ನಯನತಾರಾ ಹಾಗೂ ವಿಘ್ನೇಶ್ ಸಂಸಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು

|

Updated on: Mar 03, 2024 | 9:45 AM

ನಯನತಾರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಘ್ನೇಶ್ ಶಿವನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ ಎಂದು ವರದಿ ಬಿತ್ತರ ಆಗಿದೆ. ಅಸಲಿಗೆ ಅವರು ಪತಿಯನ್ನು ಅನ್​ಫಾಲೋ ಮಾಡಿಯೇ ಇಲ್ಲ. ಇದರ ಸ್ಕ್ರೀನ್​ಶಾಟ್​ಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ. ನಯನತಾರಾಗೆ ಆಗದೇ ಇರುವ ಯಾರೋ ಈ ಕೆಲಸ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ನಯನತಾರಾ ಹಾಗೂ ವಿಘ್ನೇಶ್ ಸಂಸಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು
ನಯನತಾರಾ
Follow us on

ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಹಾಗೂ ನಯನತಾರಾ ಅವರು ಪ್ರೀತಿಸಿ ಮದುವೆ ಆದವರು. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ, ಕೆಲವರು ಕಿಡಿಗೇಡಿಗಳು ಇವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಯನತಾರಾ ಫ್ಯಾನ್ಸ್ ಅಲ್ಲ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ. ನಯನತಾರಾ ಅವರು ಕಾಲಿವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

ನಯನತಾರಾ ದಕ್ಷಿಣದ ಬೇಡಿಕೆಯ ನಟಿಯಾಗಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ವಿಘ್ನೇಶ್ ಶಿವನ್ ಅವರು ತಮಿಳು ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಇಬ್ಬರು ಮದುವೆ ಆಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಇವರು ಅವಳಿ ಮಕ್ಕಳು ಪಡೆದಿದ್ದಾರೆ. ಇವರ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಲ್ಲಿ ನಿಜವಿಲ್ಲ ಎಂಬುದನ್ನು ಫ್ಯಾನ್ಸ್ ಸಾಬೀತು ಮಾಡಿದ್ದಾರೆ.

ನಯನತಾರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಘ್ನೇಶ್ ಶಿವನ್ ಅವರನ್ನು ಅನ್​ಫಾಲೋ ಮಾಡಿದ್ದಾರೆ ಎಂದು ವರದಿ ಬಿತ್ತರ ಆಗಿದೆ. ಅಸಲಿಗೆ ಅವರು ಪತಿಯನ್ನು ಅನ್​ಫಾಲೋ ಮಾಡಿಯೇ ಇಲ್ಲ. ಇದರ ಸ್ಕ್ರೀನ್​ಶಾಟ್​ಗಳನ್ನು ಶೇರ್ ಮಾಡಿಕೊಳ್ಳಲಾಗುತ್ತಿದೆ. ನಯನತಾರಾಗೆ ಆಗದೇ ಇರುವ ಯಾರೋ ಈ ಕೆಲಸ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ನಯನತಾರಾ ಅವರು ‘ಜವಾನ್’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯಗೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರು ಶಾರುಖ್ ಖಾನ್​ಗೆ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಾಗಿದೆ. ಹಾಗಂತ ಅವರು ಕೇವಲ ಬಿಗ್ ಬಜೆಟ್ ಸಿನಿಮಾಗಳನ್ನು ಮಾತ್ರ ಮಾಡುತ್ತಿಲ್ಲ. ಹೊಸಬರ ಚಿತ್ರವನ್ನು ಕೂಡ ಒಪ್ಪಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ‘ಜೈ ಶ್ರೀರಾಮ್’: ರಾಮನ ಬಗ್ಗೆ ವಿವಾದಾತ್ಮಕ ಡೈಲಾಗ್; ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ನಯನತಾರಾ

ಇತ್ತೀಚೆಗೆ ನಯನತಾರಾ ನಟಿಸಿದ ‘ಅನ್ನಪೂರ್ಣಿ’ ಸಿನಿಮಾ ವಿವಾದ ಸೃಷ್ಟಿ ಮಾಡಿತ್ತು. ಈ ಚಿತ್ರದಲ್ಲಿ ಬಳಕೆ ಆದ ವಾಕ್ಯದ ಬಗ್ಗೆ ಅನೇಕರು ತಕರಾರು ತೆಗೆದಿದ್ದರು. ರಾಮ ಕೂಡ ಮಾಂಸ ಸೇವನೆ ಮಾಡುತ್ತಿದ್ದ ಎಂಬ ವಾಕ್ಯ ಸಾಕಷ್ಟು ಟೀಕೆಯನ್ನು ಎದುರಿಸಿತ್ತು. ನಂತರ ಈ ವಾಕ್ಯಕ್ಕೆ ಕತ್ತರಿ ಹಾಕಿ ಮತ್ತೆ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:43 pm, Sat, 2 March 24