ಪೂನಂ ಪಾಂಡೆಗೆ ಹೆಚ್ಚಿದ ಸಂಕಷ್ಟ, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

Poonam Pandey: ಬಾಲಿವುಡ್ ನಟಿ ಪೂನಂ ಪಾಂಡೆ ತನ್ನ ಸಾವಿನ ಸುಳ್ಳು ಸುದ್ದಿ ಹರಿಬಿಟ್ಟ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಪೂನಂ ಪಾಂಡೆ ಹಾಗೂ ಅವರ ಪತಿಯ ವಿರುದ್ಧ ಕಾನ್ಪುರದಲ್ಲಿ ದೂರು ದಾಖಲಾಗಿದ್ದು 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ದೂರುದಾರ ಹೇಳಿದ್ದಾರೆ.

ಪೂನಂ ಪಾಂಡೆಗೆ ಹೆಚ್ಚಿದ ಸಂಕಷ್ಟ, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ
Follow us
ಮಂಜುನಾಥ ಸಿ.
|

Updated on: Feb 11, 2024 | 10:37 PM

ನಟಿ, ಮಾಡೆಲ್ ಪೂನಂ ಪಾಂಡೆ (Poonam Pandey) ಒಂದೇ ದಿನಕ್ಕೆ ಕೋಟ್ಯಂತರ ಜನರನ್ನು ಫೂಲ್ ಮಾಡಿದ್ದಾರೆ. ಪೂನಂ ಪಾಂಡೆ, ತಮ್ಮ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡುವಂತೆ ಮಾಡಿದ್ದರು. ಬಳಿಕ ಕರ್ವಿಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಾನು ಹೀಗೆ ಮಾಡಿದೆನೆಂದು ಕತೆ ಹೇಳಿದರು. ಅದಾದ ಬಳಿಕ ಹಲವರು ಪೂನಂ ಪಾಂಡೆ ವಿರುದ್ಧ ಟೀಕೆ, ನಿಂದನೆಗಳನ್ನು ಮಾಡಿದರು. ಕೆಲವರು ದೂರು ಸಹ ಸಲ್ಲಿಸಿದ್ದಾರೆ. ಇದೀಗ ಕಾನ್ಪುರದಲ್ಲಿ ಪೋನಂ ಪಾಂಡೆ ಹಾಗೂ ಆಕೆಯ ಪತಿ ಸ್ಯಾಮ್ ಬಾಂಬೆ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಲು ಯೋಜಿಸಲಾಗಿದೆ.

ತನ್ನದೇ ಸಾವಿನ ಸುಳ್ಳು ಸುದ್ದಿಯನ್ನು ಹಬ್ಬಿಸಿ ಆತಂಕ ಉಂಟು ಮಾಡಿದ್ದ ಪೂನಂ ಪಾಂಡೆ ಹಾಗೂ ಅದಕ್ಕೆ ಸಹಾಯ ಮಾಡಿದ ಪತಿ ಸ್ಯಾಮ್ ಬಾಂಬೆ ವಿರುದ್ಧ ಫೈಜನ್ ಅನ್ಸಾರಿ ಎಂಬುವರು ಕಾನ್ಪುರದಲ್ಲಿ ದೂರು ದಾಖಲಿಸಿದ್ದು, ಪಬ್ಲಿಸಿಟಿ ಸ್ಟಂಟ್​ಗಾಗಿ ಜನರಲ್ಲಿ ಆತಂಕ ಮೂಡಿಸಿದ, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ ಪೂನಂ ಪಾಂಡೆ ವಿರುದ್ಧ ಹಾಗೂ ಆಕೆಯ ಪತಿ ಸ್ಯಾಮ್ ಬಾಂಬೆ ವಿರುದ್ಧ 100 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ದೂರಿನಲ್ಲಿ ಹೇಳಿದ್ದಾನೆ. ಅನ್ಸಾರಿಯ ದೂರು ಆಧರಿಸಿ ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ವಿರುದ್ಧ ಎಫ್​ಐಆರ್ ಸಹ ದಾಖಲಾಗಿದೆ.

ಇದನ್ನೂ ಓದಿ: Poonam Pandey: ಸಾವಿನ ಸುದ್ದಿ ಹಬ್ಬಿಸೋ ಪ್ಲ್ಯಾನ್ ಪೂನಂ ಪಾಂಡೆಯದ್ದಾಗಿರಲಿಲ್ಲ; ಇದರ ಹಿಂದಿರೋರು ಯಾರು?

ಪೂನಂ ಪಾಂಡೆ ವಿರುದ್ಧ ಬೇರೆ-ಬೇರೆ ನಗರಗಳಲ್ಲಿ ದೂರುಗಳು ದಾಖಲಾಗಿವೆ. ಪೂನಂ ಪಾಂಡೆ ನಿಧನದ ಸುದ್ದಿ ಹೊರಬಿದ್ದಾಗ ಸಂತಾಪ ವ್ಯಕ್ತಪಡಿಸಿದ್ದ ಕೆಲ ಸೆಲೆಬ್ರಿಟಿಗಳು ಅದಾದ ಬಳಿಕ ಪೂನಂ ವಿರುದ್ಧ ತೀವ್ರ ವಾಗ್ದಾಳಿ ಸಹ ಮಾಡಿದ್ದಾರೆ. ನೆಟ್ಟಿಗರಂತೂ ಪೂನಂ ಪಾಂಡೆಯನ್ನು ಸಖತ್ ಟ್ರೋಲ್ ಮಾಡಿದ್ದಾರೆ. ಆದರೆ ಇದಕ್ಕೆಲ್ಲ ತಲೆ ಕಡೆಸಿಕೊಳ್ಳದೆ ಪೂನಂ ಪಾಂಡೆ ತಾನು ಮಾತ್ರ ಹಾಯಾಗಿದ್ದಾರೆ.

ಆದರೆ ಪೂನಂ ಪಾಂಡೆ ಜೊತೆ ಪಿಆರ್ ಕೆಲಸ ಮಾಡಿದ್ದ ಸಂಸ್ಥೆಗೆ ದೊಡ್ಡ ಸಮಸ್ಯೆಯೊಂದು ಎದುರಾಗಿದ್ದು, ಪೂನಂ ಪಾಂಡೆ ಜೊತೆ ಕೆಲಸ ಮಾಡಿದ್ದ, ಸುಳ್ಳು ಸುದ್ದಿ ಐಡಿಯಾದಲ್ಲಿ ಪಾಲ್ಗೊಂಡಿದ್ದ ಪಿಆರ್ ಸಂಸ್ಥೆಯಿಂದ ಕೆಲ ಸಿನಿಮಾ ಸೆಲೆಬ್ರಿಟಿಗಳು ದೂರ ಉಳಿದಿದ್ದಾರೆ. ಪೂನಂ ಪಾಂಡೆ ಜೊತೆಗೆ ಕೆಲಸ ಮಾಡುವ ಪಿಆರ್ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಿಂದ ಎಂಎಸ್ ಧೋನಿ ಇದೇ ಕಾರಣಕ್ಕೆ ಹೊರಗೆ ಉಳಿದಿದ್ದಾರೆ. ಇನ್ನೂ ಕೆಲವು ಸೆಲೆಬ್ರಿಟಿಗಳು ಪಿಆರ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ