ದಕ್ಷಿಣ ಭಾರತಕ್ಕೆ ಬಂದು ದುಬಾರಿ ಸಂಭಾವನೆ ಕೇಳಿದ ಜಾನ್ವಿ ಕಪೂರ್​; ಈ ನಟಿಯ ಸಂಬಳ ಎಷ್ಟು?

ಕಡಿಮೆ ಸಂಭಾವನೆ ಪಡೆದುಕೊಂಡು ಜಾನ್ವಿ ಕಪೂರ್​ ಅವರು ಹಿಂದಿ ಸಿನಿಮಾಗಳನ್ನು ಮಾಡುತ್ತಾರೆ. ಆದರೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ಅವರು ಭರ್ಜರಿ ಸಂಭಾವನೆ ಕೇಳುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶಗಳು ಕಡಿಮೆ ಆದರೂ ಅಚ್ಚರಿ ಏನಿಲ್ಲ. ಆದರೆ, ಸದ್ಯಕ್ಕಂತೂ ಅವರು ಬಹುಬೇಡಿಕೆಯ ಹೀರೋಯಿನ್​ ಆಗಿದ್ದಾರೆ.

ದಕ್ಷಿಣ ಭಾರತಕ್ಕೆ ಬಂದು ದುಬಾರಿ ಸಂಭಾವನೆ ಕೇಳಿದ ಜಾನ್ವಿ ಕಪೂರ್​; ಈ ನಟಿಯ ಸಂಬಳ ಎಷ್ಟು?
ಜಾನ್ವಿ ಕಪೂರ್​
Follow us
ಮದನ್​ ಕುಮಾರ್​
|

Updated on: Feb 11, 2024 | 3:18 PM

ನಟಿ ಜಾನ್ವಿ ಕಪೂರ್​ (Janhvi Kapoor) ಅವರು ಕೆಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ನಿರೀಕ್ಷಿತ ಪ್ರಮಾಣದ ಯಶಸ್ಸು ಇನ್ನೂ ಸಿಕ್ಕಿಲ್ಲ. ಆದರೂ ಅವಕಾಶಗಳಿಗೆ ಏನೂ ಬರಗಾಲ ಇಲ್ಲ. ಈಗಾಗಲೇ ಅವರು ಸೌತ್​ ಇಂಡಿಯನ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ (Devara) ಸಿನಿಮಾಗೆ ಜಾನ್ವಿ ಕಪೂರ್​ ನಾಯಕಿ. ಆ ಸಿನಿಮಾಗೆ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಚ್ಚರಿ ಏನೆಂದರೆ, ‘ದೇವರ’ ಬಿಡುಗಡೆ ಆಗುವುದಕ್ಕೂ ಮುನ್ನವೇ ತೆಲುಗಿನಲ್ಲಿ ಅವರು ಒಪ್ಪಿಕೊಳ್ಳುವ ಹೊಸ ಸಿನಿಮಾಗಳಿಗೆ ಸಂಭಾವನೆ (Janhvi Kapoor Remuneration) ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

‘ದೇವರ’ ಸಿನಿಮಾಗೆ ಸೆಲೆಕ್ಟ್​ ಆದ ಬಳಿಕ ಜಾನ್ವಿ ಕಪೂರ್​ ಅವರು ರಾಮ್​ ಚರಣ್​ ನಟನೆಯ ಹೊಸ ಚಿತ್ರಕ್ಕೂ ನಾಯಕಿ ಆಗಿದ್ದಾರೆ. ಆ ಸಿನಿಮಾಗೆ ಅವರು 6 ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡುತ್ತಿದ್ದಾರಂತೆ. ಹಾಗಿದ್ದರೂ ಕೂಡ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಹಾಗಾಗಿ ಸಹಜವಾಗಿಯೇ ಅವರು ಸಂಭಾವನೆ ಏರಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಇನ್ಮುಂದೆ ಪ್ರತಿ ಸಿನಿಮಾಗೆ 10 ಕೋಟಿ ರೂಪಾಯಿ ಕೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಟಿಯ ಕಡೆಯಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ.

ಇದನ್ನೂ ಓದಿ: ‘ಹನುಮಾನ್​’ ಸಿನಿಮಾದ ಹೀರೋ ತೇಜ ಸಜ್ಜಾ ಸಂಭಾವನೆಯಲ್ಲಿ ಏರಿಕೆ

ಜಾನ್ವಿ ಕಪೂರ್​ ಅವರಿಗೆ ಬಹಳ ಜನಪ್ರಿಯತೆ ಇದೆ. ಶ್ರೀದೇವಿಯ ಮಗಳು ಎಂಬ ಕಾರಣಕ್ಕೆ ಅವರನ್ನು ಅಭಿಮಾನಿಗಳು ಇಷ್ಟಪಡುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಜಾನ್ವಿ ಕಪೂರ್​ ತುಂಬ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ಅವರು ಗ್ಲಾಮರಸ್​ ಆದಂತಹ ಫೋಟೋಗಳನ್ನು ಪೋಸ್ಟ್​ ಮಾಡುತ್ತಾರೆ. ದಿನದಿಂದ ದಿನಕ್ಕೆ ಅವರ ಖ್ಯಾತಿ ಹೆಚ್ಚಾಗುತ್ತಿದೆ. ಖ್ಯಾತಿ ಹೆಚ್ಚಿದಂತೆಲ್ಲ ಸಂಭಾವನೆಯಲ್ಲೂ ಏರಿಕೆ ಆಗುತ್ತಿದೆ.

ಬಾಲಿವುಡ್​ನಲ್ಲಿ ಜಾನ್ವಿ ಕಪೂರ್​ ಅವರು ಇಷ್ಟು ಸಂಭಾವನೆ ಪಡೆಯುವುದಿಲ್ಲ. ಕಡಿಮೆ ಸಂಭಾವನೆ ಪಡೆದುಕೊಂಡು ಅವರು ಹಿಂದಿ ಸಿನಿಮಾ ಮಾಡುತ್ತಾರೆ. ಆದರೆ ದಕ್ಷಿಣ ಭಾರತಕ್ಕೆ ಬರುತ್ತಿದ್ದಂತೆಯೇ ಅವರು ಸಂಭಾವನೆ ಏರಿಕೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇದರಿಂದ ಅವಕಾಶಗಳು ಕಡಿಮೆ ಆದರೂ ಆಗಬಹುದು. ಸದ್ಯಕ್ಕಂತೂ ಅವರು ಬಹುಬೇಡಿಕೆಯ ನಟಿ ಆಗಿದ್ದಾರೆ. ನೆಪೋಟಿಸಂ ಆರೋಪ ಇದ್ದರೂ ಕೂಡ ಅವರು ಹೊಸ ಹೊಸ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಇನ್ಮೇಲೆ 4.5 ಕೋಟಿ ರೂ. ಸಂಭಾವನೆ ಕೇಳ್ತೀನಿ, ಯಾಕಂದ್ರೆ..’; ಹೊಸ ಕಾರಣ ನೀಡಿದ ರಶ್ಮಿಕಾ

ಜಾನ್ವಿ ಕಪೂರ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2018ರಲ್ಲಿ. ಮೊದಲ ಸಿನಿಮಾ ‘ಧಡಕ್​’ ಗಮನ ಸೆಳೆಯಿತು. ಆ ಬಳಿಕ ಅವರು ನಟಿಸಿದ ಬೇರೆ ಯಾವುದೇ ಸಿನಿಮಾ ಹೇಳಿಕೊಳ್ಳುವಂತೆ ಸದ್ದು ಮಾಡಲಿಲ್ಲ. ‘ಗುಂಜನ್​ ಸಕ್ಸೇನಾ: ದಿ ಕಾರ್ಗಿಲ್​ ಗರ್ಲ್​’, ‘ರೂಹಿ’, ‘ಮಿಲಿ’, ‘ಗುಡ್​ ಲಕ್​ ಚೆರ್ರಿ’, ‘ಬವಾಲ್​’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ದಕ್ಷಿಣದಲ್ಲಿ ಅವರು ಒಪ್ಪಿಕೊಂಡ ಮೊದಲ ಸಿನಿಮಾ ‘ದೇವರ’. ಈ ಸಿನಿಮಾದ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ