ದಕ್ಷಿಣದ ಈ ಐದು ಸಿನಿಮಾಗಳ ಬಗ್ಗೆ ಬಾಲಿವುಡ್ಗೆ ಇದೆ ಭಯ?
ಹೊಸ ವರ್ಷ ಆರಂಭ ಆಗಿದೆ. ಸಾಕಷ್ಟು ಸಿನಿಮಾಗಳು ರಿಲೀಸ್ ಆಗೋಕೆ ರೆಡಿ ಆಗಿವೆ. ವಿಶೇಷ ಏನೆಂದರೆ, ಈ ವರ್ಷದ ಆರಂಭದಲ್ಲೇ ದಕ್ಷಿಣದ ಸಿನಿಮಾಗಳು ಗೆದ್ದಿವೆ. 25 ಕೋಟಿ ರೂಪಾಯಿ ಬಜೆಟ್‌ನ ‘ಹನುಮಾನ್’ ಸಿನಿಮಾ 300 ಕೋಟಿ ರೂಪಾಯಿ ಗಳಿಕೆಯ ಮಾಡಿ ಬೀಗಿದೆ. ದಕ್ಷಿಣದ ಕೆಲವು ಸಿನಿಮಾಗಳಿಂದ ಬಾಲಿವುಡ್ನಲ್ಲಿ ದೊಡ್ಡ ಅಲೆ ಏಳಲಿದೆ.
ಕಳೆದ ವರ್ಷ ಬಾಲಿವುಡ್ ಸಿನಿಮಾಗಳು ಸಾಕಷ್ಟು ಮಿಂಚಿದ್ದವು. ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’, ‘ಜವಾನ್’, ‘ಡಂಕಿ’ ಸಿನಿಮಾಗಳು ಗೆದ್ದವು. ರಣಬೀರ್ ಕಪೂರ್ ಅಭಿನಯದ ‘ಅನಿಮಲ್’, ಸನ್ನಿ ಡಿಯೋಲ್ ನಟನೆಯ ‘ಗದರ್ 2′, ರಣವೀರ್ ಸಿಂಗ್-ಆಲಿಯಾ ಕಾಂಬಿನೇಷನ್ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಮೊದಲಾದ ಹೀರೋಗಳ ಚಿತ್ರಗಳು ಗೆಲುವು ಕಂಡವು. ಅದೇ ರೀತಿ ದಕ್ಷಿಣದ ಚಿತ್ರಗಳು ಕೂಡ ಉತ್ತಮ ಪ್ರದರ್ಶನ ಕಂಡಿದೆ. ‘ಲಿಯೋ’, ‘ಜೈಲರ್’ ಮತ್ತು ‘ಸಲಾರ್’ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್ ಬಸ್ಟರ್ ಆಗಿವೆ.
ಈಗ ಹೊಸ ವರ್ಷ ಪ್ರಾರಂಭವಾಗಿದೆ. ಸಾಕಷ್ಟು ಸಿನಿಮಾಗಳು ರಿಲೀಸ್ ಆಗೋಕೆ ರೆಡಿ ಆಗಿವೆ. ವಿಶೇಷವೆಂದರೆ, ಈ ವರ್ಷದ ಆರಂಭದಲ್ಲೇ ದಕ್ಷಿಣದ ಸಿನಿಮಾಗಳು ಗೆದ್ದಿದೆ. 25 ಕೋಟಿ ರೂಪಾಯಿ ಬಜೆಟ್‌ನ ‘ಹನುಮಾನ್’ ಸಿನಿಮಾ 300 ಕೋಟಿ ರೂಪಾಯಿ ಗಳಿಕೆಯ ಮಾಡಿದೆ. ದಕ್ಷಿಣದ ಕೆಲವು ಸಿನಿಮಾಗಳಿಂದ ಬಾಲಿವುಡ್ನಲ್ಲಿ ದೊಡ್ಡ ಅಲೆ ಏಳಲಿದೆ.
‘ಪುಷ್ಪ: ದಿ ರೂಲ್’
ಅಲ್ಲು ಅರ್ಜುನ್ ನಟನೆಯ ‘ಪುಷ್ಪ: ದಿ ರೂಲ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೊದಲ ಭಾಗ 2021ರಲ್ಲಿ ಕೊನೆಯಲ್ಲಿ ರಿಲೀಸ್ ಆಯಿತು. ಪುಷ್ಪರಾಜ್ ಪಾತ್ರ ಎಲ್ಲರ ಹೃದಯ ಗೆದ್ದಿದೆ. ಈಗ ಎರಡನೇ ಭಾಗಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ 2024ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಮೊದಲ ಭಾಗಕ್ಕಿಂತ ಎರಡನೇ ಭಾಗ ಸಾಕಷ್ಟು ಅದ್ದೂರಿಯಾಗಿ ಇರಲಿದೆಯಂತೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ‘ಸಿಂಗಂ ಅಗೇನ್’ ಚಿತ್ರದ ಎದುರು ರಿಲೀಸ್ ಆಗಲಿದೆ.
‘ಕಾಂತಾರ: ಅಧ್ಯಾಯ 1’
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್ ರೆಡಿ ಆಗುತ್ತಿದೆ. ಇದಕ್ಕೆ ‘ಕಾಂತಾರ: ಅಧ್ಯಾಯ 1′ ಎಂದು ಹೆಸರು ಇಡಲಾಗಿದೆ. ಮೊದಲ ಭಾಗವು 2022ರ ಸೆಪ್ಟೆಂಬರ್ 30ರಂದು ರಿಲೀಸ್ ಆಯಿತು. ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಈ ಸಿನಿಮಾದ ಪ್ರೀಕ್ವೆಲ್ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಬಾಲಿವುಡ್ನ ಕೆಲವು ಸಿನಿಮಾಗಳು ರಿಲೀಸ್ ಆಗೋ ಸಾಧ್ಯತೆ ಇದೆ. ‘ಕಾಂತಾರ: ಅಧ್ಯಾಯ 1’ಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ.
ದೇವರ
ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರದಲ್ಲಿ ಬಾಲಿವುಡ್ ಕಲಾವಿದರೂ ನಟಿಸಿದ್ದಾರೆ. ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಇದೆ. ಮೊದಲ ಭಾಗವು 2024ರ ಏಪ್ರಿಲ್ 5ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: ‘ಪುಷ್ಪ 2’ ಚಿತ್ರೀಕರಣಕ್ಕೆ ತೆರಳಿದ್ದ ಕಲಾವಿದರ ಬಸ್ ಅಪಘಾತ; ಫೋಟೋ ನೋಡಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಗಾಬರಿ
ತಂಗಲಾನ್
ಪಾ. ರಂಜಿತ್ ನಿರ್ದೇಶನದಲ್ಲಿ ರೆಡಿ ಆಗುತ್ತಿರುವ, ಚಿಯಾನ್ ವಿಕ್ರಮ್ ನಟನೆಯ ‘ತಂಗಲಾನ್’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇದು ಚಿತ್ರದ ಕಥೆಯು ನೈಜ ಘಟನೆಯನ್ನು ಆಧರಿಸಿದೆ. ಕರ್ನಾಟಕದ ಕೋಲಾರ ಜಿಲ್ಲೆಯ ಕಥೆಯನ್ನು ಇದು ಹೊಂದಿದೆ. ಅಲ್ಲಿರುವ ಚಿನ್ನದ ಗಣಿಯ ಕಥೆ ಚಿತ್ರದಲ್ಲಿ ಇದೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸುತ್ತ ಕಥೆ ಸಾಗುತ್ತದೆ. ಇದರ ಟೀಸರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಸಾಕಷ್ಟು ಹಿಂಸೆ ಇರಲಿದೆ ಎನ್ನಲಾಗಿದೆ. ಈ ಸಿನಿಮಾ ಜನವರಿ 26ರಂದು ಬಿಡುಗಡೆ ಆಗಬೇಕಿತ್ತು. ಆದರೆ, ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ.
GOAT
ದಳಪತಿ ವಿಜಯ್ ಅವರು ರಾಜಕೀಯಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ಪಕ್ಷವನ್ನು ಕೂಡ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಸಿನಿಮಾ ಕೆಲಸಗಳಲ್ಲೂ ಅವರು ಬ್ಯುಸಿ ಆಗಿದ್ದಾರೆ. ಅವರು ‘GOAT’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರದ ಬಗ್ಗೆ ಬಾಲಿವುಡ್ ಮಂದಿಗೂ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ