ಹಸೆಮಣೆ ಏರಿದ ‘ಕೆಜಿಎಫ್​’ ನಟಿ ಮೌನಿ ರಾಯ್​; ಸೂರಜ್​ ನಂಬಿಯಾರ್​ ಜತೆ ಬೆಂಗಾಲಿ ಬೆಡಗಿ ಸಪ್ತಪದಿ

Mouni Roy Suraj Nambiar Wedding: ಮೌನಿ ರಾಯ್​ ಮತ್ತು ಸೂರಜ್​ ನಂಬಿಯಾರ್​ ಮದುವೆಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಹಸೆಮಣೆ ಏರಿದ ‘ಕೆಜಿಎಫ್​’ ನಟಿ ಮೌನಿ ರಾಯ್​; ಸೂರಜ್​ ನಂಬಿಯಾರ್​ ಜತೆ ಬೆಂಗಾಲಿ ಬೆಡಗಿ ಸಪ್ತಪದಿ
ಸೂರಜ್​ ನಂಬಿಯಾರ್​ - ಮೌನಿ ರಾಯ್​ ಮದುವೆ
Edited By:

Updated on: Jan 27, 2022 | 1:34 PM

ಖ್ಯಾತ ನಟಿ ಮೌನಿ ರಾಯ್​ (Mouni Roy) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಭಾಷೆಯಲ್ಲಿ ನಟಿಸಿರುವ ಅವರ ಬದುಕಿನಲ್ಲೀಗ ಹೊಸ ಅಧ್ಯಾಯ ಆರಂಭ ಆಗಿದೆ. ಪ್ರಿಯಕರ ಸೂರಜ್​ ನಂಬಿಯಾರ್​ (Suraj Nambiar) ಜೊತೆ ಮೌನಿ ರಾಯ್​ ಹಸೆಮಣೆ ಏರಿದ್ದಾರೆ. ಗೋವಾದ ಒಂದು ರೆಸಾರ್ಟ್​ನಲ್ಲಿ ಈ ವಿವಾಹ ನೆರವೇರಿದೆ. ಮೌನಿ ರಾಯ್​ ಅವರು ಪಶ್ಚಿಮ ಬಂಗಾಳ ಮೂಲದವರು. ಅವರನ್ನು ಕೈ ಹಿಡಿಯುತ್ತಿರುವ ಸೂರಜ್​ ನಂಬಿಯಾರ್​ ಅವರು ಕೇರಳ ಮೂಲದವರು. ಹಾಗಾಗಿ ಎರಡೂ ಕುಟುಂಬದ ಸಂಪ್ರದಾಯದ ಪ್ರಕಾರ ಮದುವೆ ನಡೆಯುತ್ತಿದೆ. ಮೊದಲು ಮಲಯಾಳಿ ಪದ್ಧತಿಯಂತೆ ಇಂದು (ಜ.27) ಬೆಳಗ್ಗೆ ಇವರಿಬ್ಬರ ಮದುವೆ ನಡೆದಿದೆ. ಸಂಜೆ ಬೆಂಗಾಲಿ ಸಂಪ್ರದಾಯದ ಪ್ರಕಾರ ವಿವಾಹ (Mouni Roy Marriage) ಶಾಸ್ತ್ರಗಳನ್ನು ನೆರವೇರಿಸಲಾಗುವುದು ಎಂಬ ಮಾಹಿತಿ ಸಿಕ್ಕಿದೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಹಿಂದಿ ವರ್ಷನ್​ನಲ್ಲಿ ‘ಗಲಿ ಗಲಿ ಮೇ’ ಹಾಡಿಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್​ ಅವರಿಗೆ ಬಾಲಿವುಡ್​ನಲ್ಲಿ ಸಖತ್​ ಡಿಮ್ಯಾಂಡ್​ ಇದೆ. ಹೊಸ ಬಾಳಿಗೆ ಕಾಲಿಟ್ಟ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಮೌನಿ ರಾಯ್​ ಮತ್ತು ಸೂರಜ್​ ನಂಬಿಯಾರ್​ ಮದುವೆಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಮತ್ತು ಸ್ನೇಹಿತರು ನವ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಈ ಮದುವೆಗೆ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಾಗಿಲ್ಲ. ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಅರ್ಜುನ್​ ಬಿಜಲಾನಿ, ಮಂದಿರಾ ಬೇಡಿ, ಅಕ್ಷಾ ಗೊರಾಡಿಯಾ, ಶಿವಾನಿ ಮಲಿಕ್​ ಸಿಂಗ್, ಓಂಕಾರ್​ ಕಪೂರ್, ರಾಹುಲ್​ ಶೆಟ್ಟಿ ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಮದುವೆಗೆ ಹಾಜರಾಗಿದ್ದಾರೆ ಎನ್ನಲಾಗಿದೆ.

ಹಿಂದಿ ಕಿರುತೆರೆಯಲ್ಲಿ ಮೌನಿ ರಾಯ್​ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಕ್ಯೂಂ ಕಿ ಸಾಸ್​ ಭಿ ಕಭಿ ಬಹು ಥಿ, ನಾಗಿನ್​ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅವರು ಮನೆ ಮಾತಾಗಿದ್ದಾರೆ. ಬಾಲಿವುಡ್​ ಸಿನಿಮಾಗಳಲ್ಲೂ ಮೌನಿ ರಾಯ್​ ಬಣ್ಣ ಹಚ್ಚಿದ್ದಾರೆ. 2018ರಲ್ಲಿ ತೆರೆಕಂಡ ‘ಗೋಲ್ಡ್​’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿತು. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದಲ್ಲಿ ‘ಗಲಿ ಗಲಿ ಮೇ’ ಹಾಡಿಗೆ ಯಶ್​ ಜೊತೆ ಹೆಜ್ಜೆ ಹಾಕುವ ಮೂಲಕ ಅವರ ಖ್ಯಾತಿ ಹೆಚ್ಚಿತು. ಸದ್ಯ ಮದುವೆ ಸಲುವಾಗಿ ಬ್ರೇಕ್​ ಪಡೆದುಕೊಂಡಿರುವ ಅವರು ಯಾವುದೇ ಹೊಸ ಪ್ರಾಜೆಕ್ಟ್​ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ:

ಫ್ರಾಕ್​ ಧರಿಸಿ ಸ್ಟೈಲಿಷ್​ ಆಗಿ ಕಾಣಿಸಿಕೊಂಡಿದ್ದಾರೆ ಮೌನಿ ರಾಯ್​: ಇಲ್ಲಿವೆ ನೋಡಿ ಫೋಟೋಗಳು

ಸಲ್ಮಾನ್ ಖಾನ್ ಜತೆ ನೃತ್ಯ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಇಲ್ಲವೆಂದ ನಟಿ ಮೌನಿ ರಾಯ್​; ವಿಡಿಯೋ ಭರ್ಜರಿ ವೈರಲ್​

Published On - 12:53 pm, Thu, 27 January 22