ಜಾನ್ವಿ ಕಪೂರ್​ಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿದ್ದನ್ನು ಒಪ್ಪಿಕೊಂಡ್ರಾ ಈ ಫೇಮಸ್​ ಡಾಕ್ಟರ್​?

|

Updated on: Jul 23, 2024 | 9:40 PM

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ಅವರಿಗೆ ಸಖತ್​ ಬೇಡಿಕೆ ಇದೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ಅವರು ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದಾರೆ ಎಂಬುದು ಅನೇಕರ ಅನುಮಾನ. ಈ ಕುರಿತ ಚರ್ಚೆಗೆ ಈಗ ಮತ್ತೆ ಜೀವ ಬಂದಿದೆ. ಖ್ಯಾತ ಪ್ಲಾಸ್ಟಿಕ್​ ಸರ್ಜನ್​ ಡಾ. ರಾಜ್​ ಕನೋಡಿಯಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ಕಮೆಂಟ್​ ಅನ್ನು ಲೈಕ್​ ಮಾಡಿದ್ದೇ ಇಷ್ಟಕ್ಕೆಲ್ಲ ಕಾರಣ ಆಗಿದೆ.

ಜಾನ್ವಿ ಕಪೂರ್​ಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿದ್ದನ್ನು ಒಪ್ಪಿಕೊಂಡ್ರಾ ಈ ಫೇಮಸ್​ ಡಾಕ್ಟರ್​?
ಡಾ. ರಾಜ್​ ಕನೋಡಿಯಾ, ಜಾನ್ವಿ ಕಪೂರ್​
Follow us on

ನಟಿ ಜಾನ್ವಿ ಕಪೂರ್​ ಅವರ ಬಗ್ಗೆ ಅನೇಕ ಟೀಕೆಗಳು ಇವೆ. ನೆಪೋ ಕಿಡ್​ ಎಂಬ ಆರೋಪ ಒಂದು ಕಡೆಯಾದರೆ, ಅವರು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಟೀಕೆ ಮತ್ತೊಂದು ಕಡೆ. ಪ್ಲಾಸ್ಟಿಕ್​ ಸರ್ಜರಿ ಬಗ್ಗೆ ಜಾನ್ವಿ ಕಪೂರ್​ ಅವರು ಬಹಿರಂಗವಾಗಿ ಮಾತಾಡಿಲ್ಲ. ಆದರೆ ಈಗ ಆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಫೇಮಸ್​ ಪ್ಲಾಸ್ಟಿಕ್​ ಸರ್ಜನ್​ ಡಾ. ರಾಜ್​ ಕನೋಡಿಯಾ ಅವರು ಮಾಡಿದ ಒಂದೇ ಒಂದು ಲೈಕ್​ನಿಂದ ಜನರಿಗೆ ಉತ್ತರ ಸಿಕ್ಕಂತೆ ಆಗಿದೆ. ಜಾನ್ವಿ ಕಪೂರ್​ ಅವರು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ವಾದ ಮಾಡುವ ಮಂದಿಗೆ ಈ ವೈದ್ಯರ ಲೈಕ್​ನಿಂದ ಸಾಕ್ಷಿ ಸಿಕ್ಕಿದೆ.

ಸೆಲೆಬ್ರಿಟಿಗಳ ವಲಯದಲ್ಲಿ ಡಾ. ರಾಜ್​ ಕನೋಡಿಯಾ ಅವರು ತುಂಬ ಫೇಮಸ್​ ಆಗಿದ್ದಾರೆ. ಬಾಲಿವುಡ್​, ಹಾಲಿವುಡ್​ ಮುಂತಾದ ಚಿತ್ರರಂಗಗಳ ಅನೇಕ ಸೆಲೆಬ್ರಿಟಿಗಳಿಗೆ ಅವರು ಪ್ಲಾಸ್ಟಿಕ್​ ಸರ್ಜರಿ ಮಾಡಿದ್ದಾರೆ. ಇದರಿಂದಾಗಿ ಕಲಾವಿದರ ಅಂದ-ಚಂದ ಹೆಚ್ಚಿಸಲು ಅವರು ಸಹಾಯ ಮಾಡಿದ್ದಾರೆ. ಅವರ ಬಳಿಯೇ ಜಾನ್ವಿ ಕಪೂರ್​ ಕೂಡ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದು ಹಲವರ ವಾದ.

ಡಾ. ರಾಜ್​ ಕನೋಡಿಯಾ ಅವರು ಇತ್ತೀಚೆಗೆ ಅನಂತ್​ ಅಂಬಾನಿಯ ಮದುವೆಗೆ ಬಂದಿದ್ದರು. ಈ ವೇಳೆ ಅವರು ಹಲವು ಸೆಲೆಬ್ರಿಟಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಆ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ನಟಿ ಜಾನ್ವಿ ಕಪೂರ್​ ಜೊತೆಗಿನ ಫೋಟೋ ಕೂಡ ಇದರಲ್ಲಿ ಇದೆ. ಇದನ್ನು ನೋಡಿದ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಅನಂತ್​ ಅಂಬಾನಿ ಮದುವೆ ಬಳಿಕ ಜಾನ್ವಿ ಕಪೂರ್​ಗೆ ಫುಡ್​ ಪಾಯ್ಸನ್​; ಆಸ್ಪತ್ರೆಗೆ ದಾಖಲು

‘ಜಾನ್ವಿ ಕಪೂರ್​ ಅಂದ ಹೆಚ್ಚಿಸಿದ ವ್ಯಕ್ತಿಯ ಜೊತೆ’ ಎಂಬ ಅರ್ಥ ಬರುವ ರೀತಿಯಲ್ಲಿ ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಈ ಕಮೆಂಟ್​ ಅನ್ನು ಸ್ವತಃ ಡಾ. ರಾಜ್​ ಕನೋಡಿಯಾ ಅವರು ಲೈಕ್​ ಮಾಡಿದ್ದಾರೆ. ಹೀಗೆ ಲೈಕ್​ ಮಾಡುವ ಮೂಲಕ ಅವರು ಪ್ಲಾಸ್ಟಿಕ್​ ಸರ್ಜರಿಯ ವಿಚಾರವನ್ನು ಅಧಿಕೃತಗೊಳಿಸಿದರು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ನಟಿಯ ಚಿಕಿತ್ಸೆಯ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಜಾನ್ವಿ ಕಪೂರ್​ ಅವರು ಮೌನ ಮುರಿಯುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.