Janhvi Kapoor: ‘ಪ್ರಚಾರಕ್ಕಾಗಿ ಟಾಯ್ಲೆಟ್​ ಬೇಕಾದ್ರೂ ತೊಳೀತಾರೆ’: ಪಾಪ್​ಕಾರ್ನ್​ ಮಾರಿದ ಜಾನ್ವಿಗೆ ನೆಟ್ಟಿಗರ ಟ್ರೋಲ್​

Janhvi Kapoor Viral Video: ‘ಮಿಲಿ’ ಚಿತ್ರದ ಪ್ರಚಾರಕ್ಕಾಗಿ ನಟಿ ಜಾನ್ವಿ ಕಪೂರ್​ ಅವರು ವಿಶೇಷ ರೀತಿಯಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಆದರೆ ಜನರಿಗೆ ಅವರ ಈ ಗಿಮಿಕ್​ ಹಿಡಿಸಿಲ್ಲ.

Janhvi Kapoor: ‘ಪ್ರಚಾರಕ್ಕಾಗಿ ಟಾಯ್ಲೆಟ್​ ಬೇಕಾದ್ರೂ ತೊಳೀತಾರೆ’: ಪಾಪ್​ಕಾರ್ನ್​ ಮಾರಿದ ಜಾನ್ವಿಗೆ ನೆಟ್ಟಿಗರ ಟ್ರೋಲ್​
ಜಾನ್ವಿ ಕಪೂರ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 01, 2022 | 9:32 PM

ಸಿನಿಮಾ ಮಾಡುವುದು ಎಷ್ಟು ಕಷ್ಟವೋ ಅದರ ಪ್ರಚಾರ ಮಾಡುವುದು ಕೂಡ ಅಷ್ಟೇ ಕಷ್ಟ. ಅದಕ್ಕಾಗಿ ಸೆಲೆಬ್ರಿಟಿಗಳು ಇಲ್ಲಸಲ್ಲದ ಕಸರತ್ತು ಮಾಡುತ್ತಾರೆ. ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ (Janhvi Kapoor) ಅವರು ಬಾಲಿವುಡ್​ನಲ್ಲಿ ಫೇಮಸ್​ ಆಗಿದ್ದಾರೆ. ಆದರೆ ಈ ನಟಿಗೆ ಹೇಳಿಕೊಳ್ಳುವಂತಹ ಯಶಸ್ಸು ಇನ್ನೂ ಸಿಕ್ಕಿಲ್ಲ. ಒಂದೇ ಒಂದು ಗೆಲುವಿಗಾಗಿ ಅವರು ಹಲವು ಬಗೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾ ಮಾಡಿದರೂ ಅವರಿಗೆ ಜನಮೆಚ್ಚುಗೆ ಸಿಗುತ್ತಿಲ್ಲ. ಪದೇ ಪದೇ ಅವರು ರಿಮೇಕ್​ ಸಿನಿಮಾವನ್ನೇ ಮಾಡುತ್ತಿದ್ದಾರೆ. ಈಗ ಜಾನ್ವಿ ಕಪೂರ್​ ನಟಿಸಿರುವ ‘ಮಿಲಿ’ (Mili) ಸಿನಿಮಾ ನವೆಂಬರ್​ 4ರಂದು ಬಿಡುಗಡೆ ಆಗಲಿದೆ. ಅದರ ಸಲುವಾಗಿ ಜಾನ್ವಿ ಕಪೂರ್​ ಅವರು ವಿಶೇಷ ರೀತಿಯಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಆದರೆ ಜನರಿಗೆ ಅವರ ಈ ಗಿಮಿಕ್​ ಹಿಡಿಸಿಲ್ಲ.

‘ಮಿಲಿ’ ಚಿತ್ರದ ಪ್ರಚಾರಕ್ಕಾಗಿ ಸೋಮವಾರ (ಅ.31) ಜಾನ್ವಿ ಕಪೂರ್ ಅವರು ದೆಹಲಿಗೆ ತೆರಳಿದ್ದರು. ಅಲ್ಲಿನ ಮಲ್ಟಿಪ್ಲೆಕ್ಸ್​ನಲ್ಲಿ ಅವರು ಪಾಪ್​ಕಾರ್ನ್​ ಮಾರಿದ್ದಾರೆ! ಅರೆರೆ, ನಿರ್ಮಾಪಕ ಬೋನಿ ಕಪೂರ್​ ಮಗಳು ಹೀಗೇಕೆ ಪಾಪ್​ಕಾರ್ನ್​ ಮಾರುತ್ತಿದ್ದಾರೆ ಅಂತ ಜನರು ಒಂದು ಕ್ಷಣ ಅಚ್ಚರಿಪಟ್ಟಿದ್ದಾರೆ. ಇದು ಪ್ರಚಾರದ ಗಿಮಿಕ್ ಎಂಬುದು ಮರುಕ್ಷಣವೇ ಗೊತ್ತಾಗಿದೆ.

ಇದನ್ನೂ ಓದಿ
Image
44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?
Image
ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ
Image
Janhvi Kapoor: ಜಾನ್ವಿ ಕಪೂರ್​ ಫೋಟೋ ವೈರಲ್​; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್​ ಎಂದ ಅಭಿಮಾನಿಗಳು
Image
Janhvi Kapoor: ಪ್ರಕೃತಿಯ ಮಡಿಲಿನಲ್ಲಿ ಜಾನ್ವಿ ಕಪೂರ್ ವಿಹಾರ; ಫೋಟೋಗಳಿಗೆ ಮಸ್ತ್​ ಪೋಸ್​​

ಜಾನ್ವಿ ಕಪೂರ್​ ಅವರು ಪಾಪ್​ ಕಾರ್ನ್​ ಮಾರುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಜನರು ಅದಕ್ಕೆ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಇವರು ಶ್ರೀದೇವಿ-ಬೋನಿ ಕಪೂರ್​ ದಂಪತಿಯ ಪುತ್ರಿ ಆಗಿರದೇ ಇದ್ದರೆ ಪಾಪ್​ಕಾರ್ನ್​ ಮಾರುವ ಕೆಲಸವನ್ನೇ ಮಾಡಬೇಕಿತ್ತು’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ‘ಸಿನಿಮಾದ ಪ್ರಚಾರಕ್ಕಾಗಿ ಬೇಕಿದ್ದರೆ ಟಾಯ್ಲೆಟ್​ ಕೂಡ ತೊಳೀತಾರೆ’ ಎಂದು ಇನ್ನೊಬ್ಬರು ಕಟುವಾಗಿ ಟೀಕಿಸಿದ್ದಾರೆ. ‘ಸಿನಿಮಾ ಪ್ರಚಾರದ ಸಮಯದಲ್ಲಿ ಮಾತ್ರ ಇವರಿಗೆ ಜನರ ನೆನಪಾಗುತ್ತದೆ. ಬಾಕಿ ಸಮಯದಲ್ಲಿ ನೆನಪು ಇರುವುದಿಲ್ಲ’ ಎಂಬ ಕಮೆಂಟ್​ ಕೂಡ ಬಂದಿದೆ.

ಮಲಯಾಳಂನ ‘ಹೆಲೆನ್​’ ಸಿನಿಮಾ 2019ರಲ್ಲಿ ಬಿಡುಗಡೆ ಆಗಿ ಜನರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ನಾಯಕಿಪ್ರಧಾನ ಕಥೆಯುಳ್ಳ ಆ ಚಿತ್ರವನ್ನು ಹಿಂದಿಯಲ್ಲಿ ‘ಮಿಲಿ’ ಎಂದು ರಿಮೇಕ್​ ಮಾಡಲಾಗಿದೆ. ಬೋನಿ ಕಪೂರ್​ ಅವರು ಮಗಳು ಜಾನ್ವಿಗಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾದಿಂದಲಾದರೂ ಜಾನ್ವಿಗೆ ಗೆಲುವು ಸಿಗುತ್ತೋ ಇಲ್ಲವೋ ಎಂಬುದು ನವೆಂಬರ್​ 4ರಂದು ಗೊತ್ತಾಗಲಿದೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್​ ಜೊತೆಗೆ ಸನ್ನಿ ಕೌಶಲ್​ ಹಾಗೂ ಮನೋಜ್​ ಪಾಹ್ವಾ ಅವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:32 pm, Tue, 1 November 22

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್