ನೆರವೇರಿತು ಗಾಯಕ ಕೆಕೆ ಅಂತ್ಯಸಂಸ್ಕಾರ; ತಂದೆಗೆ ಗುಡ್ ಬೈ ಹೇಳಿದ ಪುತ್ರಿ ತಮಾರಾ
ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರೊಳಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇದು ನಿಜಕ್ಕೂ ಶಾಕಿಂಗ್ ಬೆಳವಣಿಗೆ ಆಗಿತ್ತು. ಇಂದು ಅವರ ಅಂತ್ಯಕ್ರಿಯೆ ನಡೆದಿದೆ.
ಗಾಯಕ ಕೆಕೆ (ಕೃಷ್ಣಕುಮಾರ್ ಕುನ್ನತ್) ಅವರು ಮಂಗಳವಾರ (ಜೂನ್ 31) ರಾತ್ರಿ ನಿಧನ ಹೊಂದಿದರು. ಅನೇಕ ಸೆಲೆಬ್ರಿಟಿಗಳು ಅವರ ಅಂತಿಮ ದರ್ಶನ ಪಡೆದಿದ್ದಾರೆ. ಕೆಕೆ ಅವರನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ಹಾಗೂ ಸಂಗೀತ ಲೋಕಕ್ಕೆ ನಿಜಕ್ಕೂ ದೊಡ್ಡ ನಷ್ಟ. ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ನಡೆದಿದೆ. ಸಿನಿಮಾ ರಂಗದವರು, ಕುಟುಂಬದವರು ಹಾಗೂ ಗೆಳೆಯರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು. ಅಂತ್ಯಕ್ರಿಯೆ ನಡೆಯುವುದಕ್ಕೂ ಮೊದಲು ಕೆಕೆ (Singer KK) ಮಗಳು ತಮಾರಾ (Taamara) ತಂದೆಗೆ ಗುಡ್ ಬೈ ಹೇಳಿದ್ದಾರೆ.
ಹಲವಾರು ಸೂಪರ್ ಹಿಟ್ ಗೀತೆಗಳಿಗೆ ಧ್ವನಿ ನೀಡಿದ ಖ್ಯಾತಿ ಕೆಕೆಗೆ ಇದೆ. ಮೇ 31ರಂದು ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದಾಗ ಕೆಕೆ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರೊಳಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇದು ನಿಜಕ್ಕೂ ಶಾಕಿಂಗ್ ಬೆಳವಣಿಗೆ ಆಗಿತ್ತು. ಅವರ ಅಭಿಮಾನಿಗಳಿಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇಂದು ಅವರ ಅಂತ್ಯಕ್ರಿಯೆ ನಡೆದಿದೆ.
ಇದಕ್ಕೂ ಮೊದಲು ತಮಾರಾ ಅವರು ತಂದೆಯ ಅಂತಿಮ ಸಂಸ್ಕಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಈ ವೇಳೆ ಅವರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ತಂದೆಗೆ ಗುಡ್ ಬೈ ಹೇಳಿದ್ದಾರೆ. ಇದನ್ನು ಕೆಕೆ ಫ್ಯಾನ್ಸ್ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್ ವಿಡಿಯೋ
ಗಾಯಕನ ಸಾವಿನ ಸುತ್ತ ಅನುಮಾನ
ಗಾಯಕ ಕೆಕೆ ಅವರ ಸಾವಿನ ಸುತ್ತ ಈಗ ಅನುಮಾನಗಳು ಹುಟ್ಟಿಕೊಂಡಿವೆ. ಇಂದು (ಜೂನ್ 1) ಕೋಲ್ಕತ್ತಾದ ಎಸ್ಎಸ್ಕೆಎಮ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೆಕೆ ಅವರು ಉಳಿದುಕೊಂಡಿದ್ದ ಖಾಸಗಿ ಹೋಟೆಲ್ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಾವಿಗೆ ಅಸಲಿ ಕಾರಣ ಏನು ಎಂಬುದನ್ನು ತಿಳಿಯಲು ತನಿಖೆ ಆರಂಭ ಆಗಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.
ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲಿ ಹಾಡುತ್ತಿದ್ದ ಕೆಕೆ ಅವರಿಗೆ ನಿಜಕ್ಕೂ ಆರೋಗ್ಯ ಸಮಸ್ಯೆ ಆಗಿತ್ತಾ? ಹೋಟೆಲ್ನಲ್ಲಿ ಅವರ ಮೇಲೆ ಹಲ್ಲೆ ನಡೆಯಿತೇ? ಮುಖ ಮತ್ತು ತಲೆಯಲ್ಲಿ ಗಾಯದ ಗುರುತುಗಳು ಮೂಡಿದ್ದು ಯಾಕೆ? ಇಂಥ ಹಲವಾರು ಪ್ರಶ್ನೆಗಳು ಜನರ ಮನದಲ್ಲಿ ಮೂಡಿವೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕೆಕೆ ನಿಧನಕ್ಕೆ ಸಂಪಾತ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋಟ್ಯಂತರ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಕೆಕೆ ಅವರಿಗೆ 53 ವರ್ಷ ವಯಸ್ಸಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.