ಮೆಸ್ಸಿ ಫಿಫಾ ವಿಶ್ವಕಪ್ ಗೆದ್ದಿದ್ದನ್ನು ಸಂಭ್ರಮಿಸಿದ ರಣಬೀರ್ ಕಪೂರ್-ಆಲಿಯಾ ಭಟ್; ನಡೆಯಿತು ಭರ್ಜರಿ ಪಾರ್ಟಿ  

| Updated By: ರಾಜೇಶ್ ದುಗ್ಗುಮನೆ

Updated on: Dec 19, 2022 | 9:47 AM

ಪಂದ್ಯ ನೋಡಲು ರಣಬೀರ್ ಕಪೂರ್, ಆಲಿಯಾ ಭಟ್​ ಮೊದಲಾದ ಸೆಲೆಬ್ರಿಟಿಗಳು ಬಾಲಿವುಡ್​ ನಿರ್ದೇಶಕ ಲವ್ ರಂಜನ್ ಅವರ ಮುಂಬೈ ನಿವಾಸಕ್ಕೆ ತೆರಳಿದ್ದಾರೆ.

ಮೆಸ್ಸಿ ಫಿಫಾ ವಿಶ್ವಕಪ್ ಗೆದ್ದಿದ್ದನ್ನು ಸಂಭ್ರಮಿಸಿದ ರಣಬೀರ್ ಕಪೂರ್-ಆಲಿಯಾ ಭಟ್; ನಡೆಯಿತು ಭರ್ಜರಿ ಪಾರ್ಟಿ  
Follow us on

ರಣಬೀರ್ ಕಪೂರ್ (Ranbir Kapoor) ಅವರು ಫುಟ್​ಬಾಲ್ ದಿಗ್ಗಜ ಲಿಯೊನಲ್ ಮೆಸ್ಸಿ (Lionel Messi) ಅವರ ದೊಡ್ಡ ಫ್ಯಾನ್. ಭಾನುವಾರ (ಡಿಸೆಂಬರ್ 17) ನಡೆದ ಫಿಫಾ ವಿಶ್ವಕಪ್ 2022 ಅನ್ನು ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಗೆದ್ದಿದೆ. ಮೆಸ್ಸಿ ಫ್ಯಾನ್ಸ್ ಈ ಗೆಲುವನ್ನು ಸಂಭ್ರಮಿಸಿದ್ದಾರೆ. ಇದಕ್ಕೆ ರಣಬೀರ್ ಕಪೂರ್ ಕೂಡ ಹೊರತಾಗಿಲ್ಲ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿ ಕೂಡ ಲಿಯೊನಲ್ ಮೆಸ್ಸಿ ಗೆಲುವನ್ನು ಸಂಭ್ರಮಿಸಿದೆ.

ಕತಾರ್‌ನ ಲುಸೇಲ್ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ 2022ನ ಅಂತಿಮ ಪಂದ್ಯ ನಡೆಯಿತು. ಎರಡೂ ತಂಡಗಳು ತಲಾ ಮೂರು ಗೋಲ್ ಬಾರಿಸಿದರಿಂದ ಪೆನಾಲ್ಟಿ ಶೂಟ್-ಔಟ್‌ ನಡೆಸಲಾಯಿತು. ಈ ವೇಳೆ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಅರ್ಜೆಂಟೀನಾ ಸೋಲಿಸಿದೆ. ಈ ಮೂಲಕ ಅರ್ಜೆಂಟೀನಾ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿದೆ. ಇದಕ್ಕೆ ರಣಬೀರ್ ಪಾರ್ಟಿ ಮಾಡಿದ್ದಾರೆ.

ಪಂದ್ಯ ನೋಡಲು ರಣಬೀರ್ ಕಪೂರ್, ಆಲಿಯಾ ಭಟ್​ ಮೊದಲಾದ ಸೆಲೆಬ್ರಿಟಿಗಳು ಬಾಲಿವುಡ್​ ನಿರ್ದೇಶಕ ಲವ್ ರಂಜನ್ ಅವರ ಮುಂಬೈ ನಿವಾಸಕ್ಕೆ ತೆರಳಿದ್ದಾರೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರು ಅರ್ಜೆಂಟೀನಾ ಜೆರ್ಸಿ ತೊಟ್ಟಿದ್ದರು. ಮನೆಯಿಂದ ಹೊರ ಬರುತ್ತಿರುವ ಸಂದರ್ಭದ ವಿಡಿಯೋ, ಫೋಟೋ ವೈರಲ್ ಆಗಿದೆ. ಲವ್ ರಂಜನ್ ನಿವಾಸದಲ್ಲಿ ಈ ದಂಪತಿ ಪಾರ್ಟಿ ಮಾಡಿದ್ದಾರೆ.

ಇದನ್ನೂ ಓದಿ
ಬೈಕಾಟ್ ಟ್ರೆಂಡ್​ಗೆ ಸೆಡ್ಡು ಹೊಡೆದ ‘ಬ್ರಹ್ಮಾಸ್ತ್ರ’; ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ರಣಬೀರ್​-ಆಲಿಯಾ ಚಿತ್ರ
‘ಇದು ಎಕ್ಸ್​​ಟ್ರಾ ಬಜೆಟ್​​ನ ನಾಗಿಣಿ ಧಾರಾವಾಹಿ’; ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದವರು ಹೀಗಂದ್ರು
KRK ಬಂಧನಕ್ಕೆ ‘ಬ್ರಹ್ಮಾಸ್ತ್ರ’ ಟೀಮ್​ ಕಾರಣ ಎಂದು ಆರೋಪಿಸಿದ ನೆಟ್ಟಿಗರು; ಏನಿದು ಹುನ್ನಾರ?
ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?

ರಣಬೀರ್ ಕಪೂರ್ ಅವರಿಗೆ ಈ ವರ್ಷ ವಿಶೇಷವಾಗಿದೆ. ಅವರ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಸೂಪರ್ ಹಿಟ್ ಆಗಿದೆ. ಬಾಲಿವುಡ್​ನಲ್ಲಿ ಸಾಲು ಸಾಲು ಸಿನಿಮಾಗಳು ಸೋಲುತ್ತಿರುವ ಈ ಸಂದರ್ಭದಲ್ಲಿ ರಣಬೀರ್ ಸಿನಿಮಾ ಗೆದ್ದಿದೆ. ಇದರ ಜತೆಗೆ ರಣಬೀರ್​ಗೆ ಮಗಳು ಜನಿಸಿದ್ದಾಳೆ. ಇದು ಕೂಡ ರಣಬೀರ್ ಕುಟುಂಬದ ಖುಷಿಯನ್ನು ಹೆಚ್ಚಿಸಿದೆ. ಮಗಳಿಗೆ ರಹಾ ಎಂದು ಹೆಸರಿಟ್ಟಿದ್ದಾರೆ. ಫುಟ್​ಬಾಲ್​ ಜೆರ್ಸಿ ಮೇಲೆ ಹೆಸರು ಬರೆದು ಈ ಘೋಷಣೆ ಮಾಡಿದ್ದರು ರಣಬೀರ್. ಈಗ ನೆಚ್ಚಿನ ಆಟಗಾರ ವಿಶ್ವಕಪ್ ಎತ್ತಿರುವ ಬಗ್ಗೆ ರಣಬೀರ್​ಗೆ ಖುಷಿ ಇದೆ.

ಇದನ್ನೂ ಓದಿ: ಆಲಿಯಾ ಎಲ್ಲಿದ್ದಾಳೆ ಎಂದು ತಿಳಿಯದೆ ಊಟ ಮಾಡಲ್ಲ, ಬಾತ್​ರೂಮ್ ಹೋಗಲ್ಲ ಎಂದ ರಣಬೀರ್ ಕಪೂರ್

ಸದ್ಯ ‘ಅನಿಮಲ್​’ ಮೊದಲಾದ ಚಿತ್ರಗಳ ಕೆಲಸಗಳಲ್ಲಿ ರಣಬೀರ್ ಬ್ಯುಸಿ ಇದ್ದಾರೆ. ‘ಬ್ರಹ್ಮಾಸ್ತ್ರ 2’ ಚಿತ್ರದಲ್ಲಿ ರಣಬೀರ್ ನಟಿಸುತ್ತಾರಾ ಎಂಬ ಕುತೂಹಲ ಕೆಲವರಲ್ಲಿ ಇದೆ. ಮಗು ಜನಿಸಿದ ನಂತರ ಆಲಿಯಾ ಭಟ್ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಶೀಘ್ರದಲ್ಲೇ ಅವರು ಕಂಬ್ಯಾಕ್ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ