Raj Kundra: ‘ನಾವು ಬೇರೆ ಆಗಿದ್ದೇವೆ’ ಅಂತ ರಾಜ್ ಕುಂದ್ರಾ ಹೇಳಿದ್ದು ಶಿಲ್ಪಾ ಶೆಟ್ಟಿ ಬಗ್ಗೆ ಅಲ್ಲ; ಅಸಲಿ ವಿಷಯ ಬಯಲು
UT 69: ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಡಿವೋರ್ಸ್ ಪಡೆದಿಲ್ಲ. ಆ ರೀತಿಯ ಆಲೋಚನೆಯೂ ಅವರಿಗೆ ಬಂದಿಲ್ಲ. ಸದ್ಯಕ್ಕೆ ಅವರ ಸಂಸಾರ ಚೆನ್ನಾಗಿಯೇ ನಡೆಯುತ್ತಿದೆ. ಆದರೂ ಕೂಡ ರಾಜ್ ಕುಂದ್ರಾ ಹೀಗೆ ಪೋಸ್ಟ್ ಮಾಡಲು ಒಂದು ಕಾರಣ ಇದೆ. ಈಗ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರೆ.
ಉದ್ಯಮಿ ರಾಜ್ ಕುಂದ್ರಾ (Raj Kundra) ಅವರು ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪದ ಮೇಲೆ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಈ ಕಳಂಕದಿಂದ ಅವರಿಗೆ ಪತ್ನಿ ಶಿಲ್ಪಾ ಶೆಟ್ಟಿ ವಿಚ್ಛೇದನ (Divorce) ನೀಡಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಹಾಗಾಗಲಿಲ್ಲ. ಪತಿಯ ಜೊತೆ ಶಿಲ್ಪಾ ಶೆಟ್ಟಿ (Shilpa Shetty) ಹೊಂದಿಕೊಂಡು ಸಂಸಾರ ಮುಂದುವರಿಸಿದರು. ಹಾಗಿದ್ದರೂ ಕೂಡ ರಾಜ್ ಕುಂದ್ರಾ ಅವರು ಇತ್ತೀಚೆಗೆ ಮಾಡಿದ ಪೋಸ್ಟ್ನಿಂದ ಅಭಿಮಾನಿಗಳ ವಲಯದಲ್ಲಿ ಅನುಮಾನ ವ್ಯಕ್ತವಾಗಿತ್ತು. ‘ನಾವಿಬ್ಬರೂ ಬೇರೆ ಆಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಕಾಲಾವಕಾಶ ನೀಡಿ ಅಂತ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ರಾಜ್ ಕುಂದ್ರಾ ಬರೆದುಕೊಂಡಿದ್ದು ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗ ಅದರ ಹಿಂದಿನ ಅಸಲಿ ಕಹಾನಿ ಏನು ಎಂಬುದನ್ನು ತೆರೆದಿಟ್ಟಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ಡಿವೋರ್ಸ್ ಪಡೆದಿಲ್ಲ. ಆ ರೀತಿಯ ಯಾವುದೇ ಆಲೋಚನೆ ಕೂಡ ಅವರಿಗೆ ಬಂದಿಲ್ಲ. ಸದ್ಯಕ್ಕಂತೂ ಅವರ ಸಂಸಾರ ಚೆನ್ನಾಗಿಯೇ ನಡೆಯುತ್ತಿದೆ. ಹಾಗಿದ್ದರೂ ಕೂಡ ರಾಜ್ ಕುಂದ್ರಾ ಹೀಗೆ ಪೋಸ್ಟ್ ಮಾಡಲು ಒಂದು ಪ್ರಮುಖ ಕಾರಣ ಇದೆ. ಈಗ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರೆ. ಇಷ್ಟು ದಿನ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದ ರಾಜ್ ಕುಂದ್ರಾ ಅವರು ಮಾಸ್ಕ್ಗೆ ಗುಡ್ಬೈ ಹೇಳಲು ನಿರ್ಧರಿಸಿದ್ದಾರೆ.
Farewell Masks …it’s time to separate now! Thank you for keeping me protected over the last two years. Onto the next phase of my journey #UT69 🙏🎭🥹 🧿😇❤️ pic.twitter.com/svhiGS8aHt
— Raj Kundra (@onlyrajkundra) October 20, 2023
‘ನಾವಿಬ್ಬರೂ ಬೇರೆ ಆಗಿದ್ದೇವೆ’ ಎಂದು ರಾಜ್ ಕುಂದ್ರ ಹೇಳಿರುವುದು ಮಾಸ್ಕ್ ಬಗ್ಗೆ. ಅದೀಗ ಸ್ಪಷ್ಟವಾಗಿದೆ. ಹೊಸ ಪೋಸ್ಟ್ ಮೂಲಕ ಅವರು ಆ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಮಾಸ್ಕ್ಗಳಿಗೆ ವಿದಾಯ. ಇದು ಬೇರೆ ಆಗುವ ಸಮಯ. ಕಳೆದ ಎರಡು ವರ್ಷಗಳಿಂದ ನನ್ನನ್ನು ಕಾಪಾಡಿದ್ದಕ್ಕಾಗಿ ಧನ್ಯವಾದಗಳು’ ಎಂದು ರಾಜ್ ಕುಂದ್ರಾ ಬರೆದುಕೊಂಡಿದ್ದಾರೆ. ಅಲ್ಲದೇ ಇಷ್ಟು ದಿನ ತಾವು ಧರಿಸಿದ ವಿವಿಧ ಬಗೆಯ ಮಾಸ್ಕ್ಗಳ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Raj Kundra: ಮಗಳ ಜತೆ ಮುಖ ತೋರಿಸಲಾಗದೇ ಓಡಿ ಹೋದ ರಾಜ್ ಕುಂದ್ರಾ; ಹಣೆ ಚಚ್ಚಿಕೊಂಡ ಶಿಲ್ಪಾ ಶೆಟ್ಟಿ
ರಾಜ್ ಕುಂದ್ರಾ ಈಗ ನಟ ಕೂಡ ಹೌದು. ಅವರು ನಟಿಸಿರುವ ‘ಯುಟಿ 69’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಆರ್ಥರ್ ರೋಡ್ ಜೈಲಿನಲ್ಲಿ ರಾಜ್ ಕುಂದ್ರಾ ಅವರು ಕಳೆದ ದಿನಗಳನ್ನೇ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಜೈಲಿನಲ್ಲಿ ಅವರು ಅನುಭವಿಸಿದ ಕಷ್ಟಗಳನ್ನು ಮನರಂಜನೆಯ ಶೈಲಿಯಲ್ಲಿ ತೆರೆಗೆ ತರಲಾಗಿದೆ. ಈ ಸಿನಿಮಾ ನವೆಂಬರ್ 3ರಂದು ಬಿಡುಗಡೆ ಆಗಲಿದೆ. ಅದರ ಪ್ರಚಾರದ ಸಲುವಾಗಿ ರಾಜ್ ಕುಂದ್ರಾ ಸಿಕ್ಕಾಪಟ್ಟೆ ಗಿಮಿಕ್ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.