ಬ್ಯುಸಿನೆಸ್​ ಪಾರ್ಟ್ನರ್ ಬಿಚ್ಚಿಟ್ರು ರಾಜ್​ ಕುಂದ್ರಾ ಕರಾಳ ಮುಖ; ಇನ್ಮೇಲೆ ಮತ್ತಷ್ಟು ಸಂಕಷ್ಟ

| Updated By: ರಾಜೇಶ್ ದುಗ್ಗುಮನೆ

Updated on: Sep 17, 2021 | 1:46 PM

ರಾಜ್​ ಕುಂದ್ರಾ ಪ್ರಕರಣದ ತನಿಖೆ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ​ಇವರು ಆರಂಭಿಸದ ಕಂಪನಿಗೆ ಆರ್ಮ್ಸ್​ಪ್ರೈಮ್​ ಲಿಮಿಟೆಡ್​ ಎಂದು ಹೆಸರು ಇಡಲಾಗಿತ್ತು.

ಬ್ಯುಸಿನೆಸ್​ ಪಾರ್ಟ್ನರ್ ಬಿಚ್ಚಿಟ್ರು ರಾಜ್​ ಕುಂದ್ರಾ ಕರಾಳ ಮುಖ; ಇನ್ಮೇಲೆ ಮತ್ತಷ್ಟು ಸಂಕಷ್ಟ
ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ
Follow us on

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾಗೆ ಸಂಕಷ್ಟ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಬಗೆದಷ್ಟು ಹೊಸಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇದರಿಂದ ಅವರಿಗೆ ಜಾಮೀನು ಸಿಗೋದು ಮತ್ತಷ್ಟು ಕಷ್ಟ ಆಗುತ್ತಿದೆ. ಈ ಮಧ್ಯೆ ರಾಜ್​ ಕುಂದ್ರಾ ಬ್ಯುಸಿನೆಸ್​ ಪಾರ್ಟ್ನರ್​ ಒಬ್ಬರು ರಾಜ್​ ಕುಂದ್ರಾ ಅವರ ನಿಜವಾದ ಬಣ್ಣವನ್ನು ಅನಾವರಣ ಮಾಡಿದ್ದಾರೆ.

ರಾಜ್​ ಕುಂದ್ರಾ ಪ್ರಕರಣದ ತನಿಖೆ ವೇಳೆ ಪಾರ್ಟ್ನರ್ ಸೌರಭ್​ ಕುಶ್ವಾನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ​ಇವರು ಆರಂಭಿಸಿದ ಕಂಪನಿಗೆ ಆರ್ಮ್ಸ್​ಪ್ರೈಮ್​ ಲಿಮಿಟೆಡ್​ ಎಂದು ಹೆಸರು ಇಡಲಾಗಿತ್ತು. ಇದಕ್ಕೆ ರಾಜ್​ ಕುಂದ್ರಾ ಹಾಗೂ ಸೌರಭ್​ ಕುಶ್ವಾನ್​ ನಿರ್ದೇಶಕರಾಗಿದ್ದರು. ಈ ಕಂಪನಿ ಅಡಿಯಲ್ಲಿ ಹಾಟ್​ಶಾಟ್ಸ್​ ಆ್ಯಪ್​ ಆರಂಭಗೊಂಡಿತ್ತು. ಸೌರಭ್​ ಈ ಕಂಪನಿಯಲ್ಲಿ ಶೇ.35 ಷೇರನ್ನು ಹೊಂದಿದ್ದರು. ಆದರೆ, ವಿಡಿಯೋ ನಿರ್ಮಾಣ, ಅದನ್ನು ಯಾವಾಗ ಅಪ್​ಲೋಡ್​ ಮಾಡಬೇಕು, ಆ್ಯಪ್​ನಲ್ಲಿ ಏನೆಲ್ಲ ಬದಲಾವಣೆ ತರಬೇಕು ಎನ್ನುವುದರ ನಿಯಂತ್ರಣ ರಾಜ್​ ಕುಂದ್ರಾ ಬಳಿಯೇ ಇತ್ತು. ಪೋರ್ನ್​ ವಿಡಿಯೋ ಹಂಚುವ ಉದ್ದೇಶದಿಂದಲೇ ಈ ಆ್ಯಪ್​ ಆರಂಭಿಸಲಾಗಿತ್ತು ಎನ್ನುವ ಮಾಹಿತಿಯನ್ನು ಸೌರಭ್​ ಪೊಲೀಸರಿಗೆ ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರಕರಣದಿಂದ ಅವರು ತಪ್ಪಿಸಿಕೊಂಡಿದ್ದಾರೆ. ಸೌರಭ್​ ಹೇಳಿಕೆಯಿಂದ ರಾಜ್​ ಕುಂದ್ರಾ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ.

ಮುಂಬೈ ಪೊಲೀಸರು ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ವಿರುದ್ಧ 1,400 ಪುಟಗಳ ಆರೋಪ ಪಟ್ಟಿಯನ್ನು ತಯಾರಿಸಿ, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ ನಟಿ ಶಿಲ್ಪಾ ಶೆಟ್ಟಿ ಸೇರಿ ಸಾಕಷ್ಟು ಜನರ ಹೇಳಿಕೆ ಉಲ್ಲೇಖಿಸಲಾಗಿದೆ. ‘ಹಾಟ್​ಶಾಟ್ಸ್ ಹಾಗೂ ಬಾಲಿಫೇಮ್ ಆ್ಯಪ್​ಗಳ ಕುರಿತಾಗಿ ಮಾಹಿತಿಯಿರಲಿಲ್ಲ. ನಾನು ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಿದ್ದೆ. ರಾಜ್ ಕುಂದ್ರಾ ಏನು ಮಾಡುತ್ತಿದ್ದರು ಎಂಬುದರ ಕುರಿತಾಗಿ ನನಗೆ ಮಾಹಿತಿಯಿರಲಿಲ್ಲ’ ಎಂದು ಶಿಲ್ಪಾ ಪೊಲೀಸರ ಎದುರು ಹೇಳಿದ್ದರು.

ರಾಜ್​ ಕುಂದ್ರಾ ಬಂಧನವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಆದಾಗ್ಯೂ ಅವರಿಗೆ ಜಾಮೀನು ಸಿಕ್ಕಿಲ್ಲ. ಜಾಮೀನು ಪಡೆಯೋಕೆ ಎಷ್ಟೇ ಹರಸಾಹಸ ನಡೆಸಿದರೂ ಅದು ಸಾಧ್ಯವಾಗುತ್ತಿಲ್ಲ. ಇತ್ತ ಶಿಲ್ಪಾ ಶೆಟ್ಟಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಮಿತಾ ಶೆಟ್ಟಿ-ರಾಕೇಶ್​ ಬಾಪಟ್​​ ಸಂಬಂಧಕ್ಕೆ ಮನೆಯವರ ಒಪ್ಪಿಗೆ? ಶಿಲ್ಪಾ ಶೆಟ್ಟಿ ತಾಯಿಯಿಂದ ಹೊಗಳಿಕೆ​