ನಟ ನವಾಜುದ್ದೀನ್ ಸಿದ್ದಿಕಿಯಿಂದ ಪತ್ನಿಗೆ ಚಿತ್ರಹಿಂಸೆ; ನ್ಯಾಯಾಲಯದಲ್ಲಿ ಕೇಸ್ ಮತ್ತಷ್ಟು ಸ್ಟ್ರಾಂಗ್  

|

Updated on: Feb 01, 2023 | 9:37 AM

ಆಲಿಯಾ ಸಿದ್ದಿಕಿ ಹಾಗೂ ನವಾಜುದ್ದಿನ್ ಸಿದ್ದಿಕಿ ಸಂಬಂಧದಲ್ಲಿ ಬಿರುಕು ಮೂಡಿದೆ. ಪತಿಯಿಂದ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಆಲಿಯಾ ಆರೋಪ ಮಾಡಿದ್ದಾರೆ.

ನಟ ನವಾಜುದ್ದೀನ್ ಸಿದ್ದಿಕಿಯಿಂದ ಪತ್ನಿಗೆ ಚಿತ್ರಹಿಂಸೆ; ನ್ಯಾಯಾಲಯದಲ್ಲಿ ಕೇಸ್ ಮತ್ತಷ್ಟು ಸ್ಟ್ರಾಂಗ್  
ನವಾಜುದ್ದಿನ್ ಸಿದ್ದಿಕಿ-ಆಲಿಯಾ ಸಿದ್ದಿಕಿ
Follow us on

ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಈ ಪ್ರಕರಣ ಸದ್ಯ ಕೋರ್ಟ್​​ ಮೆಟ್ಟಿಲಲ್ಲಿದೆ. ಅವರ ಪತ್ನಿ ಆಲಿಯಾ ಸಿದ್ದಿಕಿ (Aaliya Siddiqui) ಅವರು ನವಾಜುದ್ದೀನ್ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದಾರೆ. ಆಲಿಯಾ ಪರ ವಕೀಲರು ನವಾಜುದ್ದೀನ್ ಹಾಗೂ ಅವರ ಕುಟುಂಬ ಏನೆಲ್ಲ ಮಾಡುತ್ತಿತ್ತು ಎಂಬುದನ್ನು ವಿವರಿಸಿದ್ದಾರೆ. ಈ ಆರೋಪಗಳು ಸದ್ಯ ಸಾಕಷ್ಟು ಅಚ್ಚರಿಮೂಡಿಸಿದೆ. ಆಲಿಯಾಗೆ ಮನೆಯಲ್ಲಿ ತಿನ್ನಲು ಆಹಾರವನ್ನೂ ನೀಡುತ್ತಿರಲಿಲ್ಲವಂತೆ.

ಆಲಿಯಾ ಸಿದ್ದಿಕಿ ಹಾಗೂ ನವಾಜುದ್ದಿನ್ ಸಿದ್ದಿಕಿ ಸಂಬಂಧದಲ್ಲಿ ಬಿರುಕು ಮೂಡಿದೆ. ಪತಿಯಿಂದ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಆಲಿಯಾ ಆರೋಪ ಮಾಡಿದ್ದಾರೆ. ‘ನವಾಜುದ್ದೀನ್ ಸಿದ್ದಿಕಿ ಹಾಗೂ ಅವರ ಕುಟುಂಬದವರು ಆಲಿಯಾಗೆ ಹಿಂಸೆ ಕೊಟ್ಟಿದ್ದಾರೆ. ಅವರನ್ನು ಮನೆಯಿಂದ ಹೊರಹಾಕಬೇಕು ಎಂದು ಈ ಪ್ರಯತ್ನಗಳನ್ನು ಮಾಡಿದ್ದಾರೆ. ಅವರ ಮೇಲೆ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರ ಮೂಲಕ ಅವರಿಗೆ ಬೆದರಿಕೆ ಹಾಕುವ ಪ್ರಯತ್ನ ನಡೆದಿದೆ. ರಾತ್ರಿ ವೇಳೆ ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಾಗುತ್ತಿತ್ತು’ ಎಂದು ಆಲಿಯಾ ಪರ ವಕೀಲರು ಕೋರ್ಟ್​ನಲ್ಲಿ ಹೇಳಿದ್ದಾರೆ.

‘ಪೊಲೀಸ್ ಇಲಾಖೆಯ ಕಾರ್ಯವೈಖರಿ ಮತ್ತು ವೈಫಲ್ಯಗಳನ್ನು ನೇರವಾಗಿ ಹೇಳಲು ನಾನು ಬಯಸುವುದಿಲ್ಲ. ಆಲಿಯಾಗೆ ಪೊಲೀಸ್ ಅಧಿಕಾರಿಗಳ ಮುಂದೆ ಗೌರವಕ್ಕೆ ಚ್ಯುತಿ ಉಂಟಾದಾಗ ಅವರ ರಕ್ಷಣೆಗೆ ಯಾವ ಪೊಲೀಸ್ ಅಧಿಕಾರಿಯೂ ಬಂದಿಲ್ಲ ಎಂಬುದು ಸತ್ಯ. ನನ್ನ ಕಕ್ಷಿದಾರರು ಲಿಖಿತ ದೂರು ನೀಡಿದರೂ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಂಡಿಲ್ಲ’ ಎಂದು ಆಲಿಯಾ ವಕೀಲರು ಕೋರ್ಟ್​ಗೆ ಹೇಳಿದ್ದಾರೆ.

ಇದನ್ನೂ ಓದಿ
Nawazuddin Siddiqui Birthday: ನವಾಜುದ್ದೀನ್ ಸಿದ್ದಿಕಿ ನಟನೆಯ ಈ ಕಿರುಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ
‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ
ಕನ್ನಡ ಚಿತ್ರರಂಗ ಉದಾಹರಿಸಿ ಬಾಲಿವುಡ್​ ಕಿವಿಹಿಂಡಿದ ನವಾಜುದ್ದೀನ್ ಸಿದ್ದಿಕಿ; ‘ಸೇಕ್ರೆಡ್ ಗೇಮ್ಸ್’ ನಟ ಹೇಳಿದ್ದೇನು?
47ರ ಪ್ರಾಯದ ನಟನಿಗೆ 20ರ ಹರೆಯದ ನಟಿ ಜೋಡಿ; ಇದು ಸರಿ ಎಂದು ಸಮರ್ಥಿಸಿಕೊಂಡ ಕಂಗನಾ ರಣಾವತ್​

‘ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರು ಕಳೆದ ಏಳು ದಿನಗಳಿಂದ ಆಲಿಯಾಗೆ ಯಾವುದೇ ಆಹಾರ, ಹಾಸಿಗೆ ನೀಡಿಲ್ಲ. ಬಾತ್​ರೂಂ ಬಳಕೆಗೆ ಅವಕಾಶ ನೀಡಿಲ್ಲ. ಆಲಿಯಾ ಅವರನ್ನು ತಡೆಯಲು ಅಂಗರಕ್ಷಕರನ್ನು ನೇಮಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಆಲಿಯಾ ಪರ ವಕೀಲರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ

‘ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲು ಆಲಿಯಾ ಸಹಿ ಪಡೆಯಬೇಕಿತ್ತು. ಇದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದರೂ ನಮ್ಮ ತಂಡ ಸಾಹಸ ಮಾಡಿ ಸಹಿ ಪಡೆದಿದೆ. ಆಲಿಯಾ ರಕ್ಷಣೆಗೆ ಯಾವುದೇ ಪೊಲೀಸ್ ಅಧಿಕಾರಿ ಬರಲಿಲ್ಲ’ ಎಂದು ಆಲಿಯಾ ಪರ ವಕೀಲರು ದೂರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Wed, 1 February 23