ರಣಬೀರ್ ಕಪೂರ್ ಹಾಗೂ ಆಮಿರ್ ಖಾನ್ (Aamir Khan) ಇತ್ತೀಚೆಗೆ ಜಾಹೀರಾತೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಆಮಿರ್ ಖಾನ್ ಅವರು ರಣಬೀರ್ ಕಪೂರ್ನ ರಣಬೀರ್ ಸಿಂಗ್ ಎಂದು ಕರೆಯುತ್ತಾರೆ. ಇದಕ್ಕೆ ರಣಬೀರ್ ಸಿಟ್ಟಾಗುತ್ತಾರೆ. ಈ ರೀತಿಯಲ್ಲಿ ಜಾಹೀರಾತು ಮೂಡಿ ಬಂದಿತ್ತು. ಈಗ ರಣಬೀರ್ ಕಪೂರ್ ಅವರೇ ತಮ್ಮ ಹೆಸರನ್ನು ತಪ್ಪಾಗಿ ಕರೆದುಕೊಂಡಿದ್ದಾರೆ! ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಣಬೀರ್ ಕಪೂರ್ ಬಳಿ ಬರುವ ಆಮಿರ್ ಖಾನ್ ಅವರು ರ‍್ಯಾಪಿಡ್ ಫೈಯರ್ ನಡೆಸುತ್ತಾರೆ. ಇದರಲ್ಲಿ ‘ಭಾರತದ ಫೇಮಸ್ ವ್ರೆಸ್ಲರ್ ಹೆಸರನ್ನು’ ಹೇಳಿ ಎಂಬ ಆಮಿರ್ ಪ್ರಶ್ನೆಗೆ ‘ದಾರಾ ಸಿಂಗ್’ ಎನ್ನುತ್ತಾರೆ, ಫ್ಲೈಯಿಂಗ್ ಸಿಖ್ಗೆ ‘ಮಿಲ್ಕಾ ಸಿಂಗ್ ಎನ್ನುತ್ತಾರೆ. ಕೊನೆಯಲ್ಲಿ ಸಿಂಗ್ ಉತ್ತರ ಬರುವ ಅನೇಕ ಪ್ರಶ್ನೆಗಳನ್ನು ಆಮಿರ್ ಖಾನ್ ಕೇಳಿದ್ದಾರೆ.
ಸಿಂಗ್.. ಸಿಂಗ್ ಎಂದು ಉತ್ತರ ಹೇಳುತ್ತಾ.. ‘ನಿಮ್ಮ ಹೆಸರು’ ಎಂದು ಕೇಳಿದಾಗ ರಣಬೀರ್ ಕಪೂರ್ ಎನ್ನುವ ಬದಲು ರಣಬೀರ್ ಸಿಂಗ್ ಎನ್ನುತ್ತಾರೆ. ಆಗ ಆಮಿರ್ ಖಾನ್ ಅವರು ಸಾಕಷ್ಟು ನಕ್ಕಿದ್ದಾರೆ. ಇದು ಫನ್ಗಾಗಿ ಮಾಡಿದ ವಿಡಿಯೋ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
One more epic ad from #AamirKhan and #RanbirKapoor 😂😂
— Aavishkar (@aavishhkar) March 18, 2025
ಇತ್ತೀಚೆಗೆ ಡ್ರೀಮ್ 11 ಜಾಹೀರಾತಿನಲ್ಲಿ ರೋಹಿತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ, ರಣಬೀರ್ ಕಪೂರ್, ಆಮಿರ್ ಖಾನ್ ಸೇರಿದಂತೆ ಅನೇಕರು ಇದ್ದರು. ಈಗ ವೈರಲ್ ಆಗಿರೋದು ಜಾಹೀರಾತಿನ ಮುಂದುವರಿದ ಭಾಗದ ರೀತಿ ಇದು ಮೂಡಿ ಬಂದಿದೆ.
ಇದನ್ನೂ ಓದಿ: ಆಮಿರ್ ಖಾನ್ ಅವರ 7 ಲವ್ಸ್ಟೋರಿಗಳು; ಈ ಬಗ್ಗೆ ನಿಮಗೆ ಗೊತ್ತೇ?
ಸಿನಿಮಾ ವಿಚಾರಕ್ಕೆ ಬರೋದಾದರೆ ಆಮಿರ್ ಖಾನ್ ಅವರು ‘ಸಿತಾರೇ ಜಮೀನ್ಪರ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದಲ್ಲಿ ತೊಡಗಿಕೊಂಡಿದ್ದು, ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲೂ ಅವರು ನಟಿಸಬೇಕಿದೆ. ಈ ಸಿನಿಮಾಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.