‘ನೀನು ಅಕ್ಷಯ್​ ಕುಮಾರ್​​ನ ಮದ್ವೆ ಆಗ್ತೀಯಾ’; ಟ್ವಿಂಕಲ್​ ಖನ್ನಾ ಕೈ ನೋಡಿ ಭವಿಷ್ಯ ನುಡಿದಿದ್ದ ಜ್ಯೋತಿಷಿ

| Updated By: ರಾಜೇಶ್ ದುಗ್ಗುಮನೆ

Updated on: Dec 26, 2021 | 5:55 PM

ಜ್ಯೋತಿಷಿ ಒಬ್ಬರು ಟ್ವಿಂಕಲ್​ ಯಾರನ್ನು ಮದುವೆ ಆಗುತ್ತಾರೆ ಎಂಬುದನ್ನು ಹೇಳಿದ್ದರಂತೆ. ಅಚ್ಚರಿ ಎಂದರೆ, ಅಕ್ಷಯ್​ ಎಂದರೆ ಯಾರು ಎಂಬುದೇ ಟ್ವಿಂಕಲ್​ಗೆ ಆಗ ಗೊತ್ತಿರಲಿಲ್ಲ.

‘ನೀನು ಅಕ್ಷಯ್​ ಕುಮಾರ್​​ನ ಮದ್ವೆ ಆಗ್ತೀಯಾ’; ಟ್ವಿಂಕಲ್​ ಖನ್ನಾ ಕೈ ನೋಡಿ ಭವಿಷ್ಯ ನುಡಿದಿದ್ದ ಜ್ಯೋತಿಷಿ
ಅಕ್ಷಯ್​-ಟ್ವಿಂಕಲ್​
Follow us on

ಅಕ್ಷಯ್​ ಕುಮಾರ್​ (Akshay Kumar) ಹಾಗೂ ಟ್ವಿಂಕಲ್​ ಖನ್ನಾ (Twinkle Khanna) ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಇವರ ಮಧ್ಯೆ ಮನಸ್ತಾಪ ಮೂಡಿದ ಉದಾಹರಣೆ ತುಂಬಾನೇ ಕಡಿಮೆ. ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ, ಸುಖವಾಗಿ ಜೀವನ ನಡೆಸುತ್ತಿದ್ದಾರೆ. ಇವರದ್ದು ಪ್ರೇಮ ವಿವಾಹ. ಅಚ್ಚರಿ ಎಂದರೆ, ಒಬ್ಬರಿಗೊಬ್ಬರು ಪರಿಚಯ ಆಗುವ ಮೊದಲೇ ಟ್ವಿಂಕಲ್​ ಖನ್ನಾಗೆ ಜ್ಯೋತಿಷಿ ಒಬ್ಬರು ಮದುವೆ ವಿಚಾರದಲ್ಲಿ ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ ಅನ್ನೋದು ಅಚ್ಚರಿಯ ವಿಚಾರ.

ಜಾಕಿ ಶ್ರಾಫ್​ ಜತೆ ಟ್ವಿಂಕಲ್​ ಖನ್ನಾ ಚಾಟ್​ ಶೋ ಒಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಟ್ವಿಂಕಲ್​ ಖನ್ನಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ. ಟ್ವಿಂಕಲ್​ ತಂದೆ ರಾಜೇಶ್​ ಖನ್ನಾ ಭವಿಷ್ಯವನ್ನು ಕೇಳಲು ಜ್ಯೋತಿಷಿ ಒಬ್ಬರನ್ನು ಇಟ್ಟುಕೊಂಡಿದ್ದರು. ಆ ಜ್ಯೋತಿಷಿ ಟ್ವಿಂಕಲ್​ ಯಾರನ್ನು ಮದುವೆ ಆಗುತ್ತಾರೆ ಎಂಬುದನ್ನು ಹೇಳಿದ್ದರಂತೆ. ಅಚ್ಚರಿ ಎಂದರೆ, ಅಕ್ಷಯ್​ ಎಂದರೆ ಯಾರು ಎಂಬುದೇ ಟ್ವಿಂಕಲ್​ಗೆ ಆಗ ಗೊತ್ತಿರಲಿಲ್ಲ.

‘ನನಗೆ ಜ್ಯೋತಿಷ್ಯದ ಬಗ್ಗೆ ನಂಬಿಕೆ ಇಲ್ಲ. ಆದರೆ ನನ್ನ ತಂದೆ ನನಗೆ ಆ ವಿಷಯಗಳ ಬಗ್ಗೆ ಹೇಳುತ್ತಿದ್ದರು.  ಅವರ ಬಳಿ ಒಬ್ಬ ಜ್ಯೋತಿಷಿ ಇದ್ದರು. ಆ ಜ್ಯೋತಿಷಿ ನನ್ನ ಭವಿಷ್ಯ ಹೇಳಿದ್ದರು. ‘ನೀನು ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗುತ್ತೀಯಾ’ ಎಂದಿದ್ದರು. ನಾನು, ‘ ಯಾವ ಅಕ್ಷಯ್​ ಕುಮಾರ್? ಪೂರ್ಣ ಹೆಸರು ಏನು’ ಎಂದು ಕೇಳಿದ್ದೆ. ನನಗೆ ಆಗ ಅಕ್ಷಯ್​ ಪರಿಚಯವೇ ಇರಲಿಲ್ಲ’ ಎಂದಿದ್ದಾರೆ ಟ್ವಿಂಕಲ್​.

ಟ್ವಿಂಕಲ್​ ನಟಿ ಆಗಿದ್ದರು. ಬರಹ ಅವರ ವೃತ್ತಿ ಆಗಿದೆ. ಈ ಬಗ್ಗೆಯೂ ಭವಿಷ್ಯ ನುಡಿದಿದ್ದರಂತೆ ಆ ಜ್ಯೋತಿಷಿ. ‘ಮದುವೆ ಭವಿಷ್ಯ ಹೇಳಿದ ಕೆಲವು ವರ್ಷಗಳ ನಂತರ ತಂದೆ ನನ್ನ ಮನೆಗೆ ಆ ಜ್ಯೋತಿಷಿಯೊಂದಿಗೆ ಬಂದಿದ್ದರು. ನನಗೆ ಈ ಬಗ್ಗೆ ಸ್ವಲ್ಪವೂ ನಂಬಿಕೆ ಇಲ್ಲ ಎಂದು ಹೇಳಿದ್ದೆ. ಆದಾಗ್ಯೂ ಕುತೂಹಲಕ್ಕೆ ಭವಿಷ್ಯದಲ್ಲಿ ನಾನು ಏನು ಆಗುತ್ತೇನೆ ಎಂಬುದನ್ನು ಕೇಳಿದೆ. ‘ನೀನು ಬರಹಗಾರ್ತಿ ಆಗುತ್ತೀಯ’ ಎಂದರು. ಇಡೀ ಜೀವಮಾನದಲ್ಲಿ ನಾನು ಏನನ್ನೂ ಬರೆದಿರಲಿಲ್ಲ. ಹಾಗಿರುವಾಗ ನಾನು ಬರಹಗಾರ್ತಿ ಆಗುವುದೇ ಎಂದು ನಕ್ಕಿದ್ದೆ. ಈಗ ಏನಾಗಿದೆ ಎಂಬುದನ್ನು ನೀವೇ ನೋಡಿದ್ದೀರಿ’ ಎಂದಿದ್ದಾರೆ ಅವರು. ಟ್ವಿಂಕಲ್​ ಕೆಲ ಪುಸ್ತಕಗಳನ್ನು ಬರೆದಿದ್ದಾರೆ.

ಅಕ್ಷಯ್​ ಕುಮಾರ್​ ಹಾಗೂ ಟ್ವಿಂಕಲ್​ 2001ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿಯ ಮಗ ಆರವ್​ ಇಂಗ್ಲೆಂಡ್​ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾನೆ. ಮಗಳಿಗೆ ನಿತಾರಾ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ಕತ್ರಿನಾ ಕೈಫ್​ ಮದುವೆ ವಿಚಾರದಲ್ಲಿ ಜೋಕ್​ ಮಾಡಿದ ಅಕ್ಷಯ್​ ಕುಮಾರ್​

ಸಲ್ಮಾನ್​ ಖಾನ್​ಗೆ ಹಾವು ಕಡಿತ; ಮಧ್ಯ ರಾತ್ರಿ ಆಸ್ಪತ್ರೆಗೆ ದಾಖಲು: ಈಗ ಹೇಗಿದೆ ಸಲ್ಲು ಆರೋಗ್ಯ ಸ್ಥಿತಿ?