ಅಶ್ಲೀಲ ಸಿನಿಮಾ ದಂಧೆಯಲ್ಲಿ ನಟಿ-ಮಾಡೆಲ್​ ನಂದಿತಾ ದತ್ತ ಅರೆಸ್ಟ್​; ಹಲವರಿಗೆ ಬಂಧನ ಭೀತಿ

ಓಟಿಟಿ ಪ್ಲಾಟ್​ಫಾರ್ಮ್​ನ ಹಲವು ಅಡಲ್ಟ್​ ಸಿನಿಮಾಗಳಲ್ಲಿ ನಂದಿತಾ ದತ್ತ ನಟಿಸಿದ್ದರು. ಅಶ್ಲೀಲ ಸಿನಿಮಾ ದಂಧೆ ಕೇಸ್​ನಲ್ಲಿ ಅವರೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರ ಜೊತೆ ರಾಜ್ ಕುಂದ್ರಾಗೆ ಏನಾದರೂ ಸಂಬಂಧ ಇತ್ತಾ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಅಶ್ಲೀಲ ಸಿನಿಮಾ ದಂಧೆಯಲ್ಲಿ ನಟಿ-ಮಾಡೆಲ್​ ನಂದಿತಾ ದತ್ತ ಅರೆಸ್ಟ್​; ಹಲವರಿಗೆ ಬಂಧನ ಭೀತಿ
ಅಶ್ಲೀಲ ಸಿನಿಮಾ ದಂಧೆಯಲ್ಲಿ ನಟಿ-ಮಾಡೆಲ್​ ನಂದಿತಾ ದತ್ತ ಅರೆಸ್ಟ್​; ಹಲವರಿಗೆ ಬಂಧನ ಭೀತಿ
Edited By:

Updated on: Aug 01, 2021 | 12:04 PM

ಅಶ್ಲೀಲ ಸಿನಿಮಾ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್​ ಕುಂದ್ರಾ (Raj Kundra) ಸಿಕ್ಕಿಬಿದ್ದ ನಂತರ ಈ ಪ್ರಕರಣದ ತನಿಖೆ ಚುರುಕಾಗಿದೆ. ಎಲ್ಲ ಆಯಾಮದಿಂದಲೂ ವಿಚಾರಣೆ ಮಾಡಲಾಗುತ್ತಿದೆ. ನಟಿ ನಂದಿತಾ ದತ್ತ (Nandita Dutta) ಅವರನ್ನು ಕೊಲ್ಕತ್ತಾ ಪೊಲೀಸರು ಈಗ ಬಂಧಿಸಿದ್ದಾರೆ. ನ್ಯಾನ್ಸಿ ಭಾಬಿ (Nancy Bhabhi) ಎಂದು ಫೇಮಸ್​ ಆಗಿದ್ದ ಅವರ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ. ಹಾಗಾಗಿ ಅವರು ಪೊಲೀಸರ ಅತಿಥಿ ಆಗಿದ್ದಾರೆ. ನಂದಿತಾ ದತ್ತಗೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಇನ್ನೂ ಹಲವು ನಟಿಯರ ಹೆಸರು ಹೊರಬರುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಅನೇಕರಿಗೆ ಬಂಧನ ಭೀತಿ ಶುರುವಾಗಿದೆ.

ರೂಪದರ್ಶಿಯೊಬ್ಬರನ್ನು ಬಲವಂತವಾಗಿ ನೀಲಿ ಚಿತ್ರ ದಂಧೆಗೆ ನೂಕಿದ ಆರೋಪ ನಂದಿತಾ ಮೇಲಿದೆ. ಯುವತಿಯನ್ನು ಬೆದರಿಸಿ, ಆಕೆಯ ನಗ್ನ ಚಿತ್ರವನ್ನು ನಂದಿತಾ ಅಪ್​ಲೋಡ್​ ಮಾಡಿದ್ದಾರೆ. ಯುವತಿಯ ಸ್ನೇಹಿತನನ್ನು ಅವರು ಬಲವಂತದಿಂದ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ನಂದಿತಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ನಂದಿತಾ ಜೊತೆ ಸಂಪರ್ಕ ಹೊಂದಿದ್ದ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇವರು ಸಂಚು ರೂಪಿಸಿಕೊಂಡು ಎಲ್ಲಿ ನೀಲಿ ಚಿತ್ರದ ಶೂಟಿಂಗ್​ ಮಾಡುತ್ತಿದ್ದರು ಹಾಗೂ ಯಾವ ದೊಡ್ಡ ಗ್ಯಾಂಗ್​ ಜೊತೆಗೆ ಇವರು ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ’ ಎಂದು ಪೊಲೀಸರು ಹೇಳಿದ್ದಾರೆ. ವಿಚಾರಣೆ ಮುಂದುವರಿದಂತೆ ನೀಲಿ ಚಿತ್ರ ದಂಧೆಯ ದೊಡ್ಡ ಜಾಲವೇ ಬೆಳಕಿಗೆ ಬರುವ ಸಾಧ್ಯತೆ ದಟ್ಟವಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ನ್ಯಾನ್ಸಿ ಭಾಬಿ ಎಂಬ ಖಾತೆ ಹೊಂದಿದ್ದ ನಂದಿತಾ ದತ್ತ ಅವರು ತನ್ನ ಹಾಟ್​ ಫೋಟೋಗಳನ್ನು ಅಪ್​ಲೋಡ್​ ಮಾಡುತ್ತಿದ್ದರು. ಆ ಮೂಲಕ ಹೆಚ್ಚು ಫಾಲೋವರ್ಸ್​ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಆದರೆ ಅದು ಅವರ ಅಧಿಕೃತ ಖಾತೆ ಹೌದೋ ಅಲ್ಲವೋ ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ.

ಓಟಿಟಿ ಪ್ಲಾಟ್​ಫಾರ್ಮ್​ನ ಹಲವು ಅಡಲ್ಟ್​ ಸಿನಿಮಾಗಳಲ್ಲಿ ನಂದಿತಾ ದತ್ತ ಕಾಣಿಸಿಕೊಂಡಿದ್ದರು. ಅವರ ಜೊತೆ ರಾಜ್ ಕುಂದ್ರಾಗೆ ಏನಾದರೂ ಸಂಬಂಧ ಇತ್ತಾ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ನಟಿ ಗೆಹನಾ ವಸಿಷ್ಠ್​ ಕೂಡ ಅಶ್ಲೀಲ ಸಿನಿಮಾ ದಂಧೆಯಲ್ಲಿ ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಈ ಸಂಬಂಧ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ:

ಪತಿ ರಾಜ್​ ಕುಂದ್ರಾ ನೀಲಿ ಚಿತ್ರ ಕರ್ಮಕಾಂಡದಿಂದ ಶಿಲ್ಪಾ ಶೆಟ್ಟಿಗೆ ಆಗುತ್ತಿದೆ ಕೋಟಿ ಕೋಟಿ ನಷ್ಟ

ಅಶ್ಲೀಲ ಸಿನಿಮಾ ದಂಧೆಗೆ ಹುಡುಗಿಯರನ್ನು ಹೇಗೆ ತಳ್ಳುತ್ತಿದ್ದರು? ಯುವತಿಯರನ್ನು ಬೆಚ್ಚಿ ಬೀಳಿಸುವ ವಿವರ ಇಲ್ಲಿದೆ