ಮತ್ತೆ ಒಂದಾದ ಕಂಗನಾ ರಣಾವತ್​-ಆರ್​. ಮಾಧವನ್​; ಫೋಟೋ ವೈರಲ್​

ಆರ್​. ಮಾಧವನ್​ ಮತ್ತು ಕಂಗನಾ ರಣಾವತ್​ ನಟನೆಯ ‘ತನು ವೆಡ್ಸ್​ ಮನು’ ಸಿನಿಮಾ 2011ರಲ್ಲಿ ತೆರೆಕಂಡಿತ್ತು. ಅದು ಸೂಪರ್​ ಹಿಟ್​ ಆಗಿದ್ದರಿಂದ ಸೀಕ್ವೆಲ್​ ಕೂಡ ಮೂಡಿಬಂತು. 2015ರಲ್ಲಿ ‘ತನು ವೆಡ್ಸ್​ ಮನು ರಿಟರ್ನ್ಸ್​’ ಸಿನಿಮಾ ರಿಲಿಸ್​ ಆಯಿತು. ಈಗ 9 ವರ್ಷಗಳ ಬಳಿಕ ಹೊಸ ಸಿನಿಮಾಗಾಗಿ ಆರ್​. ಮಾಧವನ್​ ಮತ್ತು ಕಂಗನಾ ರಣಾವತ್​ ಒಂದಾಗುತ್ತಿದ್ದಾರೆ.

ಮತ್ತೆ ಒಂದಾದ ಕಂಗನಾ ರಣಾವತ್​-ಆರ್​. ಮಾಧವನ್​; ಫೋಟೋ ವೈರಲ್​
ಆರ್​. ಮಾಧವನ್​, ಕಂಗನಾ ರಣಾವತ್​

Updated on: Feb 13, 2024 | 12:17 PM

ನಟಿ ಕಂಗನಾ ರಣಾವತ್​ ಮತ್ತು ಆರ್​. ಮಾಧವನ್​ (R Madhavan) ಅವರದ್ದು ಬಾಲಿವುಡ್​ನಲ್ಲಿ (Bollywood) ಹಿಟ್​ ಜೋಡಿ. ‘ತನು ವೆಡ್ಸ್​ ಮನು’ ಮತ್ತು ‘ತನು ವೆಡ್ಸ್​ ಮನು ರಿಟರ್ನ್ಸ್​’ ಸಿನಿಮಾಗಳ ಮೂಲಕ ಅವರು ಅಪಾರ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈಗ ಅವರಿಬ್ಬರು ಮತ್ತೊಮ್ಮೆ ಒಂದಾಗಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಅಂದಹಾಗೆ, ಇದು ಗಾಸಿಪ್​ ಅಲ್ಲ, ಸ್ವತಃ ಕಂಗನಾ ರಣಾವತ್ (Kangana Ranaut)​ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾಧವನ್​ ಜೊತೆ ಇರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದಾರೆ.

‘ಇನ್ನೊಂದು ಅಚ್ಚರಿಯ ಸಿನಿಮಾಗಾಗಿ ನಾನು ನನ್ನ ಫೇವರಿಟ್​ ನಟನ ಜೊತೆ ಒಂದಾಗಿದ್ದೇನೆ’ ಎಂದು ಕಂಗನಾ ರಣಾವತ್​ ಅವರು ಈ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ‘ಕಂಗನಾ ರಣಾವತ್ ಜೊತೆ ಕೆಲಸ ಮಾಡಲು ಕಾತುರ ಶುರುವಾಗಿದೆ’ ಎಂದು ಆರ್​. ಮಾಧವನ್​ ಅವರು ಬರೆದುಕೊಂಡಿದ್ದಾರೆ. ಸದ್ಯಕ್ಕೆ ಅವರಿಬ್ಬರು ಸ್ಕ್ರಿಪ್ಟ್​ ರೀಡಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಆದಷ್ಟು ಬೇಗ ಈ ಸಿನಿಮಾದ ಶೂಟಿಂಗ್​ ಶುರುವಾಗಲಿ ಎಂದು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ‘12th ಫೇಲ್​’ ನಿರ್ದೇಶಕನ ಹೆಂಡತಿ ಮೇಲೆ ಸರಣಿ ಆರೋಪ ಮಾಡಿದ ಕಂಗನಾ ರಣಾವತ್​

‘ತನು ವೆಡ್ಸ್​ ಮನು’ ಸಿನಿಮಾ 2011ರಲ್ಲಿ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು. ಆ ಬಳಿಕ ಅದೇ ಸಿನಿಮಾಗೆ ಸೀಕ್ವೆಲ್​ ಸಿದ್ಧವಾಯಿತು. ‘ತನು ವೆಡ್ಸ್​ ಮನು ರಿಟರ್ನ್ಸ್​’ ಸಿನಿಮಾ 2015ರಲ್ಲಿ ಬಿಡುಗಡೆ ಆಯಿತು. ಈಗ 9 ವರ್ಷಗಳ ಬಳಿಕ ಹೊಸ ಸಿನಿಮಾಗಾಗಿ ಆರ್​. ಮಾಧವನ್​ ಮತ್ತು ಕಂಗನಾ ರಣಾವತ್​ ಅವರು ಒಂದಾಗುತ್ತಿದ್ದಾರೆ. ಈ ಬಾರಿ ಅವರು ನಟಿಸುವ ಸಿನಿಮಾ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಅನಿಮಲ್​’ ನಿರ್ದೇಶಕನಿಂದ ಬಂದ ಆಫರ್​ ತಿರಸ್ಕರಿಸಿದ ಕಂಗನಾ ರಣಾವತ್​

ನಟಿ ಕಂಗನಾ ರಣಾವತ್​ ಅವರು ನಿರ್ದೇಶನದಲ್ಲೂ ಆಸಕ್ತಿ ಹೊಂದಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಎಮರ್ಜೆನ್ಸಿ’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ತೆರೆಕಂಡಿರಬೇಕಿತ್ತು. ಆದರೆ ಕಾರಣಂತರಗಳಿಂದ ಚಿತ್ರದ ರಿಲೀಸ್​ ಡೇಟ್​ ಮುಂದಕ್ಕೆ ಹೋಯಿತು. ಜೂನ್​ 14ರಂದು ‘ಎಮರ್ಜೆನ್ಸಿ’ ಬಿಡುಗಡೆ ಆಗಲಿದೆ. ಆ ನಡುವೆ ಕಂಗನಾ ರಣಾವತ್​ ಅವರು ಹೊಸ ಹೊಸ ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us