
ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಇಂದು (ಜುಲೈ 18) 43ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಅವರು ಅದ್ದೂರಿಯಾಗಿ ತಮ್ಮ ಬರ್ತ್ಡೇನ ಆಚರಿಸಿಕೊಳ್ಳುತ್ತಿದ್ದಾರೆ. ಪತಿ ನಿಕ್ ಜೋನಸ್, ಮಗಳು ಮಾಲ್ತಿ ಜೊತೆ ವಿದೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಂಡವರು. ಆ ಬಳಿಕ ಬಾಲಿವುಡ್ನಲ್ಲಿ ಮಿಂಚಿದರು. ಹಲವು ವರ್ಷಗಳ ಕಾಲ ಈ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಅವರು ನಂತರ ಹಾರಿದ್ದು ಹಾಲಿವುಡ್ಗೆ. ಪ್ರಿಯಾಂಕಾ ಅವರು ಇಂಗ್ಲಿಷ್ ಗಾಯಕ ನಿಕ್ ಜೋನಸ್ನ ವಿವಾಹ ಆದ ಬಳಿಕ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಹಾಲಿವುಡ್ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ.
ಪ್ರಿಯಾಂಕಾ ಅವರು ಎನನ್ನು ಸೆಲೆಬ್ರೇಷನ್ ಮಾಡಿಕೊಳ್ಳಲು ಮರೆಯಬಹುದು, ಆದರೆ ಬರ್ತ್ಡೇನ ಮಾತ್ರ ಅವರು ತಪ್ಪದೇ ಸೆಲೆಬ್ರೇಟ್ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ವಿದೇಶ ಸುತ್ತುತ್ತಾರೆ. ಈ ಬಾರಿಯೂ ಪ್ರಿಯಾಂಕಾ ಹಾಗೆಯೇ ಮಾಡಿದ್ದಾರೆ.
ಇದನ್ನೂ ಓದಿ: ಬರ್ತ್ಡೇ ಗರ್ಲ್ ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತೆ ಗೊತ್ತಾ?
ಪತಿ ನಿಕ್ ಜೋನಸ್ ಹಾಗೂ ಮಾಲ್ತಿ ಜೊತೆ ಸೇರಿ ಐಲ್ಯಾಂಡ್ ಒಂದಕ್ಕೆ ತೆರಳಿದ್ದಾರೆ. ಅಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, ತಮಗೆ ಬೆಂಬಲವಾಗಿ ನಿಂತ ಕುಟುಂಬಕ್ಕೆ ಹಾಗೂ ಫ್ಯಾನ್ಸ್ಗೆ ಅವರು ಧನ್ಯವಾದ ತಿಳಿಸಿದ್ದಾರೆ. 43ನೇ ವಯಸ್ಸಿಗೆ ಕಾಲಿಟ್ಟ ಬಗ್ಗೆ ಅವರಿಗೆ ಖುಷಿ ಇದೆ.
ಪ್ರಿಯಾಂಕಾ ಚೋಪ್ರಾ ಅವರು ‘ಎಸ್ಎಸ್ಎಂಬಿ 21’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶನ ಸಿನಿಮಾಗೆ ಇದೆ. ಮಹೇಶ್ ಬಾಬು ಚಿತ್ರದ ಹೀರೋ. ಈ ಸಿನಿಮಾದ ಕಡೆಯಿಂದ ಪೋಸ್ಟರ್ ರಿಲೀಸ್ ಆಗಬಹುದು ಎಂದು ಫ್ಯಾನ್ಸ್ ಬಯಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಈ ವಿಚಾರ ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. ಇನ್ನೂ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈ ಕಾರಣದಿಂದ ಸಿನಿಮಾದ ಬಹುತೇಕ ಎಲ್ಲಾ ವಿಚಾರಗಳನ್ನು ಮುಚ್ಚಿಡುತ್ತಾ ಬರಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.