Rakul Preet Singh: ರಕುಲ್ ಪ್ರೀತ್ ಸಿಂಗ್ ವಿವಾಹ ಆಮಂತ್ರಣ ಪತ್ರ ವೈರಲ್; ಮದುವೆ ಯಾವಾಗ?  

|

Updated on: Feb 12, 2024 | 2:38 PM

ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ. ಇವರು ಪ್ರೀತಿ ವಿಚಾರವನ್ನು ಗುಟ್ಟಾಗಿಯೇ ಇಡಲಾಗಿದೆ. ಈ ವರೆಗೆ ಮದುವೆ ಬಗ್ಗೆ ರಕುಲ್ ಬಾಯ್ಬಿಟ್ಟಿಲ್ಲ. ಇತ್ತೀಚಿನ ದಿನಗಳಲ್ಲಿ ಅವರ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಈಗ ಅದು ನಿಜವಾಗಿದೆ.

Rakul Preet Singh: ರಕುಲ್ ಪ್ರೀತ್ ಸಿಂಗ್ ವಿವಾಹ ಆಮಂತ್ರಣ ಪತ್ರ ವೈರಲ್; ಮದುವೆ ಯಾವಾಗ?   
ಜಾಕಿ-ರಕುಲ್
Follow us on

ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಈ ವರ್ಷ ಹೊಸ ಜೀವನ ಆರಂಭಿಸುತ್ತಿದ್ದಾರೆ. ಫೆಬ್ರವರಿ 21ರಂದು ಅವರ ವಿವಾಹ ನೆರವೇರುತ್ತಿದೆ. ಬಾಲಿವುಡ್ ನಟ ಹಾಗೂ ಖ್ಯಾತ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಅವರ ಮದುವೆ ನಡೆಯುತ್ತಿದೆ. ಹೀಗಿರುವಾಗಲೇ ಅವರ ವಿವಾಹ ಆಮಂತ್ರಣಪತ್ರಿಕೆಯ ಫೋಟೋ ವೈರಲ್ ಆಗಿದೆ. ಸಿಂಪಲ್ ಆಗಿರೋ ಈ ಇನ್ವಿಟೇಷನ್ ಎಲ್ಲರ ಗಮನ ಸೆಳೆಯುತ್ತಿದೆ.  ಅಭಿಮಾನಿಗಳ ಪೇಜ್​ಗಳಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ.

ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ. ಇವರು ಪ್ರೀತಿ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಈ ವರೆಗೆ ಮದುವೆ ಬಗ್ಗೆ ರಕುಲ್ ಬಾಯ್ಬಿಟ್ಟಿಲ್ಲ. ಇತ್ತೀಚಿನ ದಿನಗಳಲ್ಲಿ ಅವರ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಈಗ ಅದು ನಿಜವಾಗಿದೆ. ರಕುಲ್ ಫೆಬ್ರವರಿ 21ರಂದು ವಿವಾಹ ಆಗುತ್ತಿದ್ದಾರೆ. ಅವರ ವಿವಾಹ ಕಾರ್ಯ ಗೋವಾದಲ್ಲಿ ನಡೆಯುತ್ತಿದೆ. ಈ ಮದುವೆಯಲ್ಲಿ ಆಪ್ತರು ಮಾತ್ರ ಭಾಗಿ ಆಗಲಿದ್ದಾರೆ. ಮುಂಬೈನಲ್ಲಿ ಅದ್ದೂರಿ ರಿಸೆಪ್ಷನ್ ನಡೆಸುವ ಆಲೋಚನೆ ಇವರಿಗೆ ಇದೆ.

ರಕುಲ್ ವಿವಾಹ ಆಮಂತ್ರಣ ಪತ್ರ

ರಕುಲ್ ಪ್ರೀತ್ ಸಿಂಗ್ ಅವರನ್ನು ಮದುವೆಯಾಗುತ್ತಿರುವ ಜಾಕಿ ಭಗ್ನಾನಿ ಆಗರ್ಭ ಶ್ರೀಮಂತ. ಅವರು ನಟ ಹಾಗೂ ನಿರ್ಮಾಪಕರು. 2009ರಲ್ಲಿ ನಟನಾಗಿ ಬಣ್ಣದ ಲೋಕಕ್ಕೆ ಬಂದರು. 2018ರವರೆಗೆ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ನಟನಾಗಿ ಅವರು ಗೆಲ್ಲಲಿಲ್ಲ. 2016ರಲ್ಲಿ ‘ಸರಬ್ಜಿತ್’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣವನ್ನು ಜಾಕಿ ಭಗ್ನಾನಿ ಪ್ರಾರಂಭಿಸಿದರು. ಈವರೆಗೆ 10 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೆಲವು ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ರಕುಲ್ ಪ್ರೀತ್ ಸಿಂಗ್, ಗೆಳತಿಯರೊಟ್ಟಿಗೆ ಬ್ಯಾಚುಲರ್ ಪಾರ್ಟಿ

ರಕುಲ್ ಪ್ರೀತ್ ಸಿಂಗ್ ಕನ್ನಡದ ‘ಗಿಲ್ಲಿ’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಬಂದರು. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾ ರಂಗದಲ್ಲಿ ಅವರು ಬ್ಯುಸಿಯಾಗಿದ್ದಾರೆ. ರಕುಲ್ ಹಾಗೂ ಶಿವಕಾರ್ತಿಕೇಯ ನಟನೆಯ ‘ಅಯಲಾನ್’ ಚಿತ್ರ ಇತ್ತೀಚೆಗೆ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿದೆ. ಭೂಮಿಗೆ ಬರೋ ಅನ್ಯಗ್ರಹ ಜೀವಿಗಳ ಬಗ್ಗೆ ಚಿತ್ರದ ಕಥೆ ಇದೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರದಲ್ಲೂ ರಕುಲ್ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:21 pm, Mon, 12 February 24