ಈಗ ಎಲ್ಲೆಲ್ಲೂ ‘ಪರಮ ಸುಂದರಿ’ ಹವಾ. ಅಂದರೆ, ‘ಪರಮ ಸುಂದರಿ’ (Param Sundari) ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೃತಿ ಸನೋನ್ (Kriti Sanon) ಮುಖ್ಯಭೂಮಿಕೆ ನಿಭಾಯಿಸಿರುವ ‘ಮಿಮಿ’ (Mimi) ಸಿನಿಮಾದ ಜನಪ್ರಿಯ ಗೀತೆ ಇದು. ಸೋಶಿಯಲ್ ಮೀಡಿಯಾದಲ್ಲಿ ಎತ್ತ ಕಣ್ಣು ಹಾಯಿಸಿದರೂ ಈ ಹಾಡಿಗೆ ತುಣುಕುಗಳೇ ರಾರಾಜಿಸುತ್ತಿವೆ. ಹುಡುಗಿಯರು ಈ ಹಾಡಿಗೆ ಫಿದಾ ಆಗಿದ್ದಾರೆ. ಇದರಿಂದಾಗಿ ನಟಿ ಕೃತಿ ಸನೋನ್ ಖ್ಯಾತಿ ಸಿಕ್ಕಾಪಟ್ಟೆ ಹೆಚ್ಚಾಗಿದೆ. ‘ಮಿಮಿ’ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಗೆಲುವಿನಲ್ಲಿ ‘ಪರಮ ಸುಂದರಿ’ ಹಾಡಿನ ಕೊಡುಗೆ ಕೂಡ ಪ್ರಮುಖವಾಗಿದ್ದು, ಅದರ ಕ್ರೆಡಿಟ್ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಅವರಿಗೆ ಸಲ್ಲಬೇಕು.
2014ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಕೃತಿ ಸನೋನ್ ಅವರು ಮೊದಲು ನಟಿಸಿದ್ದು ಮಹೇಶ್ ಬಾಬು ನಟನೆಯ ‘ನೇನೊಕ್ಕಡಿನೆ’ ಸಿನಿಮಾದಲ್ಲಿ. ಆ ಬಳಿಕ ಅವರ ನೇರವಾಗಿ ಬಾಲಿವುಡ್ಗೆ ಎಂಟ್ರಿ ಪಡೆದುಕೊಂಡರು. ಅವರ ಮೊದಲ ಹಿಂದಿ ಸಿನಿಮಾ ‘ಹೀರೋಪಂಥಿ’. ಅದರಲ್ಲಿ ಅವರು ಟೈಗರ್ ಶ್ರಾಫ್ಗೆ ಜೋಡಿಯಾಗಿದ್ದರು. ಅಲ್ಲಿಂದೀಚೆಗೆ ಕೃತಿ ಮಾಡಿದ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೂ ಅವರಿಗೆ ಸಿಕ್ಕ ಯಶಸ್ಸು ದೊಡ್ಡದು. ‘ಬರೇಲಿ ಕಿ ಬರ್ಫಿ’, ‘ಲುಕಾ ಚುಪ್ಪಿ’, ‘ಹೌಸ್ಫುಲ್ 4’ ಸಿನಿಮಾಗಳು ಜನರಿಗೆ ಸಖತ್ ಇಷ್ಟವಾದವು.
ಈ ವರ್ಷ ನೆಟ್ಫ್ಲಿಕ್ಸ್ನಲ್ಲಿ ತೆರೆಕಂಡ ‘ಮಿಮಿ’ ಸಿನಿಮಾ ಸೂಪರ್ ಹಿಟ್ ಆಗಿದೆ. ಪ್ರೇಕ್ಷಕರು ಮತ್ತು ವಿಮರ್ಶಕರು ಈ ಚಿತ್ರವನ್ನು ಹಾಡಿ ಹೊಗಳುತ್ತಿದ್ದಾರೆ. ಇಷ್ಟೆಲ್ಲ ಯಶಸ್ಸು ಗಳಿಸಿರುವ ಕೃತಿಗೆ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಮೂಲಗಳ ಪ್ರಕಾರ ಅವರು ಪ್ರತಿ ಸಿನಿಮಾಗೆ ಬರೋಬ್ಬರಿ 2 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅವರ ಒಟ್ಟು ಆಸ್ತಿ ಮೌಲ್ಯ 37 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಸಿನಿಮಾ ನಟಿಯಾಗುವುದಕ್ಕೂ ಮುನ್ನ ಕೃತಿ ಮಾಡೆಲಿಂಗ್ ಮಾಡುತ್ತಿದ್ದರು. ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳ ಜಾಹೀರಾತಿನಲ್ಲಿ ಅವರು ನಟಿಸಿದ್ದಾರೆ. ಈಗಲೂ ಅವರು ಹಲವು ಕಂಪನಿಗಳಿಗೆ ರಾಯಭಾರಿ ಆಗಿದ್ದಾರೆ. ಅದರಿಂದಲೂ ಅವರಿಗೆ ಒಳ್ಳೆಯ ಸಂಭಾವನೆ ಸಿಗುತ್ತಿದೆ. ಅವರು ಸ್ವಂತ ಬಟ್ಟೆ ಬ್ರ್ಯಾಂಡ್ ಕೂಡ ಹೊಂದಿದ್ದಾರೆ.
ಇನ್ನು, ಕೃತಿಗೆ ಕವಿತೆಗಳನ್ನು ಬರೆಯುವ ಹವ್ಯಾಸ ಕೂಡ ಇದೆ. ಮೂಲತಃ ದೆಹಲಿಯವರಾದ ಅವರು ಮಧ್ಯಮವರ್ಗದಿಂದ ಬಂದವರು. ಆದರೆ ಇಂದು ಬಾಲಿವುಡ್ನ ಟಾಪ್ ನಟಿಯರಲ್ಲಿ ಕೃತಿ ಕೂಡ ಮುಂಚೂಣಿಯಲ್ಲಿದ್ದಾರೆ. 2 ಕೋಟಿ ರೂ. ಸಂಭಾವನೆ ಪಡೆಯುವ ಮಟ್ಟಕ್ಕೆ ಅವರು ಬೆಳೆದು ನಿಂತಿದ್ದಾರೆ.
ಇದನ್ನೂ ಓದಿ:
ಬಿಗ್ಬಾಸ್ನಲ್ಲಿ ಸ್ಪರ್ಧಿಗಳ ಸಂಭಾವನೆ ಎಷ್ಟು?; ಶಮಿತಾ ಶೆಟ್ಟಿಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ನಟಿ
ರಶ್ಮಿಕಾ ಸಿನಿಮಾದಲ್ಲಿ ಸನ್ನಿ ಲಿಯೋನ್ಗೆ 50 ಲಕ್ಷ ಸಂಬಳ; ಮಾಜಿ ನೀಲಿ ತಾರೆಗೆ ಏನು ಕೆಲಸ?