗೆ ಹೃತಿಕ್​ ರೋಷನ್​, ವಿಶಾಲ್​ ದದ್ಲಾನಿ, ಶೇಖರ್​ ಸುಮನ್​, ಸಲ್ಮಾನ್ ಖಾನ್, ಫರ್ಹಾ ಖಾನ್​ ಮುಂತಾದವರು ಶಾರುಖ್​ಗೆ ಬೆಂಬಲ ವ್ಯಕ್ತಪಡಿಸಿದ್ದರು.

ವಿಶೇಷ ಎನ್​ಡಿಪಿಎಸ್​ ನ್ಯಾಯಾಲಯದಲ್ಲಿ ಸೋಮವಾರ (ಅ.11)  ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಅರ್ಜಿ ವಿಚಾರಣೆ ದಿನಾಂಕವನ್ನು ನ್ಯಾಯಾಲಯಕ್ಕೆ ಬುಧವಾರಕ್ಕೆ (ಅ.13) ಮುಂದೂಡಿದೆ. ಅಲ್ಲಿಯವರೆಗೂ ಆರ್ಯನ್​ ಖಾನ್​ ಜೈಲಿನಲ್ಲಿ ದಿನ ಕಳೆಯದೇ ಬೇರೆ ದಾರಿ ಇಲ್ಲ. ಆರ್ಯನ್​ ಖಾನ್​ಗೆ ಜಾಮೀನು ಕೊಡಿಸಲು ಶಾರುಖ್​ ಖಾನ್​ ಹರಸಾಹಸ ಮಾಡುತ್ತಿದ್ದಾರೆ. ಪುತ್ರ ಅರೆಸ್ಟ್​ ಆದ ದಿನದಿಂದಲೂ ಶಾರುಖ್​ ಮತ್ತು ಗೌರಿ ಖಾನ್​ ದಂಪತಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಊಟ, ನಿದ್ರೆಯ ಕಡೆಗೂ ಅವರು ಗಮನ ಕೊಡುತ್ತಿಲ್ಲ ಎಂಬ ಮಾಹಿತಿ ಕೇಳಿಬರುತ್ತಿದೆ. ಒಂದು ವೇಳೆ ಸ್ಪೆಷಲ್​ ಎನ್​ಡಿಪಿಎಸ್​ ನ್ಯಾಯಾಲಯದಲ್ಲಿ ಆರ್ಯನ್​ಗೆ ಜಾಮೀನು ಸಿಗದೇ ಇದ್ದರೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ವಕೀಲ ಸತೀಶ್​ ಮಾನೆಶಿಂಧೆ ನಿರ್ಧರಿಸಿದ್ದಾರೆ. ಯಾವುದಕ್ಕೂ ಬುಧವಾರದವರೆಗೆ ಕಾಯುವುದು ಅನಿವಾರ್ಯ.

ಇದನ್ನೂ ಓದಿ:

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​