ಅಫೇರ್ ಬಗ್ಗೆ ಬರೆದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ ಜೈಲು ಸೇರಿದ್ದರು ಶಾರುಖ್ ಖಾನ್
ಗೌರಿ ಖಾನ್ ಜತೆ ಮದುವೆ ಆಗಿ ಎರಡು ವರ್ಷ ಕಳೆದಿತ್ತು. ಇದೇ ಸಂದರ್ಭದಲ್ಲಿ ಶಾರುಖ್ ಕಳ್ಳ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು.
ಶಾರುಖ್ ಖಾನ್ ಅವರು ಇಂದು ಬಾಲಿವುಡ್ನ ಬಾದ್ಶಾ. ಇತ್ತೀಚೆಗೆ ಅವರಿಗೆ ಅದೃಷ್ಟ ಕೈ ಕೊಟ್ಟಿದೆಯಾದರೂ ಅವರ ಬೇಡಿಕೆ ಕುಗ್ಗಿಲ್ಲ. ಅಭಿಮಾನಿ…..ಗಳಿಗೆ ಹಾಗೂ ನಿರ್ಮಾಪಕರಿಗ ಅವರ ಮೇಲೆ ಇರುವ ಗೌರವ ಕಿಂಚಿತ್ತೂ ಕಡಿಮೆ ಆಗಿಲ್ಲ. ನಟ ಶಾರುಖ್ ಖಾನ್ ಪತ್ರಕರ್ತನಿಗೆ ಕೊಲೆ ಬೆದರಿಕೆ ಹಾಕಿ ಜೈಲಿಗೆ ಹೋಗಿದ್ದರು ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಜೈಲಿಗೆ ಹೋದ ವಿಚಾರವನ್ನು ಶಾರುಖ್ ಖಾನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದು 1993ರ ಸಮಯ. ‘ಕಭಿ ಹಾ ಕಭಿ ನಾ’ ಸಿನಿಮಾ ಶೂಟಿಂಗ್ನಲ್ಲಿ ಶಾರುಖ್ ಖಾನ್ ಬ್ಯುಸಿ ಇದ್ದರು. ಗೌರಿ ಖಾನ್ ಜತೆ ಮದುವೆ ಆಗಿ ಎರಡು ವರ್ಷ ಕಳೆದಿತ್ತು. ಇದೇ ಸಂದರ್ಭದಲ್ಲಿ ಶಾರುಖ್ ಕಳ್ಳ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಇದರಿಂದ ಶಾರುಖ್ ಕೋಪಗೊಂಡಿದ್ದರು. ಗೌರಿ ತಮ್ಮನ್ನು ಎಲ್ಲಿ ಬಿಟ್ಟು ಹೋಗುತ್ತಾರೋ ಎನ್ನುವ ಭಯ ಕೂಡ ಅವರನ್ನು ಕಾಡಿತ್ತು. ಅವರು ನೇರವಾಗಿ ತೆರಳಿದ್ದು ಪತ್ರಕರ್ತನ ಮನೆಗೆ.
‘ನಾನು ಅಂದು ತುಂಬಾ ಕೆಟ್ಟಾಗಿ ನಡೆದುಕೊಂಡಿದ್ದೆ. ನನ್ನ ಮದುವೆಯಲ್ಲಿ ನನ್ನ ಮಾವ ನೀಡಿದ್ದ ಖಡ್ಗವನ್ನು ತೆಗೆದುಕೊಂಡು ಪತ್ರಕರ್ತನ ಮನೆಗೆ ಹೋಗಿದ್ದೆ. ಅಲ್ಲಿ ಆತನ ಮೇಲೆ ಹಲ್ಲೆಮಾಡಿದೆ. ಇದಾದ ನಂತರ ಸೆಟ್ಗೆ ಹಿಂದಿರುಗಿದೆ. ಮರುದಿನ ಪೊಲೀಸರು ಬಂದು ನನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು’ ಎಂದು ಶಾರುಖ್ ಖಾನ್ ಘಟನೆ ಬಗ್ಗೆ ವಿವರಿಸಿದ್ದರು.
‘ನನ್ನನ್ನು ಕರೆದುಕೊಂಡು ಹೋದಾಗ ಸಂಜೆ ಆರು ಗಂಟೆ ಆಗಿತ್ತು. ಹೀಗಾಗಿ ಜಾಮೀನು ಸಿಗಲಿಲ್ಲ. ಒಂದು ಫೋನ್ ಕಾಲ್ ಮಾಡೋಕೆ ನನಗೆ ಪೊಲೀಸರು ಅವಕಾಶ ನೀಡಿದ್ದರು. ನಾನು ಕುಟುಂಬದವರಿಗೆ ಮಾಡುವ ಬದಲು ಅದೇ ಜರ್ನಲಿಸ್ಟ್ಗೆ ಕರೆ ಮಾಡಿ ಬೆದರಿಕೆ ಹಾಕಿದೆ. ಇದಕ್ಕೆಲ್ಲ ನೀನೆ ಕಾರಣ, ಜೈಲಿನಿಂದ ಹೊರ ಬಂದಮೇಲೆ ಬಿಡಲ್ಲ ಎಂದಿದ್ದೆ. ಈ ಘಟನೆಯಿಂದ ನನ್ನ ಹೆಂಡತಿ ತುಂಬಾನೇ ಬೇಸರಗೊಂಡಿದ್ದರು. ನಾನಾ ಪಾಟೇಕರ್ ನನಗೆ ಜಾಮೀನು ನೀಡಿ, ಜೈಲಿನಿಂದ ಬಿಡಿಸಿದರು’ ಎಂದು ಶಾರುಖ್ ಹಳೆ ಘಟನೆ ನೆನೆದಿದ್ದರು.
ಇದನ್ನೂ ಓದಿ: ಶಾರುಖ್ ಖಾನ್-ಅಟ್ಲೀ ಸಿನಿಮಾಗೆ ಜನಪ್ರಿಯ ವೆಬ್ ಸೀರಿಸ್ ‘ಮನಿ ಹೈಸ್ಟ್’ ಕಥೆ?
ಸೋತು ಸುಣ್ಣವಾದ ಶಾರುಖ್ ಖಾನ್ಗೆ ಸೋಲಿಲ್ಲದ ಸರದಾರನ ನಿರ್ದೇಶನ; ಇಲ್ಲಿದೆ ಹೊಸ ಅಪ್ಡೇಟ್