‘ಅವನು ಗೆಳೆಯನಲ್ಲ, ಸಹೋದ್ಯೋಗಿ ಅಷ್ಟೇ’; ಅಕ್ಷಯ್-ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ?

ಪರೇಶ್ ರಾವಲ್ ಅವರು ಅಕ್ಷಯ್ ಕುಮಾರ್ ಅವರನ್ನು ಗೆಳೆಯರೆಂದು ಪರಿಗಣಿಸದಿರುವುದರ ಬಗ್ಗೆ ಮಾತನಾಡಿದ್ದಾರೆ. ಚಲನಚಿತ್ರರಂಗದಲ್ಲಿ ಅವರು ಸಹೋದ್ಯೋಗಿಗಳಾಗಿ ಮಾತ್ರ ಇರುತ್ತಾರೆ ಎಂದು ಹೇಳಿದ್ದಾರೆ. ಆದರೆ, ಅವರಿಬ್ಬರ ನಡುವೆ ಉತ್ತಮ ಬಾಂಡಿಂಗ್ ಇದೆ ಎಂದು ಒಪ್ಪಿಕೊಂಡಿದ್ದಾರೆ. ಒಮ್ ಪುರಿ, ನಸೀರುದ್ದೀನ್ ಶಾ ಮತ್ತು ಜಾನಿ ಲಿವರ್ ಅವರನ್ನು ಮಾತ್ರ ತಮ್ಮ ನಿಜವಾದ ಗೆಳೆಯರೆಂದು ಪರಿಗಣಿಸುತ್ತಾರೆ ಎಂದು ಪರೇಶ್ ಹೇಳಿದ್ದಾರೆ.

‘ಅವನು ಗೆಳೆಯನಲ್ಲ, ಸಹೋದ್ಯೋಗಿ ಅಷ್ಟೇ’; ಅಕ್ಷಯ್-ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ?
ಪರೇಶ್-ಅಕ್ಷಯ್

Updated on: Apr 29, 2025 | 7:40 AM

ಅಕ್ಷಯ್ ಕುಮಾರ್ (Akshay Kumar) ನನಗೆ ಗೆಳೆಯನಲ್ಲ. ಚಿತ್ರರಂಗದಲ್ಲಿ ಸಹೋದ್ಯೋಗಿಗಳು ಮಾತ್ರ ಇರುತ್ತಾರೆಯೇ ಹೊರತು ಗೆಳೆಯರು ಇರೋದಿಲ್ಲ’- ಹೀಗೊಂದು ಅಚ್ಚರಿಯ ಹೇಳಿಕೆ ನೀಡಿದ್ದು ಹಿರಿಯ ನಟ ಪರೇಶ್ ರಾವಲ್. ಅಕ್ಷಯ್ ಕುಮಾರ್ ಜೊತೆ ಒಳ್ಳೆಯ ಬಾಂಡಿಂಗ್ ಹೊಂದಿದ್ದಾರೆ ಪರೇಶ್. ‘ಹೇರಾ ಫೇರಿ’ ಅಂತಹ ಸಿನಿಮಾಗನ್ನು ಇವರು ಒಟ್ಟಿಗೆ ಮಾಡಿದ್ದಾರೆ. ಆದರೆ, ಇವರ ಮಧ್ಯೆ ಗೆಳೆತನ ಬೆಳೆದಿಲ್ಲ. ಇದು ಏಕೆ ಮತ್ತು ಇಂಡಸ್ಟ್ರಿಯ ಸತ್ಯಗಳು ಏನು ಎಂಬುದನ್ನು ಪರೇಶ್ ರಾವಲ್ ಬಿಚ್ಚಿಟ್ಟಿದ್ದಾರೆ.

‘ಅಕ್ಷಯ್ ಕುಮಾರ್ ನಿಮ್ಮ ಗೆಳೆಯರೇ’ ಎಂದು ಕೇಳಲಾಯಿತು. ಇದಕ್ಕೆ ಅವರು ಹೌದು ಎಂದು ಉತ್ತರಿಸಿದರು. ಆದರೆ, ಮುಂದುವರಿದು ಇಂಡಸ್ಟ್ರಿಯಲ್ಲಿ ಎಲ್ಲರೂ ಪ್ರೊಫೇಷನಲ್ ಆಗಿ ಇರುತ್ತಾರೆ ಎಂದಿದ್ದಾರೆ. ‘ಚಿತ್ರರಂಗದಲ್ಲಿ ಸಹೋದ್ಯೋಗಿಗಳು ಸಿಗುತ್ತಾರೆ. ರಂಗಭೂಮಿಯಲ್ಲಿ ಗೆಳೆಯರು ಸಿಗತ್ತಾರೆ. ಶಾಲಾ ದಿನಗಳಲ್ಲಿ ಜಿಗರಿ ದೋಸ್ತರು ಸಿಗುತ್ತಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಿಗುವವರು ಕೇವಲ ಸಹೋದ್ಯೋಗಿಗಳು ಅಷ್ಟೇ’ ಎಂದಿದ್ದಾರೆ. ಆ ಬಳಿಕ ಅಕ್ಷಯ್ ಕೂಡ ಓರ್ವ ಸಹೋದ್ಯೋಗಿ ಎಂದಿದ್ದಾರೆ.

‘ಇಂಡಸ್ಟ್ರಿಯಲ್ಲಿ ನನ್ನ ಗೆಳೆಯರು ಎಂದು ಇರೋದು ಓಮ್ ಪುರಿ, ನಸೀರುದ್ದೀನ್ ಶಾ, ಜಾನಿ ಲಿವರ್. ನಾನು ಇವರನ್ನು ಗೆಳೆಯರು ಎನ್ನಬಹುದು. ಇವರನ್ನು ಮಾತ್ರ ಗೆಳೆಯರು ಎನ್ನಬಹುದು ಎನಿಸುತ್ತದೆ’ ಎಂದು ಪರೇಶ್ ರಾವಲ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ
ಬಸ್ ಡ್ರೈವರ್ ಆಗಿದ್ದ ಯಶ್ ತಂದೆ ಈಗ ನಿರ್ಮಾಪಕ; ಹೊಸ ಬ್ಯಾನರ್ ಶುರು?
ಇಡಿ ವಿಚಾರಣೆಗೆ ಹಾಜರಿ ಹಾಕಲ್ಲ ಮಹೇಶ್ ಬಾಬು; ಕಾರಣ ಇಲ್ಲಿದೆ
ಉಗ್ರರ ಉದ್ದೇಶ ಹಾಳು ಮಾಡಲು ಕಾಶ್ಮೀರಕ್ಕೆ ಹೋದ ನಟ ಅತುಲ್ ಕುಲಕರ್ಣಿ
ಮುಂಜಾನೆ ಎದ್ದು ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್

ಹಾಗಾದರೆ ಅಕ್ಷಯ್ ಕುಮಾರ್ ಜೊತೆ ಒಳ್ಳೆಯ ಬಾಂಡಿಂಗ್ ಇಲ್ಲವೇ? ಖಂಡಿತವಾಗಿಯೂ ಇದೆ. ಆದರೆ, ಅದನ್ನು ಗೆಳೆತನ ಎಂದು ಹೇಳಲು ಸಾಧ್ಯವಿಲ್ಲ ಅನ್ನೋದು ಅವರ ಅಭಿಪ್ರಾಯ. ಇತ್ತೀಚೆಗೆ ಅಕ್ಷಯ್ ಬಗ್ಗೆ ಮಾತನಾಡಿದ್ದ ಪರೇಶ್ ಅವರು, ಅವರನ್ನು ಹಾರ್ಡ್ ವರ್ಕರ್ ಎಂದು ಕರೆದಿದ್ದರು.

ಇದನ್ನೂ ಓದಿ: ಮುಂಜಾನೆ ಎದ್ದು ಬಿಯರ್ ರೀತಿ ತಮ್ಮದೇ ಮೂತ್ರ ಕುಡಿಯುತ್ತಾರೆ ನಟ ಪರೇಶ್ ರಾವಲ್; ಕಾರಣ ಏನು?

ಅಕ್ಷಯ್ ಕುಮಾರ್ ಹಾಗೂ ಪರೇಶ್ ಅವರು ‘ಹೇರಾ ಫೇರಿ, ‘ಭಾಗಮ್ ಭಾಗ್’, ‘ಭೂಲ್ ಭುಲಯ್ಯ’, ‘ಓ ಮೈ ಗಾಡ್’ ರೀತಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ‘ಭೂತ್ ಬಂಗ್ಲಾ’ ಹಾಗೂ ‘ಹೇರಾ ಫೇರಿ 3’ ಸಿನಿಮಾಗಳಲ್ಲಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಎರಡೂ ಸಿನಿಮಾಗಳು ಕಾಮಿಡಿ ಶೈಲಿಯಲ್ಲಿ ಇವೆ. ‘ಭೂತ್ ಬಂಗ್ಲಾ’ದಲ್ಲಿ ಹಾರರ್ ವಿಚಾರವೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.