ಆಮಿರ್ ಖಾನ್ ಅವರ 7 ಲವ್ಸ್ಟೋರಿಗಳು; ಈ ಬಗ್ಗೆ ನಿಮಗೆ ಗೊತ್ತೇ?
Aamir Khan: ನಟ ಆಮಿರ್ ಖಾನ್ ಬಾಲಿವುಡ್ ನ ಸ್ಟಾರ್ ನಟ. ಅದ್ಭುತವಾದ ಸಿನಿಮಾಗಳನ್ನು ಅವರು ನೀಡಿದ್ದಾರೆ. ಮಿಸ್ಟರ್ ಫರ್ಪೆಕ್ಷನಿಸ್ಟ್ ಎಂದು ಅವರನ್ನು ಕರೆಯಲಾಗುತ್ತದೆ. ಆದರೆ ಅವರ ಖಾಸಗಿ ಜೀವನ ಮಾತ್ರ ಪರ್ಫೆಕ್ಟ್ ಆಗಿಲ್ಲ. ಅವರ ಜೀವನದಲ್ಲಿ ಹಲವು ಮಹಿಳೆಯರು ಬಂದು ಹೋಗಿದ್ದಾರೆ. ಅವರ ಏಳು ಲವ್ ಸ್ಟೋರಿಗಳ ಪಟ್ಟಿ ಇಲ್ಲಿದೆ.

ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್, ನಟ ಆಮಿರ್ ಖಾನ್ (Aamir Khan) ಪ್ರಸ್ತುತ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ತಮ್ಮ 60 ನೇ ಹುಟ್ಟುಹಬ್ಬದಂದು, ಆಮಿರ್ ತಮ್ಮ ಹೊಸ ಸಂಬಂಧವನ್ನು ಎಲ್ಲರಿಗೂ ಬಹಿರಂಗಪಡಿಸಿದ್ದಾರೆ. ಅವರು ತಮ್ಮ 25 ವರ್ಷಗಳ ಗೆಳತಿ ಗೌರಿ ಜೊತೆ ಸಂಬಂಧ ಹೊಂದಿರುವುದಾಗಿ ಪಾಪರಾಜಿಗಳಿಗೆ ಘೋಷಿಸಿದರು. ‘ಗೌರಿ ಮತ್ತು ನಾನು ಕಳೆದ 25 ವರ್ಷಗಳಿಂದ ಒಳ್ಳೆಯ ಸ್ನೇಹಿತರು. ಈಗ ನಾವು ಪರಸ್ಪರ ಜೊತೆಯಾಗಿದ್ದೇವೆ. ನಾವು ಕಳೆದ ಒಂದೂವರೆ ವರ್ಷದಿಂದ ಒಟ್ಟಿಗೆ ಇದ್ದೇವೆ’ ಎಂದು ಅವರು ಹೇಳಿದರು. ಈ ಸಮಯದಲ್ಲಿ, ಆಮಿರ್ ಅವರನ್ನು ಅವರ ಮೂರನೇ ಮದುವೆಯ ಬಗ್ಗೆಯೂ ಕೇಳಲಾಯಿತು. ಅವರು ನಗುತ್ತಾ ಹೇಳಿದರು, ‘ಇದು 60 ನೇ ವಯಸ್ಸಿನಲ್ಲಿ ಸೂಕ್ತವೋ ಇಲ್ಲವೋ ನನಗೆ ಗೊತ್ತಿಲ್ಲ’ ಎಂದಿದ್ದಾರೆ.
ಆಮಿರ್ ಖಾನ್ ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದಾರೆ. ಅವರು ಮೊದಲು ರೀನಾ ದತ್ತಾ ಅವರನ್ನು ವಿವಾಹವಾದರು. ಇಬ್ಬರಿಗೂ ಐರಾ ಮತ್ತು ಜುನೈದ್ ಮಕ್ಕಳಿದ್ದಾರೆ. 15 ವರ್ಷಗಳ ಮದುವೆಯ ನಂತರ ಅವರು ವಿಚ್ಛೇದನ ಪಡೆದರು. ಅದಾದ ನಂತರ, ಆಮಿರ್ ಕಿರಣ್ ರಾವ್ ಅವರನ್ನು ಮತ್ತೆ ವಿವಾಹವಾದರು. ಕಿರಣ್ ರಾವ್ ಜೊತೆ ಆಮಿರ್ ದಾಂಪತ್ಯ ಜೀವನ ಕೂಡ 15 ವರ್ಷಗಳ ಕಾಲ ನಡೆಯಿತು. ಇಬ್ಬರಿಗೂ ಆಜಾದ್ ಎಂಬ ಮಗನಿದ್ದಾನೆ. ಇದಲ್ಲದೆ, ಆಮಿರ್ ಹೆಸರು ಇತರ ಕೆಲವು ನಟಿಯರೊಂದಿಗೆ ಕೂಡ ತಳುಕು ಹಾಕಿಕೊಂಡಿತ್ತು.
ನಟಿ ಮಮತಾ ಕುಲಕರ್ಣಿ ಜೊತೆ ಆಮಿರ್ ಅವರ ಪ್ರಣಯದ ಬಗ್ಗೆ ಮಾತುಗಳು ಕೇಳಿಬಂದವು . ಒಂದು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರ ನಡುವೆ ಪ್ರೇಮ ಸಂಬಂಧ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಆದರೆ, ಆ ಸಮಯದಲ್ಲಿ ಆಮಿರ್ ವಿವಾಹಿತನಾಗಿದ್ದರಿಂದ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಮಮತಾ ನಂತರ, ಆಮಿರ್ ಮತ್ತು ಪೂಜಾ ಭಟ್ ಅವರ ಸಂಬಂಧದ ಬಗ್ಗೆಯೂ ಬಲವಾದ ಚರ್ಚೆಗಳು ನಡೆದವು.
ಇದನ್ನೂ ಓದಿ:ಆಮಿರ್ ಖಾನ್ ಹೊಸ ಪ್ರೇಯಸಿ ಗೌರಿ; ಸತ್ಯ ಒಪ್ಪಿಕೊಂಡ ನಟ
ಆ ಸಮಯದಲ್ಲಿ ಆಮಿರ್ ಇನ್ನೂ ಮದುವೆಯಾಗಿದ್ದರು. ಆಮಿರ್ ಅವರ ಹೆಸರು ಬ್ರಿಟಿಷ್ ಪತ್ರಕರ್ತೆ ಜೆಸ್ಸಿಕಾ ಹೈನ್ಸ್ ಅವರೊಂದಿಗೆ ಕೂಡ ಸಂಬಂಧ ಹೊಂದಿತ್ತು. ಜೆಸ್ಸಿಕಾ ಜೊತೆಗಿನ ಸಂಬಂಧದಿಂದಾಗಿ ಆಮಿರ್ ಖಾನ್ ವಿವಾದಕ್ಕೆ ಸಿಲುಕಿದ್ದರು. ಏಕೆಂದರೆ ಆ ಸಮಯದಲ್ಲಿ, ಬ್ರಿಟಿಷ್ ಪತ್ರಕರ್ತೆ ಜೆಸ್ಸಿಕಾ ಅವರು ಆಮಿರ್ ಖಾನ್ ತಮ್ಮ ಮಗುವಿನ ತಂದೆ ಎಂದು ಹೇಳಿಕೊಂಡಿದ್ದರು.
ಆಮಿರ್ ಖಾನ್ ಅವರ ಹೆಸರು ರಾಚೆಲ್ ಶೈಲಿಗೂ ತಳುಕು ಹಾಕಿಕೊಂಡಿತ್ತು. ಇಬ್ಬರೂ ‘ಲಗಾನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಕಿರಣ್ ರಾವ್ ಅವರಿಂದ ವಿಚ್ಛೇದನ ಪಡೆದ ನಂತರ, ‘ದಂಗಲ್’ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್ ಅವರೊಂದಿಗಿನ ಆಮಿರ್ ಅವರ ಸಂಬಂಧದ ಬಗ್ಗೆ ಬಿಸಿ ಚರ್ಚೆಗಳು ನಡೆದವು. ವಾಸ್ತವವಾಗಿ, ಫಾತಿಮಾ ಕಾರಣದಿಂದ ಆಮಿರ್ ಕಿರಣ್‌ಗೆ ವಿಚ್ಛೇದನ ನೀಡಿದರು ಎಂದು ಹೇಳಲಾಗಿತ್ತು. ಫಾತಿಮಾ ಆಮಿರ್ ಗಿಂತ 26 ವರ್ಷ ಚಿಕ್ಕವರು. ’ದಂಗಲ್’ ಚಿತ್ರದಲ್ಲಿ ಫಾತಿಮಾ ಆಮಿರ್ ಅವರ ತೆರೆಯ ಮೇಲಿನ ಮಗಳ ಪಾತ್ರವನ್ನು ನಿರ್ವಹಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



