ಸೀತಾ ಸ್ವಯಂವರಕ್ಕೆ ರಾವಣನ ಎಂಟ್ರಿ; ಭವ್ಯ ಸೆಟ್​ನಲ್ಲಿ ಯಶ್ ಶೂಟಿಂಗ್

ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ರಾವಣನ ಪಾತ್ರಧಾರಿ ಯಶ್ ಮುಂಬೈನ ಬೃಹತ್ 'ಮಿಥಿಲಾ ನಗರ' ಸೆಟ್‌ನಲ್ಲಿ ಸೀತಾ ಸ್ವಯಂವರದ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ರಾವಣನ ಮಾಸ್ ಎಂಟ್ರಿ ಹಾಗೂ ಶಿವಧನುಸ್ಸು ಎತ್ತುವ ಪ್ರಯತ್ನದ ದೃಶ್ಯಗಳು ಪ್ರಮುಖವಾಗಿವೆ. ಸಾಯಿ ಪಲ್ಲವಿ ಶೀಘ್ರದಲ್ಲೇ ಸೆಟ್ ಸೇರಲಿದ್ದು, ಚಿತ್ರದ ಮೊದಲ ಭಾಗ 2026ರ ದೀಪಾವಳಿಗೆ ತೆರೆ ಕಾಣಲಿದೆ.

ಸೀತಾ ಸ್ವಯಂವರಕ್ಕೆ ರಾವಣನ ಎಂಟ್ರಿ; ಭವ್ಯ ಸೆಟ್​ನಲ್ಲಿ ಯಶ್ ಶೂಟಿಂಗ್
ಯಶ್

Updated on: May 09, 2026 | 8:59 AM

ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ‘ರಾಮಾಯಣ’ ಮುಂಚೂಣಿಯಲ್ಲಿದೆ. ಈ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯ ಈ ಸಿನಿಮಾದ ಬಗ್ಗೆ ಒಂದು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ರಾವಣನ ಪಾತ್ರಧಾರಿ ಯಶ್ ಅವರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಅದ್ದೂರಿಯಾಗಿ ನಿರ್ಮಿಸಲಾಗಿರುವ ‘ಮಿಥಿಲಾ ನಗರ’ದ ಸೆಟ್‌ನಲ್ಲಿ ಯಶ್ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.

1. ರಾವಣನಾಗಿ ಯಶ್ ಅವರ ಮಾಸ್ ಎಂಟ್ರಿ ದೃಶ್ಯದ ಶೂಟಿಂಗ್

2. ಮಿಥಿಲಾ ಸಾಮ್ರಾಜ್ಯದ ಮರುಸೃಷ್ಟಿ ಮತ್ತು ಸೀತಾ ಸ್ವಯಂವರದ ಸೀನ್

3. 2026ರ ದೀಪಾವಳಿಗೆ ಪಾರ್ಟ್-1 ತೆರೆಗೆ

ಭವ್ಯ ಸೆಟ್‌ನಲ್ಲಿ ಸೀತಾ ಸ್ವಯಂವರ

ಸೀತಾ ಸ್ವಯಂವರದ ದೃಶ್ಯಕ್ಕಾಗಿ ಮುಂಬೈನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಅರಮನೆಯ ಪ್ರಾಂಗಣ, ಸುಂದರವಾದ ಬಾಲ್ಕನಿಗಳು ಹಾಗೂ ಹೂವುಗಳಿಂದ ಅಲಂಕೃತವಾದ ರಂಗೋಲಿ ವಿನ್ಯಾಸ ಈ ಸೆಟ್​​ನ ಹೈಲೈಟ್. ಮಿಥಿಲಾ ಸಾಮ್ರಾಜ್ಯದ ವೈಭವವನ್ನು ಮರುಸೃಷ್ಟಿಸಲು ನೂರಾರು ಜೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಶಿವಧನುಸ್ಸು ಎತ್ತಲು ಬರ್ತಾರೆ ಯಶ್

ಈ ದೃಶ್ಯದಲ್ಲಿ ಯಶ್ (ರಾವಣ) ಅವರ ಎಂಟ್ರಿ ಅತ್ಯಂತ ಪವರ್‌ಫುಲ್ ಆಗಿರಲಿದೆ ಎನ್ನಲಾಗಿದೆ. ಸೀತಾ ಸ್ವಯಂವರಕ್ಕೆ ರಾವಣನ ಆಗಮನ ಹಾಗೂ ಆತ ‘ಶಿವಧನುಸ್ಸು’ ಎತ್ತಲು ಪ್ರಯತ್ನಿಸಿ ವಿಫಲವಾಗುವ ದೃಶ್ಯವನ್ನು ಈಗ ಚಿತ್ರೀಕರಿಸಲಾಗುತ್ತಿದೆ. ರಾವಣ ಸಭೆಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ವಾತಾವರಣವೇ ಬದಲಾಗುವ ರೀತಿಯಲ್ಲಿ ಈ ಸೀನ್ ವಿನ್ಯಾಸ ಮಾಡಲಾಗಿದೆಯಂತೆ. ಸೀತೆಯ ಪಾತ್ರ ಮಾಡುತ್ತಿರುವ ಸಾಯಿ ಪಲ್ಲವಿ ಶೀಘ್ರದಲ್ಲೇ ಈ ಶೆಡ್ಯೂಲ್​​ಗೆ ಲಭ್ಯವಾಗಲಿದ್ದಾರೆ. ಆದರೆ, ಈ ಶೆಡ್ಯೂಲ್‌ನಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಭಾಗಿಯಾಗುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ‘ಉತ್ತರ ರಾಮಾಯಣ’ದ ಕುಶ ಈಗ 1400 ಕೋಟಿ ರೂ. ಕಂಪನಿಯ ಒಡೆಯ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಬಂದರೆ, ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ. ರಾಮನಾಗಿ ರಣಬೀರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಪವರ್​ಫುಲ್ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಉಳಿದಂತೆ ಸನ್ನಿ ಡಿಯೋಲ್ (ಹನುಮಂತ), ಅರುಣ್ ಗೋವಿಲ್ (ದಶರಥ), ರಾಕುಲ್ ಪ್ರೀತ್ ಸಿಂಗ್ (ಶೂರ್ಪನಖಿ) ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us