ಈ ನಟಿಯನ್ನು ಅತಿಯಾಗಿ ಪ್ರೀತಿಸಿದ್ದ ಧರ್ಮೇಂದ್ರ; ಬ್ರೇಕಪ್ ಆಗಿದ್ದೇಕೆ?
ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಸಂಬಂಧದ ಬಗ್ಗೆ ಆಗಾಗ ಚರ್ಚೆ ಆಗುತ್ತಾ ಇರುತ್ತದೆ. ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದ ನಂತರ ಧರ್ಮೇಂದ್ರ ಅವರು ಹೇಮಾ ಮಾಲಿನಿ ಅಲ್ಲ, ಇನ್ನೊಬ್ಬ ನಟಿಯನ್ನು ಪ್ರೀತಿಸುತ್ತಿದ್ದರು. ಅದುವೇ ಮೀನಾ ಕುಮಾರಿ.
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರನ್ನು ಇಂದು ಪರಿಚಯಿಸುವ ಅಗತ್ಯವಿಲ್ಲ. ಇಂದಿಗೂ ಧರ್ಮೇಂದ್ರರನ್ನು ಹಿರಿತೆರೆಯಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಧರ್ಮೇಂದ್ರ ಬಾಲಿವುಡ್‌ನ ಅನೇಕ ಹೊಸ ಹೀರೋಗಳಿಗೆ ಸ್ಫೂರ್ತಿ ಆಗಿದ್ದಾರೆ. ಧರ್ಮೇಂದ್ರ ಅವರು ಬಾಲಿವುಡ್ ಮತ್ತು ಅಭಿಮಾನಿಗಳ ಹೃದಯವನ್ನು ಆಳಿದ ಸಮಯವಿತ್ತು. ಬಾಲಿವುಡ್‌ನಲ್ಲಿ ಧರ್ಮೇಂದ್ರ ಬ್ಯುಸಿ ಇರುವಾಗ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಗಳು ನಡೆದಿದ್ದವು. ಧರ್ಮೇಂದ್ರ ಹಾಗೂ ನಟಿ ಹೇಮಾ ಮಾಲಿನಿ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಧರ್ಮೇಂದ್ರ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿಯನ್ನು ವಿವಾಹ ಆಗಿದ್ದರು.
ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಸಂಬಂಧದ ಬಗ್ಗೆ ಆಗಾಗ ಚರ್ಚೆ ಆಗುತ್ತದೆ. ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದ ನಂತರ ಧರ್ಮೇಂದ್ರ ಅವರು ಹೇಮಾ ಮಾಲಿನಿ ಅಲ್ಲ, ಇನ್ನೊಬ್ಬ ನಟಿಯನ್ನು ಪ್ರೀತಿಸುತ್ತಿದ್ದರು. ಚಿತ್ರರಂಗದಲ್ಲಿ ಧರ್ಮೇಂದ್ರ ಅವರ ಮೊದಲ ಪ್ರೇಮ ಅದು. ಧರ್ಮೇಂದ್ರ ಪ್ರೀತಿಸಿದ ನಟಿ ಬೇರೆ ಯಾರೂ ಅಲ್ಲ ನಟಿ ಮೀನಾ ಕುಮಾರಿ.
ಮೀನಾ ಕುಮಾರಿ ನಿಧನರಾಗಿದ್ದಾರೆ. ಮೀನಾ ಕುಮಾರಿ ಮತ್ತು ಧರ್ಮೇಂದ್ರ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಧರ್ಮೇಂದ್ರ ಅವರ ಯಶಸ್ಸಿನಲ್ಲಿ ಮೀನಾ ಕುಮಾರಿ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಏಕೆಂದರೆ ಆಗ ಮೀನಾ ಕುಮಾರಿ ಯಶಸ್ಸಿನ ಉತ್ತುಂಗದಲ್ಲಿದ್ದರು. ಧರ್ಮೇಂದ್ರ ಆಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು.
ಮೀನಾ ಕುಮಾರಿ ಅವರು ಹೇಳುತ್ತಿದ್ದ ಕಾರಣಕ್ಕಾಗಿ ನಿರ್ಮಾಪಕರು ಮತ್ತು ನಿರ್ದೇಶಕರು ಹಲವಾರು ಚಿತ್ರಗಳಲ್ಲಿ ಧರ್ಮೇಂದ್ರ ಅವರನ್ನು ನಾಯಕ ನಟನನ್ನಾಗಿ ಮಾಡಬೇಕಾಯಿತು. ಮೀನಾ ಕುಮಾರಿ ಪ್ರಸಿದ್ಧ ಮತ್ತು ಜನಪ್ರಿಯ ನಟಿಯಾಗಿರುವುದರಿಂದ, ನಿರ್ಮಾಪಕರು ಸಹ ಅದನ್ನು ನಿರಾಕರಿಸಲು ಸಾಧ್ಯವಾಗಲಿಲ್ಲ. ಧರ್ಮೇಂದ್ರ ಮತ್ತು ಮೀನಾ ಕುಮಾರಿ ‘ಪೂರ್ಣಿಮಾ’, ‘ಕಾಜಲ್’, ‘ಫೂಲ್ ಔರ್ ಪತ್ತರ್’, ‘ಮಂಜಲಿ ದೀದಿ’ ಮತ್ತು ‘ಬಹರೋನ್ ಕಿ ಮಂಜಿಲ್’ ಚಿತ್ರಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಅಷ್ಟರಲ್ಲಿ ಮೀನಾ ಕುಮಾರಿ ಮತ್ತು ಧರ್ಮೇಂದ್ರ ಸಂಬಂಧದ ಮಾತುಗಳು ಬಿರುಸುಗೊಳ್ಳತೊಡಗಿದವು.
ಮೀನಾ ಕುಮಾರಿ ಅವರೊಂದಿಗೆ ಕೆಲಸ ಮಾಡಿದಾಗ ಧರ್ಮೇಂದ್ರ ಅವರ ಖ್ಯಾತಿ ಮತ್ತು ಜನಪ್ರಿಯತೆ ಉತ್ತುಂಗಕ್ಕೇರಿತು. ಧರ್ಮೇಂದ್ರ ಅವರಿಗೆ ಹಲವು ಚಿತ್ರಗಳ ಆಫರ್ ಬರತೊಡಗಿತು. ಅಭಿಮಾನಿಗಳಲ್ಲಿ ಧರ್ಮೇಂದ್ರ ಕ್ರೇಜ್ ಹೆಚ್ಚಾಗುತ್ತಿತ್ತು. ಹಲವು ಚಿತ್ರಗಳಲ್ಲಿ ಕೆಲಸ ಸಿಕ್ಕಿದ್ದರಿಂದ ಧರ್ಮೇಂದ್ರ ಬಿಜಿಯಾದರು.
ಇದನ್ನೂ ಓದಿ: ‘ರೂಂಗೆ ಕರೆದು..’; ಯುವ ನಟಿಗೆ ಲೈಂಗಿಕ ಕಿರುಕುಳ ನೀಡಿದ ಹಿರಿಯ ನಟ
ಧರ್ಮೇಂದ್ರ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾದ ನಂತರ ಮೀನಾ ಕುಮಾರಿ ಮತ್ತು ನಟ ನಡುವೆ ಬಿರುಕು ಉಂಟಾಗಿತ್ತು. ವರದಿಗಳ ಪ್ರಕಾರ, ಧರ್ಮೇಂದ್ರ ಮತ್ತು ಮೀನಾ ಕುಮಾರಿ ಹಲವು ದಿನಗಳ ನಂತರ ಪಾರ್ಟಿಯೊಂದರಲ್ಲಿ ಮುಖಾಮುಖಿಯಾದರು. ಆದರೆ ಆಗ ಧರ್ಮೇಂದ್ರ ಮೀನಾ ಕುಮಾರಿ ಜೊತೆ ಒಂದು ಮಾತು ಕೂಡ ಮಾತನಾಡಲಿಲ್ಲ. ಆ ಪಾರ್ಟಿಯ ನಂತರ ಮೀನಾ ಕುಮಾರಿ ಮತ್ತು ಧರ್ಮೇಂದ್ರ ಅವರ ಬ್ರೇಕಪ್ ಟಾಕ್ ಶುರುವಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.