‘ಉಗ್ರ ಸಿಕ್ಕಿದ್ದ, ಕುರಾನ್ ಓದಿಲ್ಲ ಎಂದಿದ್ದಕ್ಕೆ ಕಿರುಕುಳ ನೀಡಿದ್ದ’; ನಟಿಯಿಂದ ಶಾಕಿಂಗ್ ವಿಚಾರ ರಿವೀಲ್

ಏಪ್ರಿಲ್ 22ರ ಜಮ್ಮು-ಕಾಶ್ಮೀರ ಉಗ್ರ ದಾಳಿಯ ನಂತರ, ಮಾಡೆಲ್ ಏಕ್ತಾ ತಿವಾರಿ ಅವರು ತಮ್ಮ ಆಘಾತಕಾರಿ ಅನುಭವವನ್ನು ಬಹಿರಂಗಪಡಿಸಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರನನ್ನು ಭೇಟಿಯಾದ ಅವರು, ಧಾರ್ಮಿಕ ಪ್ರಶ್ನೆಗಳನ್ನು ಎದುರಿಸಿದ್ದು, ಕುರಾನ್ ಓದದಿರುವುದಕ್ಕೆ ಕಿರುಕುಳ ಅನುಭವಿಸಿದ್ದಾರೆ. ಈ ಘಟನೆಯಿಂದ ತಪ್ಪಿಸಿಕೊಂಡು ಬದುಕುಳಿದ ಅವರ ಅನುಭವ ಭಯಾನಕವಾಗಿದೆ.

‘ಉಗ್ರ ಸಿಕ್ಕಿದ್ದ, ಕುರಾನ್ ಓದಿಲ್ಲ ಎಂದಿದ್ದಕ್ಕೆ ಕಿರುಕುಳ ನೀಡಿದ್ದ’; ನಟಿಯಿಂದ ಶಾಕಿಂಗ್ ವಿಚಾರ ರಿವೀಲ್
ಏಕ್ತಾ ಕಪೂರ್

Updated on: Apr 26, 2025 | 3:46 PM

ಏಪ್ರಿಲ್ 22ರಂದು ಜಮ್ಮು-ಕಾಶ್ಮೀರಪಹಲ್ಗಾಮ್​ನಲ್ಲಿ (Pahalgam Attack) ಭೀಕರ ಉಗ್ರರ ದಾಳಿ ನಡೆಯಿತು ಈ ದಾಳಿ ವೇಳೆ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಈ ದಾಳಿ ಹಿಂದೆ ಇರುವವರ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ. ಈ ರೇಖಾ ಚಿತ್ರ ನೋಡಿದ ಬಳಿಕ ಮಾಡೆಲ್, ನಟಿ ಏಕ್ತಾ ತಿವಾರಿ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ತಾವು ಆ ಉಗ್ರನನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಆತ ತನ್ನ ಜೊತೆ ತಪ್ಪಾಗಿ ನಡೆದುಕೊಂಡಿದ್ದ ಎಂಬುದನ್ನು ಏಕ್ತಾ ತಿವಾರಿ ವಿವರಿಸಿದ್ದಾರೆ.

ಮಾಧ್ಯಮಗಳ ಜೊತೆ ಏಕ್ತಾ ಮಾತನಾಡಿದ್ದಾರೆ. ‘ಏಪ್ರಿಲ್ 20ರಂದು ನಾವು ಪಹಲ್ಗಾಮ್​ಗೆ ತೆರಳಿದ್ದೆವು. ಅಧಿಕಾರಿಗಳು ಬಿಡುಗಡೆ ಮಾಡಿದ ರೇಖಾ ಚಿತ್ರ ನೋಡಿದ ಬಳಿಕ ನಾನು ಕೂಡ ಸಾವಿನ ಹತ್ತಿರ ಹೋಗಿ ಬಂದಿದ್ದೆ ಎಂಬುದು ಗೊತ್ತಾಯಿತು’ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಆ ದಿನ ಏನಾಗಿತ್ತು ಎಂಬುದನ್ನು ವಿವರಿಸಿದ್ದಾರೆ.

ಇದನ್ನೂ ಓದಿ
ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?
ನಟಿಯಾಗೋ ಪ್ಲ್ಯಾನ್ ಇರಲಿಲ್ಲ; ರಚಿತಾ ನಟಿ​ ಆಗಿರದಿದ್ದರೆ ಏನಾಗಿರುತ್ತಿದ್ದರು
ಕಾರ್ತಿಕ್ ಖಾತೆಯಿಂದ ಫೋಟೋ ಕದ್ದು ಪೋಸ್ಟರ್ ಮಾಡಿದ ಕರಣ್ ಜೋಹರ್
‘ಕೆಜಿಎಫ್ 2’ ಜೋಡಿನ ಬಾಲಿವುಡ್​ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್

‘ನಾನು ಕಾಶ್ಮೀರದಲ್ಲಿ ಇದ್ದಾಗ ಕೆಲವರು ಬಂದು ಅಜ್ಮೇರ್ (ಮುಸ್ಲಿಮರ ಪವಿತ್ರ ಸ್ಥಳ)  ಬಗ್ಗೆ ಕೇಳಿದರು. ನಾನು ಅಲ್ಲಿಗೆ ಹೋಗಿಲ್ಲ ಎಂದೆ. ಆ ಬಳಿಕ ಅವರು ಅಮರನಾಥ ಯಾತ್ರೆ ಬಗ್ಗೆ ಕೇಳಿದರು. ಎಷ್ಟು ಜನ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿದರು. ನಮ್ಮ ಧರ್ಮದ ಬಗ್ಗೆ ಕೇಳಿದರು. ನನಗೆ ಭಯ ಆಯಿತು. ನಾನು ನಿಜ ಹೇಳಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆಯೂ ಕೇಳಿದರು. ವಿವಾಹ ಆಗಿ ಎಷ್ಟು ಸಮಯ ಆಯಿತು ಎಂದು ಪ್ರಶ್ನೆ ಮಾಡಿದರು’ ಎಂದು ಏಕ್ತಾ ತಿವಾರಿ ವಿವರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕುರಾನ್ ಬಗ್ಗೆ ಕೂಡ ಪ್ರಶ್ನೆ ಮಾಡಿದ್ದರಂತೆ.

ಏಕ್ತಾ ತಿವಾರಿ ಅವರು ಏಪ್ರಿಲ್ 13ಕ್ಕೆ ವೈಷ್ಣೋ ದೇವಿ ದೇವಾಲಯಕ್ಕೆ ತೆರಳಿದ್ದರು. ಏಪ್ರಿಲ್ 20ರಂದು ಪಹಲ್ಗಾಮ್​ಗೆ ತೆರಳಿದ್ದರು.  ‘ನಮ್ಮನ್ನು ಅವರು ಬೈಸರನ್ ಕಣಿವೆಗೆ ಕರೆದುಕೊಂಡು ಹೋಗುತ್ತೇನೆ ಎಂದರು. ನಾವು ಹೋಗಿಲ್ಲ. ಈ ಕಾರಣಕ್ಕೆ ಅವರಿಗೆ ಸಿಟ್ಟು ಬಂತು ಮತ್ತು ನಮ್ಮ ಜೊತೆ ತಪ್ಪಾಗಿ ನಡೆದುಕೊಂಡರು. ಆ ಘಟನೆಯ ವಿಡಿಯೋ ಕೂಡ ಇದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರ: ರಾಜೌರಿಯಲ್ಲಿ ಪೊಲೀಸ್ ಗಸ್ತು ಪಡೆಯ ವಾಹನದ ಮೇಲೆ ಗ್ರೆನೇಡ್​ ದಾಳಿ

‘ನಾನು ರುದ್ರಾಕ್ಷಿ ಮಾಲೆ ಹಾಕಿಕೊಂಡಿದ್ದೇನೆ, ಕುರಾನ್ ಓದಲ್ಲ ಅನ್ನೋದು ಅವರಿಗೆ ಸಮಸ್ಯೆ ಆಗಿತ್ತು. ಹೀಗಾಗಿ, ನಮ್ಮ ಜೊತೆ ಅವರು ತಪ್ಪಾಗಿ ನಡೆದುಕೊಂಡರು. ಅವರ ಬಳಿ ಶೂ ಒಳಗೆ ಕೀ ಪ್ಯಾಡ್’ ಮೊಬೈಲ್ ಕೂಡ ಇತ್ತು ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:23 pm, Sat, 26 April 25