AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಜ್ ಮಹಲ್ ಮೂಲದ ಬಗ್ಗೆ ಪ್ರಶ್ನೆ: ‘ದಿ ತಾಜ್ ಸ್ಟೋರಿ’ ಟ್ರೈಲರ್ ಬಿಡುಗಡೆ

The Taj Story movie: ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಅನ್ನು ಪ್ರೀತಿಯ ಸಂಕೇತವಾಗಿ ಹಲವಾರು ಸಿನಿಮಾಗಳಲ್ಲಿ ತೋರಿಸಲಾಗಿದೆ. ಇದೀಗ ಹಿಂದಿಯಲ್ಲಿ ಹೊಸ ಸಿನಿಮಾ ಒಂದು ಬಿಡುಗಡೆಗೆ ತಯಾರಾಗಿದ್ದು ಸಿನಿಮಾನಲ್ಲಿ ತಾಜ್ ಮಹಲ್​​ನ ಮೂಲವನ್ನು ಪ್ರಶ್ನೆ ಮಾಡಲಾಗಿದೆ. ತಾಜ್ ಮಹಲ್​​​ನ ಡಿಎನ್​​ಎ ಪರೀಕ್ಷೆ ಆಗಬೇಕು ಎನ್ನಲಾಗಿದೆ. ಸಿನಿಮಾ ಕುರಿತ ಮಾಹಿತಿ ಇಲ್ಲಿದೆ...

ತಾಜ್ ಮಹಲ್ ಮೂಲದ ಬಗ್ಗೆ ಪ್ರಶ್ನೆ: ‘ದಿ ತಾಜ್ ಸ್ಟೋರಿ’ ಟ್ರೈಲರ್ ಬಿಡುಗಡೆ
Taj Mahal
ಮಂಜುನಾಥ ಸಿ.
|

Updated on:Oct 16, 2025 | 6:21 PM

Share

ವಿಶ್ವದ ಏಳನೇ ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಅನ್ನು ಭಾರತದ ಹಲವಾರು ಸಿನಿಮಾಗಳಲ್ಲಿ ತೋರಿಸಲಾಗಿದೆ. ತಾಜ್ ಮಹಲ್ ಅನ್ನು ಪ್ರೇಮದ ಸಂಕೇತವಾಗಿಯೇ ಬಹುತೇಕ ಈ ವರೆಗಿನ ಎಲ್ಲ ಸಿನಿಮಾಗಳಲ್ಲಿ ತೋರಿಸಲಾಗಿದೆ. ಆದರೆ ಇದೀಗ ಸ್ವತಃ ತಾಜ್ ಮಹಲ್ ಬಗ್ಗೆಯೇ ಸಿನಿಮಾ ಒಂದು ಮೂಡಿ ಬಂದಿದ್ದು, ಸಿನಿಮಾನಲ್ಲಿ ತಾಜ್ ಮಹಲ್​ ಬಗ್ಗೆ ಪ್ರಶ್ನೆ ಮಾಡಲಾಗಿದೆ. ತಾಜ್ ಮಹಲ್​​ನ ಡಿಎನ್​​ಎ ಪರೀಕ್ಷೆ ಆಗಬೇಕು ಎನ್ನಲಾಗಿದೆ. ಸಿನಿಮಾದ ಹೆಸರು ‘ದಿ ತಾಜ್ ಸ್ಟೋರಿ’ ಸಿನಿಮಾದ ಟ್ರೈಲರ್ ಇಂದು (ಅಕ್ಟೋಬರ್ 16) ಬಿಡುಗಡೆ ಆಗಿದೆ.

‘ದಿ ತಾಜ್ ಸ್ಟೋರಿ’ ಸಿನಿಮಾ ತಾಜ್ ಮಹಲ್​​ನ ಮೂಲ ಕುರಿತು ಪ್ರಶ್ನೆ ಮಾಡುವ ಸಿನಿಮಾ ಆಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ತಾಜ್ ಮಹಲ್ ಮೂಲದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಮಾಧ್ಯಮಗಳಲ್ಲಿ ಆಗಾಗ್ಗೆ ಚರ್ಚೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ತಾಜ್ ಮಹಲ್ ಅನ್ನು ನಿಜವಾಗಿಯೂ ಷಹಜಾನ್ ಕಟ್ಟಿಸಿಲ್ಲ ಬದಲಿಗೆ ಅದೊಂದು ಶಿವ ಮಂದಿರ ಎಂಬ ವಾದಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ಇದನ್ನೇ ಇರಿಸಿಕೊಂಡು ‘ದಿ ತಾಜ್ ಸ್ಟೋರಿ’ ಹೆಸರಿನ ಸಿನಿಮಾ ಮಾಡಲಾಗಿದೆ.

ಇದನ್ನೂ ಓದಿ:ಬಾಲಿವುಡ್​ ಸ್ಟಾರ್ ಜೊತೆ ಸಿನಿಮಾ, ಏಜೆಂಟ್ ಮಿರ್ಚಿ ಆದ ಶ್ರೀಲೀಲಾ

‘ದಿ ತಾಜ್ ಸ್ಟೋರಿ’ ಸಿನಿಮಾನಲ್ಲಿ ಪರೇಶ್ ರಾವಲ್, ತಾಜ್ ಮಹಲ್ ಗೆ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಟೂರಿಸ್ಟ್ ಗೈಡ್ ಆಗಿ ನಟಿಸಿದ್ದಾರೆ. ತಾಜ್ ಮಹಲ್ ಅನ್ನು ಷಹಜಹಾನ್ ಕಟ್ಟಿಸಿಲ್ಲ ಬದಲಿಗೆ ಅದೊಂದು ಶಿವ ಮಂದಿರ ಎಂಬುದು ಅವರ ನಂಬಿಕೆ. ಇದೇ ಕಾರಣಕ್ಕೆ ಅವರು ನ್ಯಾಯಾಲಯದ ಮೊರೆ ಹೋಗುತ್ತಾರೆ ತಾಜ್ ಮಹಲ್ ಮೂಲದ ಬಗ್ಗೆ ಪ್ರಕರಣ ದಾಖಲಿಸುತ್ತಾರೆ. ನ್ಯಾಯಾಲಯದಲ್ಲಿ ತಾಜ್ ಮಹಲ್ ವಾಸ್ತು ಶಿಲ್ಪ ಇತ್ಯಾದಿ ವಿವರಗಳನ್ನು ಇರಿಸಿಕೊಂಡು ತಾಜ್ ಮಹಲ್ ಷಹಜಾನ್ ಕಟ್ಟಿಸಿದ್ದಲ್ಲವೆಂದು ವಾದಿಸುತ್ತಾರೆ. ಕೊನೆಗೆ ನ್ಯಾಯಾಲಯದ ತೀರ್ಪು ಏನಾಗುಗಿರುತ್ತದೆ ಎಂಬುದು ತಿಳಿಯಲು ಸಿನಿಮಾ ವೀಕ್ಷಿಸಬೇಕು.

ಸಿನಿಮಾ ಅನ್ನು ತುಷಾರ್ ಅಮರೀಶ್ ಘೋಯಲ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸಿಎ ಸುರೇಶ್ ಝಾ. ಸಿನಿಮಾನಲ್ಲಿ ಪರೇಷ್ ರಾವಲ್ ಜೊತೆಗೆ ಝಾಕಿರ್ ಹುಸೇನ್, ಅಮೃತಾ ಖಾನ್ವಿಲ್ಕರ್ ಇನ್ನೂ ಹಲವರು ನಟಿಸಿದ್ದು, ಸಿನಿಮಾ ಅಕ್ಟೋಬರ್ 31 ರಂದು ಬಿಡುಗಡೆ ಆಗಲಿದೆ. ಇತ್ತೀಚೆಗಿನ ಕೆಲ ಸಿನಿಮಾಗಳಿಗೆ ಸಿಕ್ಕಂತೆ ಈ ಸಿನಿಮಾಕ್ಕೂ ಕೆಲ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ದೊರೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:21 pm, Thu, 16 October 25

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?