AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raju Srivastava: ರಾಜು ಶ್ರೀವಾಸ್ತವ ಸಾವಿನ ಬಗ್ಗೆ ಕೆಟ್ಟ ಕಮೆಂಟ್​ ಮಾಡಿದ ಇನ್ನೋರ್ವ ಕಾಮಿಡಿಯನ್​

Raju Srivastava Death | Rohan Joshi: ರಾಜು ಶ್ರೀವಾಸ್ತವ ನಿಧನದ ಬಗ್ಗೆ ರೋಹನ್​ ಜೋಶಿ ಕಟುವಾಗಿ ಕಮೆಂಟ್​ ಮಾಡಿದ್ದನ್ನು ನೆಟ್ಟಿಗರು ವಿರೋಧಿಸಿದ್ದಾರೆ. ಭಾರಿ ವಿರೋಧ ವ್ಯಕ್ತವಾದ ಬಳಿಕ ಅವರು ತಮ್ಮ ಕಮೆಂಟ್​ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Raju Srivastava: ರಾಜು ಶ್ರೀವಾಸ್ತವ ಸಾವಿನ ಬಗ್ಗೆ ಕೆಟ್ಟ ಕಮೆಂಟ್​ ಮಾಡಿದ ಇನ್ನೋರ್ವ ಕಾಮಿಡಿಯನ್​
ರಾಜು ಶ್ರೀವಾಸ್ತವ ಶೋ, ರೋಹನ್ ಜೋಶಿ
TV9 Web
| Edited By: |

Updated on:Sep 22, 2022 | 7:38 AM

Share

ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ (Raju Srivastava) ಅವರು ಬುಧವಾರ (ಸೆ.21) ಇಹಲೋಕ ತ್ಯಜಿಸಿದರು. ಅವರ ನಿಧನದಿಂದಾಗಿ ಅಭಿಮಾನಿಗಳಿಗೆ, ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ತೀವ್ರ ನೋವಾಗಿದೆ. ಸಾವಿನ (Raju Srivastava Death) ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರೂ ಕೂಡ ಕೆಟ್ಟದಾಗಿ ಮಾತನಾಡುವುದಿಲ್ಲ. ಆದರೆ ಅದೇಕೋ ಗೊತ್ತಿಲ್ಲ ಕಾಮಿಡಿಯನ್​ ರೋಹನ್​ ಜೋಶಿ (Rohan Joshi) ಅವರು ರಾಜು ಶ್ರೀವಾಸ್ತವ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ. ತುಂಬ ಕೆಟ್ಟ ಪದಗಳನ್ನು ಬಳಸಿ ಅವರು ನಿಂದಿಸಿದ್ದಾರೆ. ಅವರ ಈ ವರ್ತನೆಗೆ ನೆಟ್ಟಿಗರು ಛಾಟಿ ಬೀಸಿದ್ದಾರೆ. ನಿಮಗೆ ಕನಿಷ್ಠ ಸೌಜನ್ಯವೂ ಇಲ್ಲವಲ್ಲ ಎಂದು ಜನರು ಕಿಡಿಕಾರಿದ್ದಾರೆ. ಬಳಿಕ ತಮ್ಮ ಕಮೆಂಟ್​ ಬಗ್ಗೆ ರೋಹನ್​ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಸ್ಟ್ಯಾಂಡಪ್​ ಕಾಮಿಡಿ ಲೋಕದಲ್ಲಿ ರಾಜು ಶ್ರೀವಾಸ್ತವ ಅವರು ತುಂಬ ಫೇಮಸ್​ ಆಗಿದ್ದರು. ಆದರೆ ಅವರು ಹೊಸ ಕಲಾವಿದರ ಬಗ್ಗೆ ಉತ್ತಮ ಭಾವನೆ ಹೊಂದಿರಲಿಲ್ಲ ಎಂಬುದು ರೋಹನ್​ ಜೋಶಿ ಅವರ ತಕರಾರು. ‘ಹೊಸ ಅಲೆಯ ಸ್ಟ್ಯಾಂಡಪ್​ ಕಾಮಿಡಿ ಬಗ್ಗೆ ಅವರಿಗೆ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಅವಹೇಳನ ಮಾಡುತ್ತಿದ್ದರು. ಅವರು ಕೆಲವು ಒಳ್ಳೆಯ ಜೋಕ್​ಗಳನ್ನು ಹೇಳಿರಬಹುದು. ಆದರೆ ಹಾಸ್ಯದ ಸ್ಪಿರಿಟ್​ ಏನೆಂಬುದು ಅವರಿಗೆ ಅರ್ಥ ಆಗಲಿಲ್ಲ. ಅವರು ತೊಲಗಲಿ’ ಎಂದು ರೋಹನ್​ ಜೋಶಿ ಕಮೆಂಟ್​ ಮಾಡಿದ್ದರು.

ಸಾವಿನ ಸಂದರ್ಭದಲ್ಲಿ ಈ ರೀತಿ ಕಟುವಾಗಿ ಕಮೆಂಟ್​ ಮಾಡಿದ್ದನ್ನು ನೆಟ್ಟಿಗರು ವಿರೋಧಿಸಿದ್ದಾರೆ. ಭಾರಿ ವಿರೋಧ ವ್ಯಕ್ತವಾದ ಬಳಿಕ ಆ ಕಮೆಂಟ್​ ಅನ್ನು ರೋಹನ್​ ಜೋಶಿ ಡಿಲಿಟ್​ ಮಾಡಿದ್ದಾರೆ. ‘ಒಂದು ನಿಮಿಷದ ಕೋಪದ ನಂತರ ಇದು ನನ್ನ ವೈಯಕ್ತಿಕ ಭಾವನೆಯ ದಿನ ಅಲ್ಲ ಎಂಬುದನ್ನು ತಿಳಿದುಕೊಂಡು ಕಮೆಂಟ್ ಡಿಲಿಟ್​ ಮಾಡಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ’ ಎಂದು ರೋಹನ್​ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ
Image
Raju Srivastava Death: ಎಲ್ಲರನ್ನೂ ನಗಿಸಿ, ಸಾವಿನಲ್ಲಿ ಕಣ್ಣೀರು ಹಾಕಿಸಿದ ರಾಜು ಶ್ರೀವಾಸ್ತವ ಹೆಜ್ಜೆ ಗುರುತುಗಳು ಇಲ್ಲಿವೆ
Image
Raju Srivastava Death: ಹಾಸ್ಯ ನಟ ರಾಜು ಶ್ರೀವಾಸ್ತವ​ ನಿಧನ; ಕಡೆಗೂ ಫಲಿಸಲಿಲ್ಲ ಅಭಿಮಾನಿಗಳ ಪ್ರಾರ್ಥನೆ
Image
ಹಾಸ್ಯ ನಟ ರಾಜು ಶ್ರೀವಾತ್ಸವ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ; ಪವಾಡ ನಡೆದರಷ್ಟೇ ಬಚಾವ್​?
Image
ಜಿಮ್ ಮಾಡುತ್ತಿದ್ದ ವೇಳೆ ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

ರಾಜು ಶ್ರೀವಾಸ್ತವ ನಿಧನಕ್ಕೆ ಕಾರಣ:

ಆಗಸ್ಟ್ 10ರಂದು ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ರಾಜುಗೆ ಹೃದಯಾಘಾತ ಆಯಿತು. ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಒಟ್ಟು 41 ದಿನಗಳ ಕಾಲ ರಾಜು ಶ್ರೀವಾಸ್ತವ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ದಾಖಲಾದ ತಕ್ಷಣವೇ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಕೆಲವು ದಿನಗಳ ಬಳಿಕ ಅವರ ಮಿದುಳು ನಿಷ್ಕ್ರಿಯವಾಗಿದೆ ಎಂಬುದು ತಿಳಿದುಬಂದಿತು. ಆ ಬಳಿಕ ಅಭಿಮಾನಿಗಳಲ್ಲಿ ಮತ್ತು ಕುಟುಂಬದವರಲ್ಲಿ ಚಿಂತೆ ಹೆಚ್ಚಿತ್ತು. ಕಡೆಗೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:38 am, Thu, 22 September 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ