ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ (Deepika Padukone) ಮದುವೆ ಆಗಿ ಹಲವು ವರ್ಷಗಳ ಬಳಿಕ ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಇವರ ಘೋಷಣೆ ಅನೇಕರಿಗೆ ಅಚ್ಚರಿ ಮೂಡಿಸಿದೆ. ಸೆಪ್ಟೆಂಬರ್ನಲ್ಲಿ ದೀಪಿಕಾ ಹಾಗೂ ರಣವೀರ್ ಸಿಂಗ್ ಪಾಲಕರಾಗಿ ಪ್ರಮೋಟ್ ಆಗಲಿದ್ದಾರೆ. ರಣವೀರ್, ದೀಪಿಕಾ ಘೋಷಣೆ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಹೊಟ್ಟೆ ಸ್ವಲ್ಪ ದೊಡ್ಡದಾಗಿದ್ದರೂ ಪ್ರೆಗ್ನೆಂಟ್ ವಿಚಾರ ಹರಿದಾಡುತ್ತದೆ. ಆದರೆ, ಕೆಲವೊಮ್ಮೆ ಆ ರೀತಿ ಆಗುವುದಿಲ್ಲ. ಏಕಾಏಕಿ ಘೋಷಣೆಯಿಂದ ಅನೇಕರಿಗೆ ಅಚ್ಚರಿ ಆಗುತ್ತದೆ. ಈ ರೀತಿ ಅಚ್ಚರಿ ತಂದ ಘೋಷಣೆಗಳು ಇವು.
ಸೋನಂ ಕಪೂರ್ ಹಾಗೂ ಆನಂದ್ ಅಹೂಜಾ ಅವರು ಮದುವೆ ಆಗಿ ಕೆಲವು ವರ್ಷಗಳ ಬಳಿಕ ಮಗುವನ್ನು ಪಡೆದರು. ಬೇಬಿ ಬಂಪ್ ಫೋಟೋ ಹಂಚಿಕೊಂಡು ಸೋನಂ ಈ ವಿಚಾರ ರಿವೀಲ್ ಮಾಡಿದ್ದರು. ಈ ವಿಚಾರ ಸಾಕಷ್ಟು ಸದ್ದು ಮಾಡಿತ್ತು.
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರು 2016ರಲ್ಲಿ ಮಗು ಹೊಂದುತ್ತಿರುವ ಬಗ್ಗೆ ಘೋಷಣೆ ಮಾಡಿದರು. ಸೋಶಿಯಲ್ ಮೀಡಿಯಾ ಮೂಲಕ ಸೋನಂ ಕಪೂರ್ ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದರು. ಅವರ ಬೇಬಿಬಂಪ್ ಫೋಟೋ ಗಮನ ಸೆಳೆಯಿತು.
ಭಾರತ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯಾ ಹಾಗೂ ಅವರ ಪತ್ನಿ ನಟಿ ನಟಾಶಾ ಮದುವೆಗೂ ಮೊದಲೇ ಮಗು ಹೊಂದಿದರು. ಡೇಟಿಂಗ್ ಮಾಡುವಾಗಲೇ ನಟಾಶಾ ಪ್ರೆಗ್ನೆಂಟ್ ಆದರು. ಮಗು ಹುಟ್ಟಿದ ಬಳಿಕ ಮದುವೆ ಆದರು ಇವರು.
ನೇಹಾ ಧೂಪಿಯಾ ಹಾಗೂ ಅಂಗದ್ ಬೇಡಿ ಮದುವೆ ಆದ ಕೆಲವೇ ತಿಂಗಳಲ್ಲಿ ಮಗುವಿನ ವಿಚಾರ ರಿವೀಲ್ ಮಾಡಿದರು. ಈ ಕಾರಣಕ್ಕೆ ನೇಹಾ ಅವರು ಸಾಕಷ್ಟು ಟ್ರೋಲ್ ಆಗಬೇಕಾಯಿತು.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮದುವೆ ಆದ ನಂತರ ಹಾಯಾಗಿ ಸುತ್ತಾಟ ನಡೆಸಿದರು. ಕೆಲವು ವರ್ಷಗಳ ಬಳಿಕ ಮಗು ಹೊಂದಿದರು. ಮೊದಲ ಮಗುವಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಆದರೆ, ಎರಡನೇ ಮಗುವಿನ ವಿಚಾರವನ್ನು ಗುಟ್ಟಾಗಿಯೇ ಇಡಲಾಗಿತ್ತು.
ಬಾಲಿವುಡ್ ಕಪಲ್ ವರುಣ್ ಧವನ್ ಹಾಗೂ ನಟಾಶಾ ಅವರು ತಮ್ಮದೇ ಸ್ಟೈಲ್ನಲ್ಲಿ ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದ್ದರು. ಬ್ಲಾಕ್ ಆ್ಯಂಡ್ ವೈಟ್ ಫೋಟೋ ಹಂಚಿಕೊಂಡಿದ್ದ ವರುಣ್ ಧವನ್ ಅವರು ನಟಾಶಾ ಹೊಟ್ಟೆಗೆ ಮುತ್ತಿಡುತ್ತಿದ್ದರು. ಈ ಮೂಲಕ ವಿಚಾರ ರಿವೀಲ್ ಮಾಡಿದ್ದರು.
ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ 2022ರ ಏಪ್ರಿಲ್ 14ರಂದು ಮದುವೆ ಆದರು. ಮದುವೆ ಆದ ಕೆಲವೇ ತಿಂಗಳಲ್ಲಿ ಪ್ರೆಗ್ನೆನ್ಸಿ ವಿಚಾರ ರಿವೀಲ್ ಮಾಡಿದರು ಆಲಿಯಾ. ಮದುವೆ ಆದ ಕೇವಲ ಏಳು ತಿಂಗಳಿಗೆ ಮಗು ಹೊಂದಿದರು ಆಲಿಯಾ.
ಬಿಪಾಶಾ ಬಸ್ಸು ಅವರು ಬೇಬಿ ಬಂಪ್ ಫೋಟೋ ಹಂಚಿಕೊಂಡು ಸಿಹಿ ಸುದ್ದಿ ನೀಡಿದ್ದರು. ಅವರು ಸದ್ಯ ಚಿತ್ರರಂಗದಿಂದ ದೂರವೇ ಇದ್ದಾರೆ. ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.
ಶಾಹಿದ್ ಕಪೂರ್ ಹಾಗೂ ಮೀರಾ ಕಪೂರ್ 2018ರಲ್ಲಿ ಎರಡನೇ ಮಗು ಹೊಂದುತ್ತಿರುವ ಬಗ್ಗೆ ಘೋಷಣೆ ಮಾಡಿದರು. ತಾನು ಅಕ್ಕ ಆಗುತ್ತಿದ್ದೇನೆ ಎಂದು ಶಾಹಿದ್ ಹಾಗೂ ಮೀರಾ ಮಗಳು ಮಿಶಾ ಅನೌನ್ಸ್ ಮಾಡುವ ರೀತಿಯಲ್ಲಿ ಈ ಫೋಟೋ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ