
ಬಾಕ್ಸ್ ಆಫೀಸ್ನಲ್ಲಿ ‘ಸೈಯಾರಾ’ (Saiyaara) ಸಿನಿಮಾ ಬಂಗಾರದ ಬೆಳೆ ತೆಗೆಯುತ್ತಿದೆ. ಹೊಸ ಕಲಾವಿದರು ನಟಿಸಿದ ಈ ಸಿನಿಮಾ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೋಹಿತ್ ಸೂರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಹಾನ್ ಪಾಂಡೆ ಅವರು ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಎದುರು ಪೈಪೋಟಿ ನೀಡಲಾಗದೇ ಸ್ಟಾರ್ ಹೀರೋಗಳ ಸಿನಿಮಾಗಳು ಕೂಡ ಹಿಂದೇಟು ಹಾಕುತ್ತಿವೆ. ಈ ಮೊದಲು ‘ಸನ್ ಆಫ್ ಸರ್ದಾರ್ 2’ (Son Of Sardar 2) ಸಿನಿಮಾದ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಈಗ ‘ಪರಮ್ ಸುಂದರಿ’ (Param Sundari) ಸಿನಿಮಾದ ಬಿಡುಗಡೆ ಕೂಡ ಮುಂದಕ್ಕೆ ಹೋಗಿದೆ!
‘ಪರಮ್ ಸುಂದರಿ’ ಸಿನಿಮಾದಲ್ಲಿ ಸ್ಟಾರ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅವರು ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಜುಲೈ 25ಕ್ಕೆ ಬಿಡುಗಡೆ ಮಾಡಬೇಕು ಎಂದು ಪ್ಲ್ಯಾನ್ ಮಾಡಲಾಗಿತ್ತು. ಆದರೆ ಈಗ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡುವ ತೀರ್ಮಾನಕ್ಕೆ ಬರಲಾಗಿದೆ.
ಅಷ್ಟರಮಟ್ಟಿಗೆ ‘ಸೈಯ್ಯಾರಾ’ ಸಿನಿಮಾ ಅಬ್ಬರಿಸುತ್ತಿದೆ. ಈ ಸಿನಿಮಾ ಜುಲೈ 18ರಂದು ಬಿಡುಗಡೆ ಆಯಿತು. ರಿಲೀಸ್ ಆದ ದಿನದಿಂದಲೂ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ಐದು ದಿನಕ್ಕೆ ಈ ಸಿನಿಮಾದ ಒಟ್ಟು ಕಲೆಕ್ಷನ್ 133.75 ಕೋಟಿ ರೂಪಾಯಿ ಆಗಿದೆ. ಹೊಸ ನಟನ ಸಿನಿಮಾ ಈ ಪರಿ ಕಲೆಕ್ಷನ್ ಮಾಡುತ್ತಿರುವುದು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ.
ಮೊದಲ ವಾರ ‘ಸೈಯಾರಾ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಎರಡನೇ ವೀಕೆಂಡ್ನಲ್ಲಿ ಕೂಡ ಈ ಸಿನಿಮಾದ ಕಲೆಕ್ಷನ್ ಹೆಚ್ಚಲಿದೆ. ಇಂಥ ಸಿನಿಮಾದ ಎದುರು ಪೈಪೋಟಿಗೆ ಬೀಳುವ ಹೊಸ ಚಿತ್ರಕ್ಕೆ ಖಂಡಿತಾ ನಷ್ಟ ಆಗಲಿದೆ. ಆದ್ದರಿಂದ ‘ಪರಮ್ ಸುಂದರಿ’, ‘ಸನ್ ಆಫ್ ಸರ್ದಾರ್ 2’ ಸಿನಿಮಾಗಳು ಜುಲೈ 25ರ ಬದಲಿಗೆ ಹೊಸ ಬಿಡುಗಡೆ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳುತ್ತಿವೆ.
ಇದನ್ನೂ ಓದಿ: ಬ್ಲಾಕ್ ಬಸ್ಟರ್ ‘ಸೈಯಾರಾ’ ಸಿನಿಮಾಕ್ಕೆ ಟಾಂಗ್ ಕೊಟ್ಟ ಶ್ರದ್ಧಾ ಕಪೂರ್
‘ಸನ್ ಆಫ್ ಸರ್ದಾರ್ 2’ ಸಿನಿಮಾದಲ್ಲಿ ಅಜಯ್ ದೇವಗನ್ ಅವರು ನಟಿಸಿದ್ದಾರೆ. ಹಾಗಿದ್ದರೂ ಕೂಡ ಅವರು ಹೊಸ ನಟನ ಸಿನಿಮಾದ ಎದುರು ಪೈಪೋಟಿಗೆ ಇಳಿಯಲು ಹಿಂದೇಟು ಹಾಕಿದ್ದಾರೆ. ಆಗಸ್ಟ್ 1ರಂದು ‘ಸನ್ ಆಫ್ ಸರ್ದಾರ್ 2’ ಬಿಡುಗಡೆ ಆಗಲಿದೆ. ‘ಪರಮ್ ಸುಂದರಿ’ ಸಿನಿಮಾ ಆಗಸ್ಟ್ 29 ಅಥವಾ ಸೆಪ್ಟೆಂಬರ್ 5ರಂದು ತೆರೆ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.