‘ಪ್ರಿಯಾಂಕಾ ಗಂಭೀರ ಅಫೇರ್ ಹೊಂದಿದ್ದು ನಿಜ’; ನಿರ್ದೇಶಕನ ದೊಡ್ಡ ಹೇಳಿಕೆ

ಪ್ರಿಯಾಂಕಾ ಚೋಪ್ರಾ ಮತ್ತು ಶಾರುಖ್ ಖಾನ್ ಅವರ ನಡುವಿನ ಅಫೇರ್ ಬಗ್ಗೆ ವರ್ಷಗಳಿಂದಲೂ ಊಹಾಪೋಹಗಳು ಕೇಳಿಬರುತ್ತಿವೆ. ಈಗ, ಜಾಹೀರಾತು ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಅವರು ಈ ಸಂಬಂಧ ಗಂಭೀರವಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. ಪ್ರಿಯಾಂಕಾ ಈ ಬಗ್ಗೆ ಎಂದಿಗೂ ಸ್ಪಷ್ಟವಾಗಿ ಮಾತನಾಡದಿದ್ದರೂ, ಕಕ್ಕರ್ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

‘ಪ್ರಿಯಾಂಕಾ ಗಂಭೀರ ಅಫೇರ್ ಹೊಂದಿದ್ದು ನಿಜ’; ನಿರ್ದೇಶಕನ ದೊಡ್ಡ ಹೇಳಿಕೆ
ಶಾರುಖ್-ಪ್ರಿಯಾಂಕಾ

Updated on: Sep 17, 2025 | 7:29 AM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಶಾರುಖ್ ಖಾನ್ ಜೊತೆ ಅಫೇರ್ ಇಟ್ಟುಕೊಂಡಿದ್ದರು ಎಂಬ ವಿಚಾರ ಈ ಮೊದಲಿನಿಂದಲೂ ಚರ್ಚೆಯಲ್ಲಿರೋ ವಿಚಾರ. ಆದರೆ, ಈ ಬಗ್ಗೆ ಅವರು ಎಂದಿಗೂ ಮಾತನಾಡಿಲ್ಲ. ಈಗ ಜಾಹೀರಾತು ನಿರ್ದೇಶಕ ಪ್ರಹ್ಲಾದ್ ಕಕ್ಕರ್ ಅವರು ಪ್ರಿಯಾಂಕಾ ಅವರ ಅಫೇರ್​ಗಳ ಬಗ್ಗೆ ಮಾತನಾಡಿದ್ದಾರೆ. ಅದು ತುಂಬಾನೇ ಗಂಭೀರವಾಗಿತ್ತು ಎಂದು ಕೂಡ ಹೇಳಿದ್ದಾರೆ. ಈ ಹೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿದೆ.

‘ಡಾನ್’ (2006) ಹಾಗೂ ‘ಡಾನ್ 2’ (2011) ಸಿನಿಮಾಗಳಲ್ಲಿ ಪ್ರಿಯಾಂಕಾ ಹಾಗೂ ಶಾರುಖ್ ಖಾನ್ ಒಟ್ಟಾಗಿ ನಟಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಅಫೇರ್ ಇತ್ತು ಎಂದು ಆ ಸಂದರ್ಭದಲ್ಲಿ ವರದಿ ಆಗಿತ್ತು. ಶಾರುಖ್ ಖಾನ್​ಗೆ ಆಗಲೇ ವಿವಾಹ ಆಗಿತ್ತು. ಆದರೂ ಪ್ರಿಯಾಂಕಾ ಜೊತೆ ಆಪ್ತತೆ ಹೊಂದಿದ್ದರು. ಆದರೆ, ಈ ಅಫೇರ್ ವಿಚಾರವನ್ನು ಪ್ರಿಯಾಂಕಾ ಒಪ್ಪಿಕೊಂಡಿಲ್ಲ. ಅದರ ಬಗ್ಗೆ ಅವರು ಎಂದಿಗೂ ಓಪನ್ ಆಗಿ ಮಾತನಾಡಿಲ್ಲ. ಪ್ರಹ್ಲಾದ್ ಕಕ್ಕರ್ ಅವರು ಈ ವಿಚಾರವಾಗಿ ಕೆಲ ವಿಷಯ ರಿವೀಲ್ ಮಾಡಿದ್ದಾರೆ.

‘ಪ್ರಿಯಾಂಕಾ ಅವರು ಡಾಲ್. ಅವರ ಜೊತೆ ಕೆಲಸ ಮಾಡೋದು ಖುಷಿ ಕೊಡುತ್ತದೆ. ಅವರು ತುಂಬಾನೇ ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿ. ಅವರು ಏಕಚಿತ್ತ ವ್ಯಕ್ತಿ. ಯಾವುದೇ ಕೆಲಸ ಮಾಡಿದರೂ ಗಮನ ಹರಿಸುತ್ತಾರೆ’ ಎಂದು ಅವರ ಕೆಲಸ ಬಗ್ಗೆ ಪ್ರಹ್ಲಾದ್ ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ
ಒಟಿಟಿಗೆ ಬಂದರೂ ಥಿಯೇಟರ್​​ನಲ್ಲಿ ಪ್ರದರ್ಶನ ಕಾಣುತ್ತಿದೆ ‘ಸು ಫ್ರಮ್ ಸೋ’
ವಿಷ್ಣುವರ್ಧನ್-ರಜನಿಕಾಂತ್  ಒಟ್ಟಾಗಿ ನಟಿಸಿದ್ದ ಸಿನಿಮಾದ ದೃಶ್ಯ ನೆನಪಿದೆಯೇ?
ವಿಷ್ಣು, ರಾಜ್, ಅಂಬಿ; ಒಂದೇ ವೇದಿಕೆ ಮೇಲೆ ಅಪೂರ್ವ ಸಂಗಮದ ಕ್ಷಣವಿದು
ಸಿನಿಮಾ ಪ್ರಚಾರಕ್ಕಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿಬಾರದು; ಧನುಶ್​ಗೆ ಛೀಮಾರಿ

‘ಪ್ರಿಯಾಂಕ ಘನತೆಯನ್ನು ಹೊಂದಿದ್ದಾರೆ. ಅಲ್ಲಿವರೆಗೆ ಬರೋಕೆ ಯಾರಿಗೂ ಅವಕಾಶವೇ ಇಲ್ಲ. ಅವರು ಒಂದು ಗಂಭೀರ ಅಫೇರ್ ಹೊಂದಿದ್ದರು. ಆದರೆ, ಅವರು ಎಂದಿಗೂ ಅದರ ಬಗ್ಗೆ ಯಾವುದೇ ಕಾಮೆಂಟ್ ಮಾಡಲಿಲ್ಲ. ಉಳಿದವರೆಲ್ಲರೂ ಅದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಅವರು ಈ ಬಗ್ಗೆ ಎಂದಿಗೂ ಏನನ್ನೂ ಹೇಳಲಿಲ್ಲ. ಅವರು ತಮ್ಮ ಘನತೆಯನ್ನು ಉಳಿಸಿಕೊಂಡರು’ ಎಂದಿದ್ದಾರೆ ಪ್ರಹ್ಲಾದ್.

‘ಅದು ಕ್ಷುಲ್ಲಕ ಸಂಬಂಧವಾಗಿದ್ದರೆ ಪ್ರಿಯಾಂಕಾ ನಗುತ್ತಿದ್ದರೇನೋ. ಆದರೆ, ಅದು ಗಂಭೀರವಾಗಿತ್ತು. ಹೀಗಾಗಿ ಆ ವಿಚಾರ ಅವರಿಗೆ ತುಂಬಾನೇ ವೈಯಕ್ತಿಕವಾಗಿತ್ತು. ಅದರ ಬಗ್ಗೆ ಬರೆಯುವುದು ಅವರಿಗೆ ಇಷ್ಟವಿರಲಿಲ್ಲ. ಅದರ ಬಗ್ಗೆ ಮಾತನಾಡುವುದು ಕೂಡ ಅವರಿಗೆ ಇಷ್ಟ ಆಗುತ್ತಿರಲಿಲ್ಲ’ ಎಂದು ಶಾಕಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ಸಖತ್ ಎಂಜಾಯ್ ಮಾಡಿದ ಪ್ರಿಯಾಂಕಾ ಚೋಪ್ರಾ; ಫೋಟೋಗಳೇ ಸಾಕ್ಷಿ

ನಿಕ್ ಜೋನಸ್ ಅವರನ್ನು ವಿವಾಹ ಆದ ಬಳಿಕ ಪ್ರಿಯಾಂಕಾ ಚೋಪ್ರಾ ವಿದೇಶದಲ್ಲಿ ಸೆಟಲ್ ಆದರು. ಈ ಅವಧಿಯಲ್ಲಿ ಹಾಲಿವುಡ್ ಸಿನಿಮಾ ಹಾಗೂ ಸರಣಿಗಳನ್ನು ಮಾತ್ರ ಮಾಡಿದರು. ಈಗ ಅವರು ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಮೂಲಕ ಮತ್ತೆ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.