‘ರಾಜ ಶಿವಾಜಿ’ ಚಿತ್ರಕ್ಕೆ ಕೈ ಕೊಟ್ಟ ಹಿಂದಿ ಭಾಷಿಕರು; ಅದೃಷ್ಟ ಬದಲಿಸಿದ್ದು ಯಾರು?

‘ರಾಜ ಶಿವಾಜಿ’ ಸಿನಿಮಾ ಮೇ 1ರಂದು ರಿಲೀಸ್ ಆಗಿದ್ದು, ಮೊದಲ ದಿನ 11.35 ಕೋಟಿ ಗಳಿಸಿದೆ. ರಿತೇಶ್ ದೇಶ್‌ಮುಖ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮರಾಠಿ ಭಾಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಒಳ್ಳೆಯ ಕಲೆಕ್ಷನ್ ಆಗಿದೆ. ಜಿಯೋ ಸ್ಟುಡಿಯೋಸ್ ಮತ್ತು ಮುಂಬೈ ಫಿಲ್ಮ್ ಕಂಪನಿ ಜಂಟಿಯಾಗಿ ನಿರ್ಮಿಸಿದೆ.

‘ರಾಜ ಶಿವಾಜಿ’ ಚಿತ್ರಕ್ಕೆ ಕೈ ಕೊಟ್ಟ ಹಿಂದಿ ಭಾಷಿಕರು; ಅದೃಷ್ಟ ಬದಲಿಸಿದ್ದು ಯಾರು?
ರಾಜಾ ಶಿವಾಜಿ

Updated on: May 02, 2026 | 7:40 AM

ಛತ್ರಪತಿ ಶಿವಾಜಿ ಮಹಾರಾಜರ ಜೀವನ ಆಧಾರಿತ ‘ರಾಜ ಶಿವಾಜಿ’  (Raja Shivaji) ಸಿನಿಮಾ ಮೇ 1ರಂದು ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ನಟ ರಿತೇಶ್ ದೇಶ್‌ಮುಖ್ ಎರಡನೇ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಈ ಸಿನಿಮಾದಲ್ಲಿ ರಿತೇಶ್ ಅವರೇ ರಾಜ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೊದಲ ದಿನ ಎರಡಂಕಿ ಕಲೆಕ್ಷನ್ ಮಾಡಿದೆ. ಆದರೆ, ಹಿಂದಿ ಭಾಷೆಯಿಂದ ಸಿನಿಮಾಗೆ ತುಂಬಾನೇ ಕಡಿಮೆ ಕಲೆಕ್ಷನ್ ಆಗಿದೆ.

‘ರಾಜ ಶಿವಾಜಿ’ಚಿತ್ರ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಶಿವಾಜಿ ಮಹಾರಾಜರ ಬಾಲ್ಯದ ಸಾಹಸಗಳು ಮತ್ತು ಸ್ವರಾಜ್ಯ ಸ್ಥಾಪನೆಯ ಹೋರಾಟವನ್ನು ಅದ್ಧೂರಿಯಾಗಿ ತೆರೆಯ ಮೇಲೆ ತರುವ ಪ್ರಯತ್ನ ನಡೆದಿದೆ. ಈ ಸಿನಿಮಾ ಮೊದಲ ದಿನ 11.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ, ಚಿತ್ರಕ್ಕೆ ಹಿಂದಿ ಭಾಷೆಯಿಂದ ಸಿಕ್ಕಿದ್ದು ಕೇವಲ 3.35 ಕೋಟಿ ರೂಪಾಯಿ.

ಹಾಗಾದರೆ, ‘ರಾಜ ಶಿವಾಜಿ’ ಸಿನಿಮಾನ ಕೈ ಹಿಡಿದಿದ್ದು ಯಾರು? ಮರಾಠಿ ಭಾಷಿಕರು. ಶಿವಾಜಿ ಮರಾಠ ರಾಜ. ಮರಾಠ ಸಾಮ್ರಾಜ್ಯ ಸ್ಥಾಪಿಸಿದವರು ಶಿವಾಜಿ. ಹೀಗಾಗಿ, ಮರಾಠಿ ಭಾಷೆಯಲ್ಲಿ ಸಿನಿಮಾ 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆ ಭಾಷೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಿದ್ದಾರೆ. ಇಂದು ಹಾಗೂ ನಾಳೆ ಚಿತ್ರಕ್ಕೆ ತುಂಬಾನೇ ಮುಖ್ಯವಾಗಿದೆ. ಅಂದು ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ರಾಜ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅಬ್ಬರ: ಜೀವಾ ಮಹಾಲಾ ಪಾತ್ರ ಕಂಡು ಫ್ಯಾನ್ಸ್ ಫಿದಾ

ಜಿಯೋ ಸ್ಟುಡಿಯೋಸ್ ಮತ್ತು ಮುಂಬೈ ಫಿಲ್ಮ್ ಕಂಪನಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ. ಈ ಸಿನಿಮಾ 2024ರಲ್ಲಿ ಘೋಷಣೆ ಮಾಡಲಾಗಿತ್ತು. ಕೇವಲ ಎರಡು ವರ್ಷಗಳಲ್ಲಿ ಸಿನಿಮಾನ ತೆರೆಮೇಲೆ ತರಲಾಗಿದೆ. ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ರಿತೇಷ್ ಪತ್ನಿ ಜೆನಿಲಿಯಾ ಮೊದಲಾದವರು ನಟಿಸಿದ್ದಾರೆ. ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:39 am, Sat, 2 May 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us