ಧೂಮಪಾನ ಮತ್ತು ಮದ್ಯಪಾನವನ್ನು ಒಮ್ಮೆಲೆ ತ್ಯಜಿಸಲು ನಿರ್ಧರಿಸಿದ್ದ ನಟ ಅಮಿತಾಭ್ ಬಚ್ಚನ್​

|

Updated on: Apr 10, 2023 | 10:53 PM

Amitabh Bachchan: ಕಾಲೇಜು ವಿದ್ಯಾಭ್ಯಾಸ ಮುಗಿಸಿಕೊಂಡು ಕೆಲಸದ ಸಲುವಾಗಿ ಕೊಲ್ಕತ್ತಾಗೆ ಬಂದಾಗಲೂ ಅಮಿತಾಭ್​ ಬಚ್ಚನ್​ ಮದ್ಯಪಾನದ ಸಹವಾಸದಲ್ಲಿದ್ದರು. ಆ ದಿನಗಳ ಬಗ್ಗೆ ಅವರೀಗ ನೆನಪು ಮಾಡಿಕೊಂಡಿದ್ದಾರೆ.

ಧೂಮಪಾನ ಮತ್ತು ಮದ್ಯಪಾನವನ್ನು ಒಮ್ಮೆಲೆ ತ್ಯಜಿಸಲು ನಿರ್ಧರಿಸಿದ್ದ ನಟ ಅಮಿತಾಭ್ ಬಚ್ಚನ್​
ಅಮಿತಾಭ್ ಬಚ್ಚನ್
Follow us on

ನಟ ಅಮಿತಾಭ್​ ಬಚ್ಚನ್​ (Amitabh Bachchan) ಅವರು ಕೋಟ್ಯಂತರ ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಜೀವನದ ಅನುಭವ ಕೂಡ ಅಪಾರ. ಸಾಕಷ್ಟು ಏಳು-ಬೀಳುಗಳನ್ನು ಕಂಡು ಅವರು ಈ ಹಂತಕ್ಕೆ ಬಂದಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ಆಗಿ ಮೆರೆದಿದ್ದಾರೆ. ಅವರು ಕೂಡ ಸಾಮಾನ್ಯ ಜನರಂತೆ ಮದ್ಯಪಾನ ಮತ್ತು ಧೂಮಪಾನ (Smoking) ಮಾಡುತ್ತಿದ್ದರು. ಆದರೆ ಒಂದು ಘಳಿಗೆಯಲ್ಲಿ ಅದನ್ನೆಲ್ಲ ತೊರೆಯಬೇಕು ಅಂತ ಅವರಿಗೆ ಅನಿಸಿತು. ಏಕಕಾಲಕ್ಕೆ ಅವರು ಮದ್ಯಪಾನ ಮತ್ತು ಧೂಮಪಾನ ಸೇವನೆಯನ್ನು ತ್ಯಜಿಸಿದರು. ಆ ಕುರಿತು ಅವರು ತಮ್ಮ ಬ್ಲಾಗ್​ನಲ್ಲಿ (Amitabh Bachchan Blog) ಬರೆದುಕೊಂಡಿದ್ದಾರೆ. ಅಮಿತಾಭ್​ ಬಚ್ಚನ್​ ಅವರಿಗೆ ಈಗ 80 ವರ್ಷ ವಯಸ್ಸು. ಈ ಪ್ರಾಯದಲ್ಲೂ ಕೂಡ ಅವರು ಆ್ಯಕ್ಟೀವ್​ ಆಗಿದ್ದಾರೆ.

ಕಾಲೇಜು ದಿನಗಳಲ್ಲೇ ಅಮಿತಾಭ್​ ಬಚ್ಚನ್​ ಅವರು ಆಲ್ಕೋಹಾಲ್​ ರುಚಿ ಕಂಡಿದ್ದು. ಆದರೆ ಅದೊಂದು ವಿಚಿತ್ರ ಘಟನೆ. ವಿಜ್ಞಾನದ ಪ್ರಯೋಗಾಲಯದಲ್ಲಿ ಇರಿಸಿದ್ದ ಶುದ್ಧ ಆಲ್ಕೋಹಾಲ್​ ಅನ್ನು ಸ್ನೇಹಿತರ ಜೊತೆ ಸೇರಿ ಕುಡಿದಿದ್ದ ಅಮಿತಾಭ್​ ಬಚ್ಚನ್​ ಅವರು ಅನಾರೋಗ್ಯಕ್ಕೆ ಒಳಗಾಗಬೇಕಾಯಿತು. ಹುಡುಗಾಟದ ಆ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಅತಿಯಾಗಿ ಕುಡಿದು ಹಾನಿ ಉಂಟು ಮಾಡಿದ ಸಂದರ್ಭಕ್ಕೂ ಅವರು ಸಾಕ್ಷಿ ಆಗಿದ್ದರು.

ಇದನ್ನೂ ಓದಿ: ‘ಗಾಯ ಬೇಗ ಗುಣವಾಗುತ್ತದೆ’; ‘ಪ್ರಾಜೆಕ್ಟ್​ ಕೆ’ ಸೆಟ್​ನಲ್ಲಿ ಗಾಯಗೊಂಡ ಅಮಿತಾಭ್​ ಬಚ್ಚನ್ ಪೋಸ್ಟ್​

ಇದನ್ನೂ ಓದಿ
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಕಾಲೇಜು ವಿದ್ಯಾಭ್ಯಾಸ ಮುಗಿಸಿಕೊಂಡು ಕೆಲಸದ ಸಲುವಾಗಿ ಕೊಲ್ಕತ್ತಾಗೆ ಬಂದಾಗಲೂ ಅಮಿತಾಭ್​ ಬಚ್ಚನ್​ ಮದ್ಯಪಾನದ ಸಹವಾಸದಲ್ಲಿದ್ದರು. ನಂತರ ಅವರು ಸಿಗರೇಟ್​ ಮತ್ತು ಮದ್ಯಪಾನವನ್ನು ಏಕಕಾಲಕ್ಕೆ ತ್ಯಜಿಸಲು ನಿರ್ಧರಿಸಿದರು. ಅದು ಅವರ ವೈಯಕ್ತಿಕ ನಿರ್ಧಾರ ಆಗಿತ್ತು. ಆನಂತರ ಅವರು ಮದ್ಯಪಾನ ಮತ್ತು ಸಿಗರೇಟ್​ ಸೇವನೆ ಮಾಡಲಿಲ್ಲ. ತಮ್ಮ ಬ್ಲಾಗ್​ ಮೂಲಕ ಅವರು ಈ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಹಲವು ಸಿನಿಮಾಗಳಲ್ಲಿ ಅಮಿತಾಭ್​ ಬಚ್ಚನ್​ ಅವರು ನಟಿಸುತ್ತಿದ್ದಾರೆ. ಬಹುನಿರೀಕ್ಷಿತ ‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲಿ ಅವರು ಪ್ರಭಾಸ್​, ದೀಪಿಕಾ ಪಡುಕೋಣೆ ಮುಂತಾದವರ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಶೂಟಿಂಗ್​ ವೇಳೆ ಅವರಿಗೆ ಗಾಯ ಆಗಿತ್ತು. ಅದರಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಮಿತಾಭ್​ ಬಚ್ಚನ್​ ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ.

ಇದನ್ನೂ ಓದಿ: Bomb Threat Call: ಅಮಿತಾಭ್​, ಅಂಬಾನಿ, ಧರ್ಮೇಂದ್ರ ಮನೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ ಕಿಡಿಗೇಡಿ

‘ಪ್ರಾಜೆಕ್ಟ್​ ಕೆ’ ಮಾತ್ರವಲ್ಲದೇ ‘ಸೆಕ್ಷನ್​ 84’ ಚಿತ್ರವನ್ನೂ ಅಮಿತಾಭ್​ ಬಚ್ಚನ್​ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ರಿಬು ದಾಸ್​ಗುಪ್ತಾ ನಿರ್ದೇಶನ ಮಾಡಲಿದ್ದಾರೆ. ಕೋರ್ಟ್​ ರೂಮ್​ ಡ್ರಾಮಾ ಶೈಲಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ನಿಮ್ರತ್​ ಕೌರ್​, ಅಭಿಷೇಕ್​ ಬ್ಯಾನರ್ಜಿ, ಡೈನಾ ಪೆಂಟಿ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:18 pm, Mon, 10 April 23