ಕೊಹ್ಲಿ ಫೇವರಿಟ್ ಗುರೂಜಿಗೆ ತಮ್ಮದೇ ಮೂತ್ರಪಿಂಡ ಕೊಡಲು ಮುಂದಾದ ಶಿಲ್ಪಾ ಪತಿ

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರು ವೃಂದಾವನಕ್ಕೆ ತೆರಳ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜರ ಆಶೀರ್ವಾದ ಪಡೆದಿದ್ದಾರೆ. ರಾಜ್ ಕುಂದ್ರಾ ಅವರು ಮಹಾರಾಜರ ಮೂತ್ರಪಿಂಡ ವೈಫಲ್ಯದ ಬಗ್ಗೆ ತಿಳಿದು, ತಮ್ಮ ಮೂತ್ರಪಿಂಡವನ್ನು ದಾನ ಮಾಡಲು ಸಿದ್ಧ ಎಂದು ಹೇಳಿದರು. ಆದರೆ ಮಹಾರಾಜರು ಅವರ ವಿನಂತಿಯನ್ನು ತಿರಸ್ಕರಿಸಿದರು.

ಕೊಹ್ಲಿ ಫೇವರಿಟ್ ಗುರೂಜಿಗೆ ತಮ್ಮದೇ ಮೂತ್ರಪಿಂಡ ಕೊಡಲು ಮುಂದಾದ ಶಿಲ್ಪಾ ಪತಿ
ರಾಜ್-ಶಿಲ್ಪಾ
Updated By: ರಾಜೇಶ್ ದುಗ್ಗುಮನೆ

Updated on: Aug 15, 2025 | 8:02 AM

ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರನ್ನು ಅನುಸರಿಸುತ್ತಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ಆಗಾಗ ಇಲ್ಲಿಗೆ ಬರುತ್ತಾ ಇರುತ್ತಾರೆ. ಈಗ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಅವರ ಪತಿ ರಾಜ್ ಕುಂದ್ರಾ ಕೂಡ ಅವರ ಆಶೀರ್ವಾದ ಪಡೆಯಲು ವೃಂದಾವನಕ್ಕೆ ತಲುಪಿದ್ದಾರೆ. ಶಿಲ್ಪಾ ಮತ್ತು ರಾಜ್ ಅವರಿಗೆ ಪ್ರೇಮಾನಂದ ಮಹಾರಾಜ್ ಮಾರ್ಗದರ್ಶನ ನೀಡಿದರು. ಯಾವುದೇ ವ್ಯಸನಗಳನ್ನು ಮಾಡಬಾರದು ಎಂದು ಸಲಹೆ ನೀಡಿದರು. ಈ ವೇಳೆ ರಾಜ್ ಅವರು ಮೂತ್ರಪಿಂಡ ದಾನದ ಬಗ್ಗೆ ಮಾತನಾಡಿದರು.

ಪ್ರೇಮಾನಂದ ಮಹಾರಾಜ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ. ಕಳೆದ ಹತ್ತು ವರ್ಷಗಳಿಂದ ಅವರು ಡಯಾಲಿಸಿಸ್‌ನಲ್ಲಿದ್ದಾರೆ. ಈಗ, ತಾವು ಸಾವಿಗೆ ಹೆದರುವುದಿಲ್ಲ ಎಂದು ಹೇಳಿದರು. ಇದನ್ನು ಕೇಳಿದ ರಾಜ್, ಕೈಮುಗಿದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ‘ನೀವು ತುಂಬಾ ಜನಪ್ರಿಯರು. ನೀವು ಎಲ್ಲರಿಗೂ ಸ್ಫೂರ್ತಿ. ನೀವು ತುಂಬಾ ಜನರಿಗೆ ಸಹಾಯ ಮಾಡುತ್ತೀರಿ. ನಿಮ್ಮ ಸಮಸ್ಯೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ನಿಮ್ಮ ಸೇವೆಗೆ ಬಂದರೆ, ನಿಮ್ಮ ಹೆಸರಿನಲ್ಲಿ ನನ್ನ ಒಂದು ಮೂತ್ರಪಿಂಡವನ್ನು ದಾನ ಮಾಡುತ್ತೇನೆ’ ಎಂದು ಹೇಳಿದರು.

ರಾಜ್ ಅವರ ಮಾತುಗಳನ್ನು ಕೇಳಿ ಶಿಲ್ಪಾ ಕೂಡ ಆಶ್ಚರ್ಯಚಕಿತರಾದರು. ಆದರೆ ಪ್ರೇಮಾನಂದ ಮಹಾರಾಜ್ ಅವರ ವಿನಂತಿಯನ್ನು ತಿರಸ್ಕರಿಸಿದರು. ‘ನೀವು ಆರೋಗ್ಯವಾಗಿದ್ದರೆ ನನಗೆ ಸಾಕು. ದೇವರು ಕರೆಯುವವರೆಗೂ, ಈ ಮೂತ್ರಪಿಂಡವು ನನಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಲು ಸಾಧ್ಯವಿಲ್ಲ. ದೇವರು ಕರೆಯುವಾಗ, ಎಲ್ಲರೂ ಹೋಗಬೇಕು. ಆದರೆ ನಾನು ನಿಮ್ಮ ದಯೆಯನ್ನು ಸ್ವೀಕರಿಸುತ್ತೇನೆ’ ಎಂದು ಹೇಳಿದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ದರ್ಶನ ಮತ್ತು ಆಶೀರ್ವಾದಕ್ಕಾಗಿ ನಿಯಮಿತವಾಗಿ ವೃಂದಾವನಕ್ಕೆ ಭೇಟಿ ನೀಡುತ್ತಾರೆ.

ಇದನ್ನೂ ಓದಿ
ಫ್ಲಾಪ್ ಆದರೂ ಭಾರೀ ಗಳಿಕೆ ಮಾಡಿದ ‘ವಾರ್ 2’; ಕೈ ಕೊಟ್ಟ ಹಿಂದಿ ಮಂದಿ
ರಜನಿ ಅಬ್ಬರಕ್ಕೆ ಬಾಕ್ಸ್ ಆಫೀಸ್ ಉಡೀಸ್; ‘ಕೂಲಿ’ ಮೊದಲ ದಿನದ ಗಳಿಕೆ ಎಷ್ಟು?
ಗೌತಮ್ ಕೈಯಲ್ಲಿ ತಾಯಿಯ ಹಿಸ್ಟರಿ; ದುರ್ಗಾಗೆ ಬಂತು ಅಕ್ಕನ ನೆನಪು
ಶ್ವಾನಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ ಹೇಳೋದೇನು?

ಇದನ್ನೂ ಓದಿ: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂಪಾಯಿ ವಂಚನೆ ಆರೋಪ

ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಒಬ್ಬ ದೊಡ್ಡ ಉದ್ಯಮಿ ಮತ್ತು ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಆದರೆ ಅವರು ಅಶ್ಲೀಲ ಪ್ರಕರಣದಲ್ಲಿ ಜೈಲಿನಲ್ಲಿ ಸಾಕಷ್ಟು ಸಮಯ ಕಳೆಯಬೇಕಾಯಿತು. ಪ್ರಸ್ತುತ, ಉದ್ಯಮಿಯೊಬ್ಬರು ಶಿಲ್ಪಾ ಮತ್ತು ರಾಜ್ ತಮಗೆ 60 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಅವರು ಇಲ್ಲಿಗೆ ಆಗಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:01 am, Fri, 15 August 25