ಅಭಿಷೇಕ್​ನ ಐಶ್ವರ್ಯಾ​ ಮದುವೆ ಆದ ಬಗ್ಗೆ ಸಲ್ಲುಗೆ ಇತ್ತು ಖುಷಿ; ಇಲ್ಲಿದೆ ವಿಡಿಯೋ

ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವವರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ನಂತರ ಅದು ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಕಾಲ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ಸುತ್ತಾಡಿದರು. ಆದರೆ, ಸಲ್ಲುಗೆ ಸಂಬಂಧವನ್ನು ಸರಿಯಾಗಿ ಇಟ್ಟುಕೊಂಡು ಹೋಗಲು ಸಾಧ್ಯವೇ ಆಗಿಲ್ಲ. ಅವರ ಸಂಬಂಧ ಮುರಿದು ಬಿತ್ತು.

ಅಭಿಷೇಕ್​ನ ಐಶ್ವರ್ಯಾ​ ಮದುವೆ ಆದ ಬಗ್ಗೆ ಸಲ್ಲುಗೆ ಇತ್ತು ಖುಷಿ; ಇಲ್ಲಿದೆ ವಿಡಿಯೋ
ಅಭಿಷೇಕ್​ ಬಚ್ಚನ್​. ಐಶ್ವರ್ಯಾ ರೈ, ಸಲ್ಮಾನ್​ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on:Feb 11, 2024 | 9:50 AM

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ (Aishwarya Rai) ರಿಲೇಶನ್​ಶಿಪ್​ನಲ್ಲಿ ಇದ್ದರು. ನಂತರ ಇವರ ರಿಲೇಶನ್​ಶಿಪ್ ಕೊನೆ ಆಯಿತು. ಸಲ್ಮಾನ್ ಖಾನ್ (Salman Khan) ಇನ್ನೂ ಬ್ಯಾಚುಲರ್. ಐಶ್ವರ್ಯಾ ರೈಗೆ ಮದುವೆ ಆಗಿ ಮಗಳಿದ್ದಾಳೆ. ಇವರ ಸಂಬಂಧದ ಬಗ್ಗೆ ಹುಟ್ಟಿಕೊಂಡ ಚರ್ಚೆಗಳು ಕೊನೆಯಾಗುವಂಥದ್ದಲ್ಲ. ಇವರ ಸಂಬಂಧ ಕೊನೆಗೊಂಡು ಎರಡು ದಶಕಗಳೇ ಕಳೆದಿವೆ. ಆದಾಗ್ಯೂ ಇವರ ಕುರಿತ ಚರ್ಚೆ ಹಾಗೂ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಹರಿದಾಡುವುದು ನಿಂತಿಲ್ಲ. ಅಭಿಷೇಕ್ (Abhishek Bachchan) ಅವರನ್ನು ಐಶ್ವರ್ಯಾ ಮದುವೆ ಆದ ಬಳಿಕ ಸಲ್ಮಾನ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದರು. ಆ ವಿಡಿಯೋ ಈಗ ಅಭಿಮಾನಿಗಳ ವಲಯದಲ್ಲಿ ಮತ್ತೆ ವೈರಲ್ ಆಗುತ್ತಿದೆ.

ಲವ್ ಸ್ಟೋರಿ

ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಒಂದೇ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿರುವವರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿತ್ತು. ನಂತರ ಅದು ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಕಾಲ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ಸುತ್ತಾಡಿದರು. ಆದರೆ, ಸಲ್ಲುಗೆ ಸಂಬಂಧವನ್ನು ಸರಿಯಾಗಿ ಇಟ್ಟುಕೊಂಡು ಹೋಗಲು ಸಾಧ್ಯವೇ ಆಗಿಲ್ಲ. ಅವರ ಸಂಬಂಧ ಮುರಿದು ಬಿತ್ತು. ಇದಕ್ಕೆ ಕಾರಣವಾಗಿದ್ದು ಸಲ್ಮಾನ್ ಖಾನ್ ಅವರ ಕೋಪ ಎನ್ನಲಾಗಿದೆ. ಸಲ್ಮಾನ್ ಖಾನ್ ಅವರು ಐಶ್ವರ್ಯಾ ರೈ ವಿರುದ್ಧ ಸಿಟ್ಟಾಗಿದ್ದರು. ಮನೆಗೆ ತೆರಳಿ ಅವರು ವಸ್ತುಗಳನ್ನು ಹಾಳು ಮಾಡಿದ್ದರು. ಐಶ್ವರ್ಯಾ ಮೇಲೆ ಕೈ ಕೂಡ ಮಾಡಿದ್ದರು ಎನ್ನಲಾಗಿದೆ.

ಬ್ರೇಕಪ್ ಬಳಿಕ ಮಾತು

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ಬೇರೆ ಆಗಿ ಹಲವು ವರ್ಷಗಳ ಕಳೆದ ಬಳಿಕ ಸಲ್ಮಾನ್ ಖಾನ್ ಅವರು ಈ ಬಗ್ಗೆ ಮಾತನಾಡಿದ್ದರು. ‘ಐಶ್ವರ್ಯಾ ಅವರು ಅಭಿಷೇಕ್ ಅವರನ್ನು ಮದುವೆ ಆಗಿದ್ದಕ್ಕೆ ಖುಷಿ ಆಗಿದೆ. ಅಭಿಷೇಕ್ ಒಳ್ಳೆಯ ವ್ಯಕ್ತಿ. ಅವರು ಖುಷಿ ಆಗಿದ್ದಾರೆ. ಯಾವುದೇ ಎಕ್ಸ್ ಬಾಯ್​ಫ್ರೆಂಡ್ ಇದನ್ನೇ ನಿರೀಕ್ಷಿಸೋದು’ ಎಂದು ಅವರು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿದೆ.

ಬೆದರಿಕೆ ಹಾಕಿದ್ದ ಸಲ್ಲು?

ಸಲ್ಮಾನ್ ಖಾನ್ ಜೊತೆಗಿನ ಬ್ರೇಕಪ್ ಬಳಿಕ ಐಶ್ವರ್ಯಾ ರೈ ಅವರು ವಿವೇಕ್ ಒಬೆರಾಯ್ ಜೊತೆ ಸುತ್ತಾಟ ನಡೆಸಿದ್ದರು ಎನ್ನಲಾಗಿದೆ. ಇದು ಸಲ್ಲು ಕೋಪಕ್ಕೆ ಕಾರಣ ಆಗಿತ್ತು. ಸಲ್ಮಾನ್ ಖಾನ್ ಅವರು ವಿವೇಕ್ ವೃತ್ತಿ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದರು ಎನ್ನಲಾಗಿದೆ. ಬೇಡಿಕೆಯ ಹೀರೋ ಆಗಿದ್ದ ವಿವೇಕ್ ನಂತರ ಸಿನಿಮಾ ಆಫರ್ ಸಿಗದೆ ಪರದಾಡಬೇಕಾಯಿತು. ಇದಕ್ಕೆ ಸಲ್ಮಾನ್ ಖಾನ್ ಕಾರಣ ಎನ್ನಲಾಗಿದೆ.

ಸಲ್ಮಾನ್​ ಖಾನ್​ ಮನೆಗೆ ಪದೇಪದೇ ಭೇಟಿ ನೀಡುತ್ತಿರುವ ಅಟ್ಲಿ; ಏನು ಸಮಾಚಾರ?

ಸಿನಿಮಾ ವಿವರ

ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಅವರು ಒಟ್ಟಾಗಿ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ರಿಲೀಸ್ ಆದ ‘ಹಮ್ ದಿಲ್​ ದೇ ಚುಕೆ ಸನಮ್’ ಇವರು ನಟಿಸಿದ ಮೊದಲ ಸಿನಿಮಾ. ಇದಾದ ಬಳಿಕ ‘ದಾಯಿ ಅಕ್ಷರ್ ಪ್ರೇಮ್ ಕೆ’ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡರು. 2002ರಲ್ಲಿ ರಿಲೀಸ್ ಆದ ‘ಹಮ್ ತುಮಾರೆ ಹೈ ಸನಮ್’ ಚಿತ್ರದಲ್ಲಿ ನಟಿಸಿದರು. ನಂತರ ಸಲ್ಲು ಹಾಗೂ ಐಶ್ವರ್ಯಾ ಒಟ್ಟಾಗಿ ಸಿನಿಮಾ ಮಾಡಿಲ್ಲ. ಹಲವು ಪಾರ್ಟಿಗಳಲ್ಲಿ ಇವರು ಭೇಟಿ ಆಗುವ ಸಂದರ್ಭ ಬಂದಾಗಲೂ ಅದರಿಂದ ತಪ್ಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:49 am, Sun, 11 February 24

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!