2022ನೇ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರ ಕೂಡ ಪ್ರಮುಖವಾದದ್ದು. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar) ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೂಡ ನೀಡಲಾಗಿದೆ. ಆದರೆ ಈ ಸಿನಿಮಾ ಬಗ್ಗೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲವೂ ಅಕ್ಷಯ್ ಕುಮಾರ್ ಅವರ ವಿರೋಧಿಗಳ ಹುನ್ನಾರ ಎಂದು ಹೇಳಲಾಗುತ್ತಿದೆ. ಇಂದು (ಜೂನ್ 3) ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಚಿತ್ರದ ಬಗ್ಗೆ ಟ್ವಿಟರ್ನಲ್ಲಿ ಕೆಲವರು ಕೆಟ್ಟದಾಗಿ ಪೋಸ್ಟ್ (Samrat Prithviraj Twitter Review) ಮಾಡುತ್ತಿದ್ದಾರೆ. ಬೇಕಂತಲೇ ಈ ಸಿನಿಮಾವನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ಆ ರೀತಿಯಲ್ಲಿ ಅನೇಕ ಟ್ವೀಟ್ಗಳು ವೈರಲ್ ಆಗಿವೆ.
ಅದ್ದೂರಿ ಬಜೆಟ್ನಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಮೂಡಿಬಂದಿದೆ. ಮೇಕಿಂಗ್ ಗುಣಮಟ್ಟದ ಬಗ್ಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಕೆಲವರು ಈ ಚಿತ್ರವನ್ನು ಸಂಪೂರ್ಣವಾಗಿ ಕಳಪೆ ಎಂದು ಜರಿಯುತ್ತಿದ್ದಾರೆ. ಈ ಸಿನಿಮಾ ನೋಡಿ ತೀವ್ರ ನಿರಾಸೆ ಆಯಿತು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
#OneWordReview…#SamratPrithvirajReview DISAPPOINTING.
Rating: ⭐️
Performances [#Sonu Sood exceptional, BUT falters due to a routine Masudas of #AkshayKumar on the screen, patchy screenwriting, overdose of 42 days and weak finale. #YRF has invested on a person who doesn’t care— Telugu RanbirKapoor fans club (@djtoy8779778888) June 2, 2022
#OneWordReview…#SamratPrithviraj: DISAPPOINTING.
Rating: ⭐️ ½
Tries too hard to make you root for its character, but fails miserably… Bad writing, terrible direction, over the top performances… Weakest film of Akshay Kumar #SamratPrithvirajReview— ??mir (@Bhaiologist) June 2, 2022
‘ಕಳಪೆ ಚಿತ್ರಕಥೆ, ಕೆಟ್ಟ ನಿರ್ದೇಶನ, ಇದು ಅಕ್ಷಯ್ ಕುಮಾರ್ ಅವರ ದುರ್ಬಲ ಸಿನಿಮಾ. ಕೇವಲ ಅರ್ಧ ಸ್ಟಾರ್ ಕೊಡಬಹುದು’ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಕೂಡ ಹ್ಯಾಶ್ಟ್ಯಾಗ್ ಅಭಿಯಾನ ಮಾಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ನೆಗೆಟಿವ್ ವಿಮರ್ಶೆ ನೀಡಲಾಗಿದೆ ಎಂದು ಅಕ್ಷಯ್ ಕುಮಾರ್ ಫ್ಯಾನ್ಸ್ ಆರೋಪಿಸುತ್ತಿದ್ದಾರೆ.
One Word #SamratPrithvirajReview – Disappointing
⭐️ ?#AkshayKumar Failed To Impress audience because of his comedy look & Action
The Age difference of #ManushiChhillar & Akshay Kumar is evident – A major setback
Songs in a biopic of #PrithvirajChauhan is not History ?
— ANGRY BOT ? ? ? ? ? (@United__4SSR) June 3, 2022
ಮಾನುಷಿ ಚಿಲ್ಲರ್ ಅವರು ಅಕ್ಷಯ್ ಕುಮಾರ್ಗೆ ಜೋಡಿಯಾಗಿ ನಟಿಸಿದ್ದಾರೆ. ಇಬ್ಬರ ನಡುವೆ ವಯಸ್ಸಿನ ಅಂತರ ಇದೆ. ಅಕ್ಷಯ್ ಕುಮಾರ್ ಅವರಿಗೆ 54 ವರ್ಷ ವಯಸ್ಸು. ಮಾನುಷಿ ಚಿಲ್ಲರ್ ಅವರಿಗೆ ಈಗಷ್ಟೇ 25ರ ಪ್ರಾಯ. ಹಾಗಾಗಿ ಇಬ್ಬರ ಜೋಡಿಯೇ ಸೂಕ್ತವಲ್ಲ ಎಂದು ಕೂಡ ಒಂದು ವರ್ಗದ ನೆಟ್ಟಿಗರು ಕಾಲೆಳೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:43 am, Fri, 3 June 22