ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ (Radhika Merchant) ವಿವಾಹ ಪೂರ್ವ ಕಾರ್ಯಕ್ರಮದ ಬಗ್ಗೆ ಇನ್ನೂ ಭರ್ಜರಿ ಚರ್ಚೆಗಳು ನಡೆಯುತ್ತಿವೆ. ಯಾವ ಯಾವ ಸೆಲೆಬ್ರಿಟಿಗಳು ಬಂದಿದ್ದರು, ಆಗ ಅಲ್ಲಿ ಆದ ಘಟನೆಗಳು ಏನು ಎನ್ನುವ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ವಿಡಿಯೋ ಕೂಡ ವೈರಲ್ ಆಗುತ್ತಿದೆ. ಶಾರುಖ್ ಖಾನ್ ಕೂಡ ಮುಖೇಶ್ ಅಂಬಾನಿ ಆಯೋಜಿಸಿದ್ದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ರಾಧಿಕಾ ಆಡಿದ ಮಾತು ಸಖತ್ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಅವರನ್ನು ಎಲ್ಲರೂ ಸರ್ ಎಂದೇ ಕರೆಯುತ್ತಾರೆ. ಅವರದ್ದೇ ವಯಸ್ಸಿನವರಾದರೂ ಶಾರುಖ್ ಅವರೇ ಎನ್ನುತ್ತಾರೆ. ಆದರೆ, ವೇದಿಕೆ ಏರಿದ ಶಾರುಖ್ ಖಾನ್ ಅವರನ್ನು ಅಂಕಲ್ ಎಂದು ಕರೆದಿದ್ದಾರೆ ರಾಧಿಕಾ. ಈ ವಿಚಾರವನ್ನು ಕೆಲವರು ಟೀಕಿಸಿದ್ದಾರೆ. ಆದರೆ, ಈ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಶಾರುಖ್ ಖಾನ್ ಅವರ ಜೊತೆ ವೇದಿಕೆ ಏರಿದ ರಾಧಿಕಾ ಮರ್ಚಂಟ್, ‘ಶಾರುಖ್ ಅಂಕಲ್ ನಿಮ್ಮ ಸಿನಿಮಾದ ಒಂದು ಡೈಲಾಗ್ ಹೇಳಲೇ’ ಎಂದು ಕೇಳಿದ್ದಾರೆ. ಈ ವೇಳೆ ಶಾರುಖ್ ಜೋಕ್ ಮಾಡಿದ್ದಾರೆ. ‘ಈ ಜಾಗದಲ್ಲಿ ಅಕ್ಷಯ್ ಕುಮಾರ್ ಇದ್ದರೆ ನೀವು ಅವರ ಸಿನಿಮಾ ಡೈಲಾಗ್ ಹೇಳಬೇಕಿತ್ತು. ಅಕ್ಕಿ ಇದನ್ನು ನಾನು ಪ್ರೀತಿಯಿಂದ ಹೇಳುತ್ತಿದ್ದೇನೆ’ ಎಂದಿದ್ದಾರೆ ಅವರು.
ರಾಧಿಕಾ ಮರ್ಚಂಟ್ ಅವರು ಶಾರುಖ್ ಖಾನ್ ನಟನೆಯ ‘ಓಂ ಶಾಂತಿ ಓಂ’ ಚಿತ್ರದ ಐಕಾನಿಕ್ ಡೈಲಾಗ್ ಹೇಳಿದ್ದಾರೆ. ‘ನಾನು ನಿನ್ನನ್ನು ಪಡೆಯಲು ಎಷ್ಟು ಪ್ರಯತ್ನಿಸಿದೆನೋ, ನನ್ನ ಪ್ರತಿಯ ಪ್ರತಿ ತುಣುಕೂ ನನ್ನನ್ನು ನಿನ್ನೊಂದಿಗೆ ಒಂದುಗೂಡಿಸಲು ಪ್ರಯತ್ನಿಸಿದೆ’ ಎಂದು ಹೇಳಿದ್ದಾರೆ. ಶಾರುಖ್ ಖಾನ್ನ ‘ಅಂಕಲ್’ ಎಂದು ಕರೆದಿದ್ದನ್ನು ಕೆಲವರು ಟೀಕಿಸಿದ್ದಾರೆ. ‘ಇದೆಲ್ಲ ಹಣದ ಮಹಿಮೆ’ ಎಂದಿದ್ದಾರೆ. ಇನ್ನೂ ಕೆಲವರು ‘ಅವರೆಲ್ಲ ಒಂದೇ ಕುಟುಂಬಂದಂತೆ. ಹೀಗಾಗಿ, ಈ ರೀತಿ ಕರೆಯೋದರಲ್ಲಿ ಏನೂ ತಪ್ಪಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ಧರಿಸಿದ್ದ 10 ಕೋಟಿ ರೂಪಾಯಿ ವಾಚ್ ನೋಡಿ ದಿಗ್ಭ್ರಮೆಗೊಂಡ ಜುಕರ್ಬರ್ಗ್ ಪತ್ನಿ
ಅನಂತ್ ಹಾಗೂ ರಾಧಿಕಾ ಮರ್ಚಂಟ್ ಅವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಗುಜರಾತ್ನ ಜಾಮ್ನಗರದಲ್ಲಿ ನಡಿದಿದೆ. ಈ ವೇಳೆ ಬಾಲಿವುಡ್ನ ಬಹುತೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಇಂಗ್ಲಿಷ್ ಸಿಂಗರ್ಗಳು ಕೂಡ ಆಗಮಿಸಿ ಹಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ