Salman Khan: ಸಲ್ಮಾನ್​ ಖಾನ್​ ಜತೆ ಕ್ಲ್ಯಾಶ್​ ಮಾಡಿಕೊಳ್ಳಲು ಯಾರೂ ಸಿದ್ಧರಿಲ್ಲ; ‘ಟೈಗರ್​ 3’ ಚಿತ್ರದ ಹವಾ ಇದು

‘ಟೈಗರ್​ 3’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅವರಿಗೆ ಜೋಡಿಯಾಗಿ ಕತ್ರಿನಾ ಕೈಫ್​ ನಟಿಸಿದ್ದಾರೆ. ಇಮ್ರಾನ್​ ಹಷ್ಮಿ ಅವರು ವಿಲನ್​ ಪಾತ್ರ ಮಾಡಿದ್ದಾರೆ. ಶಾರುಖ್​ ಖಾನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇನ್ನೂ ಕೆಲವು ನಟರು ಸರ್ಪ್ರೈಸ್​ ಎಂಟ್ರಿ ನೀಡುವ ಸಾಧ್ಯತೆ ಕೂಡ ಇದೆ. ಈ ಎಲ್ಲ ಕಾರಣಗಳಿಂದ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ.

Salman Khan: ಸಲ್ಮಾನ್​ ಖಾನ್​ ಜತೆ ಕ್ಲ್ಯಾಶ್​ ಮಾಡಿಕೊಳ್ಳಲು ಯಾರೂ ಸಿದ್ಧರಿಲ್ಲ; ‘ಟೈಗರ್​ 3’ ಚಿತ್ರದ ಹವಾ ಇದು
ಸಲ್ಮಾನ್​ ಖಾನ್​

Updated on: Nov 07, 2023 | 8:07 PM

ದೊಡ್ಡ ಸ್ಟಾರ್​ ನಟರ ಸಿನಿಮಾಗಳು ಒಟ್ಟಿಗೆ ರಿಲೀಸ್​ ಆದರೆ ಬಾಕ್ಸ್​ ಆಫೀಸ್​ನಲ್ಲಿ ಅನಗತ್ಯವಾಗಿ ಕ್ಲ್ಯಾಶ್​ ಉಂಟಾಗುತ್ತದೆ. ಅದರಿಂದ ನಿರ್ಮಾಪಕರಿಗೆ ತೊಂದರೆ ಆಗುತ್ತದೆ. ಅದರಲ್ಲೂ ಸಲ್ಮಾನ್​ ಖಾನ್​ (Salman Khan) ಅವರಂತಹ ಮಾಸ್​ ಹೀರೋಗಳ ಸಿನಿಮಾದ ಎದುರು ಬೇರೆ ಚಿತ್ರ ಬಿಡುಗಡೆಯಾದರೆ ಅಂಥ ಸಿನಿಮಾಗೆ ಹೀನಾಯ ಸೋಲು ಖಚಿತ. ಅಷ್ಟರಮಟ್ಟಿಗೆ ಹವಾ ಕ್ರಿಯೇಟ್​ ಮಾಡಿದ್ದಾರೆ ಸಲ್ಮಾನ್​ ಖಾನ್​. ಕಳೆದ ಒಂದಷ್ಟು ವರ್ಷಗಳಿಂದ ಸಲ್ಮಾನ್​ ಖಾನ್​ ಎದುರು ಕ್ಲ್ಯಾಶ್​ ಮಾಡಿಕೊಳ್ಳಲು ಬಾಲಿವುಡ್​ನ (Bollywood) ಬೇರೆ ಯಾವುದೇ ಹೀರೋಗಳು ಮನಸ್ಸು ಮಾಡಿಲ್ಲ. ಈಗ ‘ಟೈಗರ್​ 3’ (Tiger 3 Movie) ಸಿನಿಮಾದ ವಿಚಾರದಲ್ಲೂ ಅದು ಮುಂದುವರಿಯುತ್ತಿದೆ.

ನವೆಂಬರ್​ 12ರಂದು ‘ಟೈಗರ್​ 3’ ಬಿಡುಗಡೆ ಆಗುತ್ತಿದೆ. ಇದು ದೀಪಾವಳಿ ಹಬ್ಬದ ಸಂದರ್ಭ. ಹಾಗಿದ್ದರೂ ಕೂಡ ಸಲ್ಲು ಸಿನಿಮಾದ ಎದುರು ಬೇರೆ ಹೀರೋಗಳ ಚಿತ್ರಗಳು ಸ್ಪರ್ಧೆಗೆ ಇಳಿಯುತ್ತಿಲ್ಲ. ಆ ಮೂಲಕ ಸಲ್ಮಾನ್​ ಖಾನ್​ ಅವರು ಸಿಂಗಲ್​ ಆಗಿ ಅಬ್ಬರಿಸಲಿದ್ದಾರೆ. ಮೊದಲ ದಿನ ‘ಟೈಗರ್​ 3’ ಸಿನಿಮಾದ ಎಂಟ್ರಿ ಸಖತ್​ ರಾಯಲ್​ ಆಗಿರಲಿದೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಬಂಪರ್​ ಬೆಳೆ ತೆಗೆಯುವ ಸೂಚನೆ ಸಿಕ್ಕಿದೆ. ಮೊದಲ ದಿನ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಎಲ್ಲರಲ್ಲೂ ಇದೆ.

ಸಲ್ಮಾನ್​ ಖಾನ್​ ನಟನೆಯ ‘ದಬಂಗ್​’, ‘ರೆಡಿ’, ‘ಬಾಡಿಗಾರ್ಡ್​’, ‘ಏಕ್​ ಥ ಟೈಗರ್​’, ‘ದಬಂಗ್​ 2’, ‘ಜೈ ಹೋ’, ‘ಕಿಕ್​’, ‘ಬಜರಂಗಿ ಭಾಯಿಜಾನ್​’, ‘ಪ್ರೇಮ್​ ರತನ್​ ಧನ್​ ಪಾಯೋ’, ‘ಸುಲ್ತಾನ್​’, ‘ಟ್ಯೂಬ್​ಲೈಟ್​’, ‘ರೇಸ್​ 3’, ‘ಭಾರತ್​’, ‘ದಬಂಗ್​ 3’, ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾಗಳ ಜೊತೆ ಬೇರೆ ಯಾವುದೇ ಹೀರೋಗಳೂ ಕ್ಲ್ಯಾಶ್​ ಮಾಡಿಕೊಳ್ಳಲು ಮುಂದೆಬರಲಿಲ್ಲ. ಅರಷ್ಟಮಟ್ಟಿಗೆ ಇದೆ ಸಲ್ಲು ಹವಾ. ಈಗ ‘ಟೈಗರ್​ 3’ ಸಿನಿಮಾದ ಎದುರು ಕೂಡ ಯಾರೂ ತೊಡೆ ತಟ್ಟುತ್ತಿಲ್ಲ. ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ.

ಇದನ್ನೂ ಓದಿ: Tiger 3: ‘ಟೈಗರ್​ 3’ ಸಿನಿಮಾದಲ್ಲಿ ಸಲ್ಮಾನ್​, ಶಾರುಖ್​ ಜೊತೆ ಹೃತಿಕ್​ ರೋಷನ್​? ಅಭಿಮಾನಿಗಳಿಗೆ ಹಬ್ಬ

‘ಟೈಗರ್​ 3’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಅವರಿಗೆ ಜೋಡಿಯಾಗಿ ಕತ್ರಿನಾ ಕೈಫ್​ ನಟಿಸಿದ್ದಾರೆ. ಅವರು ಈ ಸಿನಿಮಾದಲ್ಲಿ ಸಾಹಸ ಮೆರೆದಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಈ ದೃಶ್ಯಗಳಿಗಾಗಿ ಅವರು ಸಾಕಷ್ಟು ತರಬೇತಿ ಪಡೆದುಕೊಂಡಿದ್ದರು. ಅದರ ಕಷ್ಟ ಹೇಗಿತ್ತು ಎಂಬುದನ್ನು ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಮೂಲಕ ಕತ್ರಿನಾ ಕೈಫ್​ ತಿಳಿಸಿದ್ದರು. ಈ ಸಿನಿಮಾಗೆ ಮನೀಶ್​ ಶರ್ಮಾ ನಿರ್ದೇಶನ ಮಾಡಿದ್ದು, ಇಮ್ರಾನ್​ ಹಷ್ಮಿ ಅವರು ವಿಲನ್​ ಪಾತ್ರ ಮಾಡಿದ್ದಾರೆ. ಶಾರುಖ್​ ಖಾನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಇನ್ನೂ ಕೆಲವು ನಟರು ಸರ್ಪ್ರೈಸ್​ ಎಂಟ್ರಿ ನೀಡುವ ಸಾಧ್ಯತೆ ಕೂಡ ಇದೆ. ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆ ಮೂಲಕ ‘ಟೈಗರ್​ 3’ ಸಿನಿಮಾ ಸಿದ್ಧವಾಗಿದ್ದು, ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us