ನಟಿ ಕಿಯಾರಾ ಬಿಕಿನಿ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ರಾಮ್ ಗೋಪಾಲ್ ವರ್ಮಾ

ಯಾವಾಗಲೂ ಫಿಲ್ಟರ್ ಇಲ್ಲದೇ ಮಾತನಾಡುವ ರಾಮ್ ಗೋಪಾಲ್ ವರ್ಮಾ ಅವರು ಈಗ ವಿವಾದ ಮಾಡಿಕೊಂಡಿದ್ದಾರೆ. ‘ವಾರ್ 2’ ಸಿನಿಮಾದ ಟೀಸರ್​ನಲ್ಲಿ ಕಿಯಾರಾ ಅಡ್ವಾಣಿ ಅವರ ಬಿಕಿನಿ ದೃಶ್ಯದ ಬಗ್ಗೆ ಆರ್​ಜಿವಿ ಅಸಭ್ಯವಾಗಿ ಕಮೆಂಟ್ ಮಾಡಿದ್ದಾರೆ. ಅವರ ಪೋಸ್ಟ್ ನೋಡಿದ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಳಿಕ ಆರ್​ಜಿವಿ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ನಟಿ ಕಿಯಾರಾ ಬಿಕಿನಿ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ರಾಮ್ ಗೋಪಾಲ್ ವರ್ಮಾ
Kiara Advani, Ram Gopal Varma

Updated on: May 21, 2025 | 5:08 PM

ನಟಿ ಕಿಯಾರಾ ಅಡ್ವಾಣಿ ಅವರು ‘ವಾರ್ 2’ (War 2) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್​ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಆಯಿತು. ಟೀಸರ್​ನಲ್ಲಿ ಇರುವ ಅನೇಕ ವಿಷಯಗಳ ಬಗ್ಗೆ ಸಿನಿಪ್ರಿಯರು ಮಾತನಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಿಯಾರಾ ಅಡ್ವಾಣಿ (Kiara Advani) ಅವರು ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದಾರೆ. ಅದರ ಬಗ್ಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ. ಅವರ ಪೋಸ್ಟ್​ ನೋಡಿ ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ರಾಮ್ ಗೋಪಾಲ್ ವರ್ಮಾ ಅವರು ಹಲವು ಸಂದರ್ಭಗಳಲ್ಲಿ ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ. ಆದರೆ ಎಲ್ಲದಕ್ಕೂ ಒಂದು ಮಿತಿ ಎಂಬುದು ಇರಬೇಕು. ಈ ಬಾರಿ ರಾಮ್ ಗೋಪಾಲ್ ವರ್ಮಾ ಅವರು ಅಸಭ್ಯವಾಗಿ ಟ್ವೀಟ್ ಮಾಡಿದ್ದಾರೆ. ಅದರ ಜೊತೆ ಕಿಯಾರಾ ಅಡ್ವಾಣಿಯ ಬಿಕಿನಿ ಗೆಟಪ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ.

‘ಆಕೆಯ ಹಿಂಬದಿಯನ್ನು (ಬ್ಯಾಕ್) ಪಡೆಯಲು ದೇಶಗಳ ಬದಲಿಗೆ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್ ನಡುವೆ ಯುದ್ಧ ನಡೆದರೆ ಇದು ಬ್ಯಾಕ್​ಬಸ್ಟರ್​ ಆಗುತ್ತದೆ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ಅದನ್ನು ನೋಡಿದ ಜನರು ತೀವ್ರ ಖಂಡನೆ ವ್ಯಕ್ತಪಡಿಸಿದರು. ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದರು.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

ಕಮೆಂಟ್​ಗಳ ಮೂಲಕ ರಾಮ್ ಗೋಪಾಲ್ ವರ್ಮಾ ಅವರನ್ನು ಜನರು ಟ್ರೋಲ್ ಮಾಡಿದ್ದಾರೆ. ‘ಈ ವ್ಯಕ್ತಿ ತನ್ನ ಬುದ್ಧಿ ಕಳೆದುಕೊಂಡು ಬಹಳ ವರ್ಷಗಳೇ ಆಗಿವೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಸಾರ್ವಜನಿಕವಾಗಿ ಇಷ್ಟ ಕೆಟ್ಟದಾಗಿ ಮಾತನಾಡುವ ವ್ಯಕ್ತಿ ಇನ್ನು ಖಾಸಗಿಯಾಗಿ ಎಷ್ಟು ಕೆಟ್ಟವನಿರಬಹುದು’ ಎಂಬ ಕಮೆಂಟ್ ಕೂಡ ಬಂದಿದೆ.

ಹೃತಿಕ್ ರೋಷನ್ ಎದುರು ಮಂಕಾದ ಜೂ. ಎನ್​ಟಿಆರ್​; ‘ವಾರ್ 2’ ಟೀಸರ್ ನೋಡಿ ಫ್ಯಾನ್ಸ್​ಗೆ ಬೇಸರ

‘ವಾರ್ 2’ ಸಿನಿಮಾದ ಟೀಸರ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನಿಯರ್​ ಎನ್​ಟಿಆರ್​ ಅವರ ಅಭಿಮಾನಿಗಳಿಗೆ ಈ ಟೀಸರ್ ಅಷ್ಟೇನೂ ಇಷ್ಟ ಆಗಿಲ್ಲ. ಅಲ್ಲದೇ ಕಿಯಾರಾ ಅಡ್ವಾಣಿ ಅವರ ಬಿಕಿನಿ ದೃಶ್ಯವನ್ನು ಎಐ ಮೂಲಕ ಸೃಷ್ಟಿ ಮಾಡಿರಬಹುದು ಎಂಬ ಅನುಮಾನ ಕೂಡ ಕೆಲವರಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.