ಹೀಗೂ ಸಂಬಂಧದಲ್ಲಿ ಇರ್ತಾರಾ? ತಮ್ಮ ಬಗ್ಗೆ ಶಾಕಿಂಗ್ ವಿಷಯ ರಿವೀಲ್ ಮಾಡಿದ ರಕುಲ್

ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮದುವೆ ಬಳಿಕ ಜಾಕಿ 'ಸಿಚ್ಯುವೇಶನ್‌ಶಿಪ್' ಹೇಳಿಕೆ ವೈರಲ್ ಆಗಿತ್ತು. ಕಮಿಟ್​​ಮೆಂಟ್ ಇಲ್ಲದ ಸಂಬಂಧ ಎಂಬ ಅರ್ಥದಲ್ಲಿ ಇದನ್ನು ವ್ಯಾಖ್ಯಾನಿಸಲಾಗಿತ್ತು. ಆದರೆ, ರಕುಲ್ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ, ಸಂದರ್ಭ ಮುಖ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಸಂತೋಷವಾಗಿದ್ದು, ಪರಸ್ಪರ ಬದ್ಧತೆಯನ್ನು ಹೊಂದಿದ್ದಾರೆಂದು ವಿವರಿಸಿದ್ದಾರೆ.

ಹೀಗೂ ಸಂಬಂಧದಲ್ಲಿ ಇರ್ತಾರಾ? ತಮ್ಮ ಬಗ್ಗೆ ಶಾಕಿಂಗ್ ವಿಷಯ ರಿವೀಲ್ ಮಾಡಿದ ರಕುಲ್
ರಕುಲ್-ಜಾಕಿ

Updated on: Apr 25, 2026 | 7:21 AM

ರಕುಲ್ ಪ್ರೀತ್ ಸಿಂಗ್ (Rakul) ಹಾಗೂ ಜಾಕಿ ಭಗ್ನಾನಿ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರದ್ದು ಲವ್ ಮ್ಯಾರೇಜ್. ರಕುಲ್ ಅವರು ನಟಿ. ಜಾಕಿ ಬಾಲಿವುಡ್​​ನ ಖ್ಯಾತ ನಿರ್ಮಾಪಕ. ಈಗ ಅವರು ಸಂದರ್ಶನ ಒಂದರಲ್ಲಿ ಮಾತನಾಡಿರುವ ವಿಷಯ ಚರ್ಚೆಗೆ ಗ್ರಾಸವಾಗಿದೆ. ‘ನಾವು ಸಿಚ್ಯುವೇಶನ್​ಶಿಪ್​ನಲ್ಲಿ ಇದ್ದೇವೆ’ ಎಂದಿದ್ದಾರೆ. ಸಿಚ್ಯುವೇಶನ್​​ಶಿಪ್ ಎಂದರೆ ಯಾವುದೇ ಕಮಿಟ್​​ಮೆಂಟ್ ಇಲ್ಲದೆ ಸಂಬಂಧವನ್ನು ಮುಂದುವರಿಸುವುದು. ಅವರ ಹೇಳಿಕೆಯನ್ನು ನಾನಾ ರೀತಿಯಲ್ಲಿ ಅರ್ಥೈಸಲಾಗುತ್ತಿದೆ.

ರಕುಲ್ ಹಾಗೂ ಜಾಕಿ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ತಮ್ಮ ವಿವಾಹದ ಬಗ್ಗೆ ಜಾಕಿ ಒಂದು ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ. ‘ರಕುಲ್ ಮತ್ತು ನಾನು ವಿವಾಹಿತರು. ಆದರೆ ನಾವು ಸಿಚ್ಯುವೇಶನ್​​ಶಿಪ್​ನಲ್ಲಿದ್ದೇವೆ. ಆದಾಗ್ಯೂ ನಮ್ಮ ಮಧ್ಯೆ ಬದ್ಧತೆ ಇದೆ. ಏಕೆಂದರೆ ನಾವು ಮದುವೆ ಆಗಿದ್ದೇವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ನಾನು ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಬಲ್ಲೆ’ ಎಂದು ಜಾಕಿ ಹೇಳಿದ್ದಾರೆ.

‘ನಮಗೆ ಈಗ 20-21 ವರ್ಷ ಅಲ್ಲ ಎಂದು ಒಬ್ಬರಿಗೊಬ್ಬರು ಹೇಳಿಕೊಂಡೆವು. ನಾವಿಬ್ಬರೂ ಅನೇಕ ಏರಿಳಿತಗಳನ್ನು ಕಂಡಿದ್ದೇವೆ. ನಾನು ಯಾವಾಗಲೂ ಖುಷಿಯಿಂದ ಇರುವ ವ್ಯಕ್ತಿ. ನಾನು ಖುಷಿಯಾಗಿರಲು ಇನ್ಯಾರೋ ಬೇಕಿಲ್ಲ. ಒಂದೊಮ್ಮೆ ನಾನು ಖಿನ್ನತೆಗೆ ಒಳಗಾಗಿದ್ದೆ ಎಂದರೆ ಯಾರೇ ಬಂದರೂ ನಾನು ಖಿನ್ನತೆಯಿಂದಲೇ ಇರುತ್ತೇನೆ. ರಕುಲ್ ಸದಾ ಖುಷಿಯಿಂದ ಇರುವ ಹುಡುಗಿ. ನಾನು ಕೂಡ. ಹೀಗಾಗಿ ಇಬ್ಬರೂ ಸೇರಿ ಮತ್ತಷ್ಟು ಖುಷಿಯಾಗಿದ್ದೇವೆ’ ಎಂದರು ಜಾಕಿ.

ಜಾಕಿ ಮಾತನಾಡಿದ ವಿಷಯದಲ್ಲಿ ಸಿಚ್ಯುವೇಶನ್​ಶಿಪ್ ವಿಷಯ ತುಂಬಾನೇ ಹೈಲೈಟ್ ಆಗಿದೆ. ಈ ವಿಷಯ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಇದುವೇ ಚರ್ಚೆ ಆಗಿದೆ. ಇದಕ್ಕೆ ರಕುಲ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರಕುಲ್ ಪ್ರೀತ್ ಮಾವನಿಂದ ಐಷಾರಾಮಿ ಪ್ರಾಪರ್ಟಿ ಖರೀದಿಸಿದ ಖ್ಯಾತ ಕ್ರಿಕೆಟರ್

‘ನಾವು ತುಂಬಾನೇ ಮಾತನಾಡಿದ್ದೇವೆ. ಆದರೆ, ಒಂದೇ ಒಂದು ಸಾಲನ್ನು ಹೇಗೆ ಹೆಡ್​​ಲೈನ್ ಮಾಡಲಾಗುತ್ತದೆ ಎಂಬುದನ್ನು ನೋಡಿ ನಗು ಬಂತು. ಸಂದರ್ಭ ಅನ್ನೋದು ಮುಖ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ. ಉಳಿದ ಸಂಬಂಧಗಳಂತೆ ನಮ್ಮ ಸಂಬಂಧದಲ್ಲಿ ಹೆಚ್ಚು ಕಮಿಟ್​​ಮೆಂಟ್ ಇಲ್ಲ ಎಂದು ಹೇಳುವ ಪ್ರಯತ್ನವನ್ನು ಅವರು ಮಾಡಿದ್ದರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us