‘ಸೆನ್ಸಾರ್ ಮಂಡಳಿ ನಮ್ಮ ಚಿತ್ರವನ್ನು ಕೊಂದಿದೆ’; ಖ್ಯಾತ ನಿರ್ದೇಶಕನ ಗಂಭೀರ ಆರೋಪ

|

Updated on: Jan 10, 2024 | 1:55 PM

‘ಒಎಂಜಿ 2’ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದ್ದರಿಂದ 18 ವರ್ಷ ಕೆಳಗಿನವರಿಗೆ ಸಿನಿಮಾ ನೋಡೋಕೆ ಸಾಧ್ಯವಾಗಿಲ್ಲ. ಮೂಲ ಉದ್ದೇಶ ನಾಶ ಆಗುವುದರ ಜೊತೆ ಚಿತ್ರದ ಗಳಿಕೆಯೂ ತಗ್ಗಿತು. ಈ ಬಗ್ಗೆ ಅಮಿತ್ ಮಾತನಾಡಿದ್ದಾರೆ.

‘ಸೆನ್ಸಾರ್ ಮಂಡಳಿ ನಮ್ಮ ಚಿತ್ರವನ್ನು ಕೊಂದಿದೆ’; ಖ್ಯಾತ ನಿರ್ದೇಶಕನ ಗಂಭೀರ ಆರೋಪ
ಅಕ್ಷಯ್ ಕುಮಾರ್
Follow us on

ಸನ್ನಿ ಡಿಯೋಲ್ ನಟನೆಯ ‘ಗದರ್ 2’ (Gadar 2 Movie) ಹಾಗೂ ಅಕ್ಷಯ್​ ಕುಮಾರ್, ಪಂಕಜ್ ತ್ರಿಪಾಠಿ ನಟನೆಯ ‘ಒಎಂಜಿ 2’ ಸಿನಿಮಾ ಕಳೆದ ವರ್ಷ ಒಟ್ಟಿಗೆ ರಿಲೀಸ್ ಆದವು. ‘ಗದರ್ 2’ ಚಿತ್ರ ಭಾರತದಲ್ಲಿ 500+ ಕೋಟಿ ರೂಪಾಯಿ ಗಳಿಕೆ ಮಾಡಿತು. ‘ಒಎಂಜಿ 2’ ಕಲೆಕ್ಷನ್ 100 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ. ಈ ಚಿತ್ರ ಕಡಿಮೆ ಗಳಿಕೆ ಮಾಡಲು ಸೆನ್ಸಾರ್ ಮಂಡಳಿ ಮಾಡಿರುವ ತಪ್ಪು ಕಾರಣ ಎಂದು ನಿರ್ದೇಶಕ ಅಮಿತ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.

‘ಒಎಂಜಿ 2’ ಸಿನಿಮಾದಲ್ಲಿ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಾಗಿದೆ. ಭಾರತದಲ್ಲಿರುವ ಮಕ್ಕಳಿಗೆ ಈ ಬಗ್ಗೆ ಅರಿವು ಕಡಿಮೆ. ಈ ವಿಚಾರದಲ್ಲಿ ಅನೇಕರು ಓಪನ್ ಆಗಿಲ್ಲ. ಈ ಬಗ್ಗೆ ಶಿಕ್ಷಣ ಸಿಗಲಿ ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಆದರೆ, ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದ್ದರಿಂದ 18 ವರ್ಷ ಕೆಳಗಿನವರಿಗೆ ಸಿನಿಮಾ ನೋಡೋಕೆ ಸಾಧ್ಯವಾಗಿಲ್ಲ. ಮೂಲ ಉದ್ದೇಶ ನಾಶ ಆಗುವುದರ ಜೊತೆ ಚಿತ್ರದ ಗಳಿಕೆಯೂ ತಗ್ಗಿತು. ಈ ಬಗ್ಗೆ ಅಮಿತ್ ಮಾತನಾಡಿದ್ದಾರೆ.

‘ಒಂದೊಮ್ಮೆ ನಮ್ಮ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಗದೇ ಇದ್ದರೆ ನಾವು ‘ಗದರ್​ 2’ ಚಿತ್ರಕ್ಕೆ ಸರಿಸಮನಾಗಿ ಫೈಟ್ ಕೊಡುತ್ತಿದ್ದೆವು. ಎ ಪ್ರಮಾಣ ಪತ್ರವನ್ನು ನೀಡದೇ ಇದ್ದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮ್ಮ ಸಿನಿಮಾ ನೋಡಲು ಬರುತ್ತಿದ್ದರು’ ಎಂದಿದ್ದಾರೆ ಅಮಿತ್ ರಾಯ್. ‘ಗದರ್ 2’ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 686 ಕೋಟಿ ರೂಪಾಯಿ ಹಾಗೂ  ‘ಒಎಂಜಿ 2’ ವಿಶ್ವ ಮಟ್ಟದಲ್ಲಿ 221.75 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ: 99ನೇ ವಯಸ್ಸಿಗೆ ಪಂಕಜ್​ ತ್ರಿಪಾಠಿ ತಂದೆ ನಿಧನ; ‘ಒಎಂಜಿ 2’ ಗೆಲುವಿನ ನಡುವೆ ಆವರಿಸಿತು ಶೋಕ

‘ಎ ಪ್ರಮಾಣಪತ್ರ ನೀಡಿ ನನ್ನ ಸಿನಿಮಾನ ಕೊಲ್ಲಲಾಗಿದೆ. ಸೆನ್ಸಾರ್ ಮಂಡಳಿ ಆರ್ಥಿಕವಾಗಿ ಹಾಗೂ ಸಿನಿಮಾದ ವಿಷಯವಾಗಿ ನನಗೆ ನೋವುಂಟು ಮಾಡಿದೆ’ ಎಂದಿದ್ದಾರೆ ಅಮಿತ್. ಈ ಚಿತ್ರವು 27 ಚೇಂಜ್​ಗಳನ್ನು ಮಾಡಿಸಿತ್ತು. ಕೆಲವು ಕಡೆ ಕತ್ತರಿ ಹಾಕಲು ಸೂಚಿಸಿತ್ತು. ಲೈಂಗಿಕ ಶಿಕ್ಷಣ ಹಾಗೂ ಇತರ ವಿಚಾರಗಳನ್ನು ಸಿನಿಮಾದಲ್ಲಿ ಹೇಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:10 am, Wed, 10 January 24